ಕರ್ನಾಟಕ

karnataka

ETV Bharat / entertainment

'ನಿರ್ದೇಶಕರ ಪಾತ್ರಕ್ಕೆ ನ್ಯಾಯ ಒದಗಿಸುವುದು ನಟರ ಕರ್ತವ್ಯ': ಕಿರಣ್ ರಾಜ್ - Kiran Raj

ಕಿರಣ್ ರಾಜ್ ನಟನೆಯ ರಾನಿ ಚಿತ್ರದ 'ಕೋಲೆ ಕೋಲೆ' ಹಾಡನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.

Kiran Raj
ಕಿರಣ್ ರಾಜ್

By ETV Bharat Karnataka Team

Published : Mar 13, 2024, 7:26 PM IST

ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿ ಗಮನ ಸೆಳೆಯುತ್ತಿರೋ ಕನ್ನಡ ನಟ ಕಿರಣ್ ರಾಜ್. ಸದ್ಯ 'ರಾನಿ' ಚಿತ್ರದ ಜಪ ಮಾಡುತ್ತಿದ್ದಾರೆ. ಪೋಸ್ಟರ್, ಟೀಸರ್ ಮೂಲಕ ಸದ್ದು ಮಾಡಿರುವ 'ರಾನಿ' ಸಿನಿಮಾದ ಮತ್ತೊಂದು ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. 'ಕೋಲೆ ಕೋಲೆ' ಎನ್ನುವ ಜಾನಪದ ಶೈಲಿಯ ಮಾಸ್ ಹಾಡು ಟಿ ಸೀರೀಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಪಡ್ಡೆ ಹುಡುಗರ ಜೊತೆ ಸಿನಿಪ್ರಿಯರ ಮನಸ್ಸು ಗೆದ್ದಿದೆ. ಈಗಾಗಲೇ ಒಂದು ಮಿಲಿಯನ್ ಜನರು ಈ ಹಾಡನ್ನು ಕೇಳಿ ಮೆಚ್ಚಿಕೊಂಡಿದ್ದಾರೆ‌.

ಕಿರಣ್ ರಾಜ್

ಮೊದಲಿನಿಂದಲೂ ವಿಭಿನ್ನ ಪ್ರಚಾರದ ಮೂಲಕ 'ರಾನಿ' ಚಿತ್ರತಂಡ ಗಮನ ಸೆಳೆಯುತ್ತಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಚಿತ್ರದ ನಾಯಕ ನಟ ಕಿರಣ್ ರಾಜ್ ಪ್ರಪಂಚದಲ್ಲೇ ಅತೀ ಎತ್ತರದಲ್ಲಿರುವ ಶಿವನ ಮಂದಿರ - ಉತ್ತರಕಾಂಡದ ತುಂಗ್ ನಾಥ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಭಿಮಾನಿಗಳಿಗೆ ಶುಭಾಶಯ ಕೋರಿದ್ದರು. ಸದಾ ಒಂದಲ್ಲ ಒಂದು ಸಾಹಸ ಚಟುವಟಿಕೆಯಲ್ಲಿ ತೊಡಗುವ ಕಿರಣ್ ರಾಜ್ 'ರಾನಿ' ಚಿತ್ರಕ್ಕಾಗಿ ಸ್ಕೈಡೈವಿಂಗ್ ಹಾಗೂ ಪ್ಯಾರಾಗ್ಲೈಡಿಂಗ್ ಮಾಡಿ ಗಮನ ಸೆಳೆದಿದ್ದರು.

ಕಿರಣ್ ರಾಜ್

ನಾನು ನಿರ್ದೇಶಕರ ನಟನಾಗಬೇಕು. ನಿರ್ದೇಶಕ ಪಾತ್ರಕ್ಕೆ ನ್ಯಾಯ ಕೊಡುವುದು ಪ್ರತಿಯೋರ್ವ ನಟನ ಕರ್ತವ್ಯ. ಈ ನಿಟ್ಟಿನಲ್ಲಿ ನಾನು ಸದಾ ಕಲಿಯುತ್ತಿರುತ್ತೇನೆ. 'ರಾನಿ' ಒಂದು ಕ್ಲಾಸಿಕ್ ಸಿನಿಮಾ. ಇದೊಂದು ಫ್ಯಾಮಿಲಿ ಆ್ಯಕ್ಷನ್ ಚಿತ್ರ ಎಂದರೂ ತಪ್ಪಾಗಲ್ಲ. ಕಾಮಿಡಿ, ಲವ್, ಆ್ಯಕ್ಷನ್, ಫ್ಯಾಮಿಲಿ ಡ್ರಾಮಾ ಎಲ್ಲವೂ ಒಂದೇ ಸಿನಿಮಾದಲ್ಲಿ ಸಿಕ್ಕಿರುವುದು ನನ್ನ ಭಾಗ್ಯ. ಸದ್ಯ ಮೊದಲ ಹಾಡು ಬಿಡುಗಡೆಯಾಗಿ ಹಿಟ್ ಆಗಿದೆ. ಜನರ ಪ್ರತಿಕ್ರಿಯೆ ನೋಡಿ ಕೆಲಸ ಮಾಡುವ ಜೋಶ್ ಮತ್ತಷ್ಟು ಹೆಚ್ಚಿದೆ ಎನ್ನುತ್ತಾರೆ ಕಿರಣ್ ರಾಜ್.

ಇದನ್ನೂ ಓದಿ:'RCB' ಕೋಣಗಳೊಂದಿಗೆ 'ಕಾಂತಾರ' ಶಿವ! ರಿಷಬ್​​ ಶೆಟ್ಟಿ ಹೇಳಿದ್ದು ಅರ್ಥವಾಯ್ತಾ?

ಕಿರಣ್ ರಾಜ್ ಅಲ್ಲದೇ ಈ ಚಿತ್ರದಲ್ಲಿ ಸಮೀಕ್ಷಾ, ರಾಧ್ಯ, ಅಪೂರ್ವ ಎಂಬ ಮೂವರು ನಾಯಕಿಯರಿದ್ದಾರೆ. ಉಳಿದಂತೆ ರವಿ ಶಂಕರ, ಮೈಕೋ ನಾಗರಾಜ್, ಗಿರೀಶ್ ಹೆಗ್ಡೆ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್, ಧರ್ಮೇಂದ್ರ ಅರಸ್, ಪೃಥ್ವಿ ರಾಜ್, ಅರ್ಜುನ್ ಪಾಳೇಗಾರ, ಉಗ್ರಂ ಮಂಜು, ಯಶ್ ಶೆಟ್ಟಿ, ಶ್ರೀಧರ್, ಅನಿಲ್ ಯಾದವ್, ಚೇತನ್ ದುರ್ಗ, ಸುಜಯ್ ಶಾಸ್ತ್ರೀ, ಮಠ ಗುರುಪ್ರಸಾದ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಇದನ್ನೂ ಓದಿ:'ಬ್ಲಿಂಕ್' ಸಿನಿಮಾಗೆ ಶಿವರಾಜ್​​ಕುಮಾರ್​​ ಸಪೋರ್ಟ್; ಹೊಸ ತಂಡಗಳ ಬೆನ್ನು ತಟ್ಟಬೇಕೆಂದ ನಟ

ರಾನಿ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಸಿನಿಮಾ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಿದ್ದೇವೆ ಎಂದು ತಿಳಿಸಿದ್ದಾರೆ ನಿರ್ದೇಶಕ ಗುರುತೇಜ್ ಶೆಟ್ಟಿ. ಸ್ಟಾರ್ ಕ್ರಿಯೇಷನ್ ಬ್ಯಾನರ್​ನ ಮೊದಲ ಚಿತ್ರವಾಗಿದ್ದು, ಉಮೇಶ ಹೆಗ್ಡೆ ಚಂದ್ರಕಾಂತ್ ಪೂಜಾರಿ ನಿರ್ಮಾಣ ಮಾಡಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನ, ಪ್ರಮೋದ್ ಮರವಂತೆ ಗೀತರಚನೆ ಹಾಗೂ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ, ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ, ಉಮೇಶ ಆರ್ ಬಿ ಸಂಕಲನ ಹಾಗೂ ಸತೀಶ್ ಅವರ ಕಲಾ ನಿರ್ದೇಶನ ಈ ರಾನಿ ಚಿತ್ರಕ್ಕಿದೆ.

ABOUT THE AUTHOR

...view details