ಕರಾವಳಿಯಲ್ಲಿ ಹೆಚ್ಚು ಆಚರಿಸಲ್ಪಡುವ ದೈವಾರಾಧನೆಯ ಕಥೆಯನ್ನೊಳಗೊಂಡು ತೆರೆಗೆ ಬಂದ 'ಕಾಂತಾರ' ಸಿನಿಮಾ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಅದರಂತೆ, ದೈವಾರಾಧನೆ ಕುರಿತು ಚಂದನವನದಲ್ಲಿ ಬರುತ್ತಿರುವ ಮತ್ತೊಂದು ಸಿನಿಮಾವೇ 'ಕೊರಗಜ್ಜ'. ಭಾರಿ ಕುತೂಹಲ ಮೂಡಿಸಿರುವ ಸುಧೀರ್ ಅತ್ತಾವರ್ ನಿರ್ದೇಶನದ ಈ ಚಿತ್ರದ ಹಾಡುಗಳಿಗೆ ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಸೇರಿ ದೇಶದ ಘಟಾನುಘಟಿ ಗಾಯಕರುಗಳು ಕಂಠದಾನ ಮಾಡಿದ್ದಾರೆ.
ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿ ಮೂಡಿಬರುತ್ತಿರುವ 'ಕೊರಗಜ್ಜ'ನ ಎರಡು ಹಾಡುಗಳಿಗೆ ಕಳೆದ ವಾರವಷ್ಟೇ ಶ್ರೇಯಾ ಘೋಷಾಲ್ ರೆಕಾರ್ಡಿಂಗ್ ಮುಗಿಸಿದ್ದರು. ಈ ಹಿಂದೆ ಸುಧೀರ್ ರಚಿಸಿದ್ದ, ಶ್ರೇಯಾ ಘೋಷಾಲ್ ಕಂಠಸಿರಿಯಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ 'ಎಲ್ಲೋ ಜಿನುಗಿರುವ ನೀರು...' ಹಾಡನ್ನು ನಿರ್ಮಾಪಕ ತ್ರಿವಿಕ್ರಮ ಸಫಲ್ಯ ಅವರ ಸಮ್ಮುಖದಲ್ಲಿ ನಿರ್ದೇಶಕ ಸುಧೀರ್ ಮತ್ತು ಶ್ರೇಯಾ ಹಾಡಿ, ಸಿಹಿನೆನಪನ್ನು ಮೆಲುಕು ಹಾಕಿದ್ದರು. "ಕನ್ನಡ ಸಿನಿಮಾ ಹಾಡುಗಳ ಸಾಹಿತ್ಯ ಉತ್ತಮ ಮಟ್ಟದಲ್ಲಿವೆ. ಹಾಗಾಗಿಯೇ ಕನ್ನಡ ಹಾಡುಗಳಿಗೆ ಹೆಚ್ಚು ಆದ್ಯತೆ ನೀಡುತ್ತೇನೆ" ಎಂದಿದ್ದರು.
ಖ್ಯಾತ ಗಾಯಕರ ಧ್ವನಿಯಲ್ಲಿ 'ಕೊರಗಜ್ಜ' ಸಿನಿಮಾ ಹಾಡುಗಳು (ETV Bharat) ಇದನ್ನೂ ಓದಿ:ಬಿಗ್ ಬಾಸ್ 'ಖಳನಾಯಕ'ನಾದ ರಜತ್: ಚೈತ್ರಾ ಕುಂದಾಪುರಗೆ 'ಸುಳ್ಳಿ' ಪಟ್ಟ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ
'ಕೊರಗಜ್ಜ' ಚಿತ್ರದ ಗಾಳಿಗಂಧ ಹಾಡನ್ನು ಶ್ರೇಯಾ ಅವರೊಂದಿಗೆ ಅದರ 'ಮೇಲ್ ವರ್ಷನ್' ಅನ್ನು ಸೋನು ನಿಗಮ್ ಮತ್ತು ಶಾನ್ ಹಾಡಲಿದ್ದಾರೆ. ಉಳಿದಂತೆ, 'ಪೋರ್ಕುಳಿ ಪೆರತದಲಿ' ಎನ್ನುವ ಹಾಡನ್ನು ಸುನಿಧಿ ಚೌಹಾನ್ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಹಾಡಿದ್ದಾರೆ. 'ವಾಜೀ ಸವಾರಿಯಲಿ' ಮತ್ತು 'ಜಾವಂದ ಕುಲದ' ಎನ್ನುವ ಹಾಡುಗಳನ್ನು ಜಾವೆದ್ ಅಲಿ ಹಾಡಿದ್ದಾರೆ. 'ತೌಳವ ದೇಶೇ' ಎನ್ನುವ ಏಳು ನಿಮಿಷಗಳ ವಿಶೇಷವಾದ ಸಂಸ್ಕ್ರತ ಹಾಡು ಶಂಕರ್ ಮಹದೇವನ್ ಧ್ವನಿಯಲ್ಲಿ ಮೂಡಿಬರಲಿದೆ. ಮತ್ತೊಂದು ವಿಶಿಷ್ಟ ಹಾಡು 'ತೆಲ್ಲಂಟಿ...ತೆಲ್ಲಂಟಿ...' ಹಾಡನ್ನು ಉದಯೋನ್ಮುಖ ಹಿನ್ನೆಲೆ ಗಾಯಕ ಸ್ವರೂಪ್ ಖಾನ್ ಜೊತೆ ಮೈಕಲ್ ಜಾಕ್ಸನ್ ಜೊತೆ ವೇದಿಕೆ ಹಂಚಿಕೊಂಡಿದ್ದ ದೇಶದ ಪ್ರಪ್ರಥಮ ಪಾಪ್ ಗಾಯಕಿ ಶರೋನ್ ಪ್ರಭಾಕರ್ ಹಾಡಿದ್ದಾರೆ.
ಖ್ಯಾತ ಗಾಯಕರ ಧ್ವನಿಯಲ್ಲಿ 'ಕೊರಗಜ್ಜ' ಸಿನಿಮಾ ಹಾಡುಗಳು (Photo: ETV Bharat) ಇದನ್ನೂ ಓದಿ:ಧನರಾಜ್ ಆಚಾರ್ ಮನೆಗೆ ಗೋಲ್ಡ್ ಸುರೇಶ್ ಭೇಟಿ:ಮಾವನಾಗಿ ಕಂದಮ್ಮನಿಗೆ ತೊಟ್ಟಿಲು ಉಡುಗೊರೆ ಕೊಟ್ಟ ಮಾಜಿ ಸ್ಪರ್ಧಿ
ಇದರ ಜೊತೆಗೆ ಕನ್ನಡದ ಪ್ರತಿಭೆಗಳಾದ ರಮೇಶ್ ಚಂದ್ರ, ಪ್ರತಿಮಾ ಭಟ್ ಹಾಗೂ ಮಲಯಾಳಂ ಮತ್ತು ತಮಿಳಿನ ಖ್ಯಾತ ಗಾಯಕರಾದ ಸನ್ನಿಧಾನಂದನ್, ಅನಿಲ ರಾಜಿವ, ಕಾಂಜನ ಶ್ರೀರಾಂ, ವಿಜೇಶ್ ಗೋಪಾಲ್, ಸೌಮ್ಯ ರಾಮಕೃಷ್ಣನ್ ಕೂಡಾ ಹಾಡುಗಳನ್ನು ಹಾಡಿದ್ದಾರೆ. ದಕ್ಷಿಣದ ಖ್ಯಾತ ಗೋಪಿ ಸುಂದರ್ ಅವರ ಕಂಪೋಸಿಂಗ್ ಇದೆ.
ಖ್ಯಾತ ಗಾಯಕರ ಧ್ವನಿಯಲ್ಲಿ 'ಕೊರಗಜ್ಜ' ಸಿನಿಮಾ ಹಾಡುಗಳು (Photo: ETV Bharat) ಚಿತ್ರದ ಆಡಿಯೋ ಲಾಂಚ್, ಫಸ್ಟ್ ಲುಕ್ ಹಾಗೂ ಟ್ರೇಲರ್ ಬಿಡುಗಡೆಯನ್ನು ವಿಭಿನ್ನ ರೀತಿಯಲ್ಲಿ ನಡೆಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣಗೊಂಡಿದೆ.