ಕರ್ನಾಟಕ

karnataka

ETV Bharat / entertainment

'ಒಂದು ಸರಳ ಪ್ರೇಮಕಥೆ' ಸಿನಿಮಾಗೆ ವಿಜಯ್​ ಸೇತುಪತಿ ಸಾಥ್ - kannada movie

ವಿನಯ್ ರಾಜ್‍ಕುಮಾರ್ ಮುಖ್ಯ ಭೂಮಿಕೆಯ 'ಒಂದು ಸರಳ ಪ್ರೇಮಕಥೆ' ಸಿನಿಮಾದಲ್ಲಿ ನಾಯಕಿಯ ಕ್ಯಾರೆಕ್ಟರ್ ಟೀಸರ್​ನ್ನು ಖ್ಯಾತ ನಟ ವಿಜಯ್ ಸೇತುಪತಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ.

'ಒಂದು ಸರಳ ಪ್ರೇಮಕಥೆ'
'ಒಂದು ಸರಳ ಪ್ರೇಮಕಥೆ'

By ETV Bharat Karnataka Team

Published : Jan 23, 2024, 12:13 PM IST

ನಿರ್ದೇಶಕ ಸಿಂಪಲ್​ ಸುನಿ ಹಾಗೂ ವಿನಯ್ ರಾಜ್‍ಕುಮಾರ್ ಸಂಗಮದ 'ಒಂದು ಸರಳ ಪ್ರೇಮಕಥೆ'ಕನ್ನಡ ಚಿತ್ರರಂಗದಲ್ಲಿ ಹಲವು ವಿಚಾರಗಳಿಂದ ಚಿತ್ರರಂಗದ ಗಮನ ಸೆಳೆಯುತ್ತಿದೆ. ಇದೀಗ ಸಿನಿಮಾದ ನಾಯಕಿ ಸ್ವಾತಿಷ್ಠ ಕೃಷ್ಣನ್ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಲಾಗಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಕ್ಯಾರೆಕ್ಟರ್ ಟೀಸರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ.

ಇತ್ತೀಚೆಗೆ ಸಿನಿಮಾದ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಪ್ರೇಮಿಗಳ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದೆ. ಒಂದು ಸರಳ ಪ್ರೇಮಕಥೆ ಬಳಗ ಪ್ರಚಾರದ ಪಡಸಾಲೆಗೆ ಧುಮುಕಿದೆ. ಅನಾವರಣಗೊಂಡಿರುವ ಟೀಸರ್​ನಲ್ಲಿ ಸ್ವಾತಿಷ್ಠ ಕೃಷ್ಣನ್ ಅನುರಾಗ ಎಂಬ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಯಾವುದಕ್ಕೂ ಜಗ್ಗದೇ ಧೈರ್ಯವಾಗಿ ಮುನ್ನುಗ್ಗುವ ಜರ್ನಲಿಸ್ಟ್ ಆಗಿ ಪ್ರತ್ಯಕ್ಷರಾಗಿದ್ದಾರೆ.

ಸ್ವಾತಿಷ್ಠ ಕೃಷ್ಣನ್

ಕಮಲ್ ಹಾಸನ್ ನಟನೆಯ ವಿಕ್ರಮ್ ಸೇರಿದಂತೆ ಒಂದಷ್ಟು ತಮಿಳು ಸಿನಿಮಾಗಳ್ಲಿ ನಟಿಸಿರುವ ಸ್ವಾತಿಷ್ಠಗೆ ಒಂದು ಸರಳ ಪ್ರೇಮಕಥೆ ಚೊಚ್ಚಲ ಕನ್ನಡ ಸಿನಿಮಾವಾಗಿದೆ. ಇನ್ನು ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್​ಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್ ಅಲ್ಲದೆ ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರು ನಾಯಕಿಯಾರಾಗಿ ನಟಿಸಿದ್ದಾರೆ.

ಫೆ. 8ಕ್ಕೆ ತೆರೆ ಮೇಲೆ: ವಿಶೇಷವಾಗಿ ರಾಘವೇಂದ್ರ ರಾಜ್​ ಕುಮಾರ್ ಸ್ಪೆಷಲ್ ರೋಲ್​ನಲ್ಲಿ ನಟಿಸಿದ್ದಾರೆ. ರಾಜೇಶ್​ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ, ಕಾರ್ತಿಕ್​ ಛಾಯಾಗ್ರಹಣವಿದೆ. ಮೈಸೂರು ರಮೇಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯ ಹಾಡುಗಳಿಂದ ಸೌಂಡ್ ಮಾಡುತ್ತಿರುವ 'ಒಂದು ಸರಳ ಪ್ರೇಮಕಥೆ' ಸಿನಿಮಾ ಫೆಬ್ರವರಿ 8ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಪ್ರದರ್ಶನ ಕಾಣಲಿದೆ.

ಇದನ್ನೂ ಓದಿ:ಪಂಚ ಭಾಷೆಗಳಲ್ಲಿ ಬರಲಿದೆ ರಾಮಾಯಣ ಕಥಾಧಾರಿತ ಪ್ಯಾನ್​ ಇಂಡಿಯಾ ಸಿನಿಮಾ; ಹೆಸರೇನು ಗೊತ್ತಾ?

ABOUT THE AUTHOR

...view details