ಕರ್ನಾಟಕ

karnataka

ETV Bharat / entertainment

ಇಂದು ಸಂಜೆ ದಳಪತಿ ವಿಜಯ್​ ಕೊನೆಯ ಸಿನಿಮಾದ ನಟರ ಹೆಸರು ಘೋಷಿಸಲಿದೆ ಕನ್ನಡದ 'ಕೆವಿಎನ್​​' - Thalapathy 69 - THALAPATHY 69

ದಕ್ಷಿಣ ಚಿತ್ರರಂಗದ ಹೆಸರಾಂತ ನಟ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾದ ನಟ, ನಟಿಯರ ಹೆಸರು ಇಂದು ಸಂಜೆ ಘೋಷಣೆಯಾಗಲಿದೆ. ಸೌತ್​ ಸೂಪರ್​ ಸ್ಟಾರ್​ನ ಬಹುನಿರೀಕ್ಷಿತ ಚಿತ್ರವನ್ನು ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಕೆವಿಎನ್​​' ನಿರ್ಮಿಸುತ್ತಿರುವುದು ವಿಶೇಷ.

Vijay Thalapathy 69
ದಳಪತಿ ವಿಜಯ್​ ಕೊನೆಯ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಳ (ANI, KVN Productions)

By ETV Bharat Karnataka Team

Published : Oct 1, 2024, 3:58 PM IST

ಸೌತ್​ ಸೂಪರ್​ ಸ್ಟಾರ್​​ ದಳಪತಿ ವಿಜಯ್ ನಟನೆಯ ಮುಂದಿನ ಸಿನಿಮಾ ಸುತ್ತಲಿನ ಕ್ರೇಜ್​​​ ಜೋರಾಗಿದೆ. ಮುಂದಿನ ಕೆಲವೇ ಕ್ಷಣಗಳಲ್ಲಿ ಚಿತ್ರ ತಯಾರಕರು ಅಭಿಮಾನಿಗಳು, ಪ್ರೇಕ್ಷಕರಿಗೆ ಬಿಗ್​ ಅಪ್ಡೇಟ್​​ ಕೊಡಲು ತಯಾರಿ ನಡೆಸುತ್ತಿದ್ದಾರೆ. 'ದಳಪತಿ 69' ಪ್ರೊಜೆಕ್ಟ್​ ಹಿಂದಿರುವ ಕೆವಿಎನ್ ಪ್ರೊಡಕ್ಷನ್ಸ್, ಸಂಜೆ ಕಾಸ್ಟ್ ರಿವೀಲ್​​ ಮಾಡಲಾಗುವುದು ಎಂದು ತಿಳಿಸಿದೆ.

ಈ ವಾರ ಚಿತ್ರೀಕರಣ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, 'ದಳಪತಿ 69' ಸುತ್ತಲಿನ ಅಂತೆಕಂತೆ, ನಿರೀಕ್ಷೆಗಳು ಹೆಚ್ಚಾಗಿವೆ. ಚಿತ್ರೀಕರಣ ಪ್ರಾರಂಭಕ್ಕೂ ಮುನ್ನ ನಿರ್ಮಾಪಕರು ಪಾತ್ರವರ್ಗವನ್ನು ಘೋಷಿಸಲು ನಿರ್ಧರಿಸಿದ್ದಾರೆ. ಇಡೀ ಪಾತ್ರವನ್ನು ಒಂದೇ ಬಾರಿಗೆ ಅನಾವರಣಗೊಳಿಸುವ ಬದಲು, ಮುಂದಿನ ಮೂರು ದಿನಗಳಲ್ಲಿ ಒಬ್ಬರ ಬಳಿಕ ಒಬ್ಬರ ಹೆಸರನ್ನು ಬಹಿರಂಗಪಡಿಸಲು ಯೋಜಿಸಿದ್ದಾರೆ. ಸಂಜೆ 5ಕ್ಕೆ ಮೊದಲ ಅನೌನ್ಸ್​ಮೆಂಟ್​​ ಹೊರಬೀಳಲಿದೆ.

ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಟೀಸರ್‌ವೊಂದನ್ನು ಹಂಚಿಕೊಂಡಿದೆ. ಜೊತೆಗೆ, 'ಹರ್ಡ್ ಆಫ್​ 'ಉಲ್ಲ ವೆಲಿಯಾ' ಗೇಮ್​? ನಿಮ್ಮ ಊಹೆಗಳು ಸರಿಯಾಗಿವೆಯೇ ಎಂಬುದನ್ನು ನೋಡೋಣ. ಇಂದು ಸಂಜೆ 5 ಗಂಟೆಯಿಂದ ದಳಪತಿ 69ರ ಕಲಾವಿದರ ಹೆಸರು ರಿವೀಲ್​​ ಆಗಲಿದೆ' ಎಂದು ಬರೆದುಕೊಂಡಿದೆ. ಈ ಪೋಸ್ಟ್​ ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟುಗೊಳಿಸಿದ್ದು, ಕಾಸ್ಟ್ ಹೇಗಿರಬಹುದೆಂದು ಊಹಿಸಲು ಅಭಿಮಾನಿಗಳು, ಸಿನಿಪ್ರಿಯರು ಶುರುಹಚ್ಚಿಕೊಂಡಿದ್ದಾರೆ.

ದಳಪತಿ 69ರಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ಪ್ರಮುಖ ಖಳನಾಯಕನಾಗಿ ನಟಿಸಲಿದ್ದಾರೆ ಎಂಬ ವದಂತಿಗಳು ಹೆಚ್ಚಿವೆ. ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿದ್ದರೂ ಕೂಡಾ, ಸಿನಿಮಾ ಇಂಡಸ್ಟ್ರಿ ಮೂಲಗಳು ಬಾಬಿ ಡಿಯೋಲ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಸೂಚಿಸಿದ್ದಾರೆ. ಈ ಊಹಾಪೋಹಗಳು ನಿಜವಾದರೆ, ಈ ಚಿತ್ರ ಮೂಲಕ ಬಾಬಿ ಡಿಯೋಲ್​​ ಮತ್ತೊಮ್ಮೆ ತಮಿಳು ಚಿತ್ರರಂಗ ಪ್ರವೇಶಿಸಲಿದ್ದಾರೆ. ಮುಂದಿನ ಬಹುನಿರೀಕ್ಷಿತ ಚಿತ್ರ 'ಕಂಗುವ'ದಲ್ಲಿ ಡಿಯೋಲ್​​ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೌತ್​ ಸೂಪರ್​ ಸ್ಟಾರ್​ ಸೂರ್ಯ ವಿರುದ್ಧ ಆರ್ಭಟಿಸಲಿದ್ದು, ದಳಪತಿ 69ರ ಅಧಿಕೃತ ಅನೌನ್ಸ್​​​ಮೆಂಟ್​ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.​​​

ಇದನ್ನೂ ಓದಿ:3 ದಿನಕ್ಕೆ 300 ಕೋಟಿ ಕಲೆಕ್ಷನ್​ ಮಾಡಿದ 'ದೇವರ' ಮೊದಲ ಸೋಮವಾರ ಗಳಿಸಿದ್ದೆಷ್ಟು ಗೊತ್ತಾ? - Devara Collection Day 4

ನಿರ್ದೇಶಕ ಹೆಚ್.ವಿನೋತ್ ಈ ವಾರಾಂತ್ಯದಲ್ಲಿ ದಳಪತಿ 69 ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ ಎಂದು ವರದಿಯಾಗಿದೆ. ದಳಪತಿ 69 ವಿಜಯ್‌ ಸಿನಿಮಾ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಏಕೆಂದರೆ ಅವರು ರಾಜಕೀಯ ಕ್ಷೇತ್ರಕ್ಕೆ ಸಂಪೂರ್ಣವಾಗಿ ಕಾಲಿಡುವ ಮೊದಲು ಬರುತ್ತಿರುವ ಸಿನಿಮಾ ಮತ್ತು ಇದು ಅವರ ಕೊನೆಯ ಚಿತ್ರ. ಹಾಗಾಗಿ, ನಿರೀಕ್ಷೆ, ಕುತೂಹಲಗಳು ಬೆಟ್ಟದಷ್ಟಿವೆ.

ಇದನ್ನೂ ಓದಿ:ಚಿತ್ರಮಂದಿರದಲ್ಲಿ ದಳಪತಿ ವಿಜಯ್ 'ಗೋಟ್​' ವೀಕ್ಷಿಸಿಲ್ವಾ?: ಹಾಗಾದ್ರೆ ಒಟಿಟಿಯಲ್ಲಿ ನೋಡಲು ರೆಡಿಯಾಗಿ - GOAT OTT Release Date

ಸೆಪ್ಟಂಬರ್​ 14ರಂದು ವಿಜಯ್​​ ಕೊನೆ ಸಿನಿಮಾದ ಫಸ್ಟ್ ಲುಕ್​ ಹೊರಬಿದ್ದಿತ್ತು. ಸಿನಿಮಾ ಅನೌನ್ಸ್​ಮೆಂಟ್​ ಪೋಸ್ಟರ್​​ನಲ್ಲಿ ಪಂಜಿನ ಚಿತ್ರವಿತ್ತು. ಹೆಚ್.ವಿನೋತ್​ ನಿರ್ದೇಶನದ ಸಿನಿಮಾಗೆ ಖ್ಯಾತ ಗಾಯಕ ಅನಿರುಧ್ ಸಂಗೀತವಿರಲಿದೆ. ರಾಕಿಂಗ್​ ಸ್ಟಾರ್ ಯಶ್​​ ಮುಖ್ಯಭೂಮಿಕೆಯ ಟಾಕ್ಸಿಕ್ ನಿರ್ಮಿಸುತ್ತಿರುವ ವೆಂಕಟ್​​ ಕೆ.ನಾರಾಯಣ್​ ಈ ಚಿತ್ರವನ್ನು ನಿರ್ಮಿಸುತ್ತಿದ್ದು,​ ಜಗದೀಶ್​​ ಪಳನಿಸ್ವಾಮಿ ಮತ್ತು ಲೋಹಿತ್​​ ಎನ್​.ಕೆ. ಸಹ ನಿರ್ಮಾಪಕರು. ಬಹುನಿರೀಕ್ಷಿತ ಚಿತ್ರ 2025ರ ಅಕ್ಟೋಬರ್​​​ಗೆ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

ABOUT THE AUTHOR

...view details