ಈ ಸಾಲಿನ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ' ಟ್ರೇಲರ್ ಬಿಡುಗಡೆಯಾಗಿ 24 ಗಂಟೆಯೊಳಗೆ 13 ಮಿಲಿಯನ್ಗೂ ಹೆಚ್ಚು ವೀಕ್ಷಣೆಯಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳ, ಸಿನಿಪ್ರಿಯರ ಕುತೂಹಲ ಹೆಚ್ಚಿರುವ ಈ ಹೊತ್ತಲ್ಲಿ ಚಿತ್ರ ತಯಾರಕರು ಪೋಸ್ಟರ್ ಅನಾವರಣಗೊಳಿಸಿ ಇರುವ ಉತ್ಸಾಹವನ್ನು ದ್ವಿಗುಣಗೊಳಿಸಿದ್ದಾರೆ.
ಬಹುತಾರಾಗಣದ ಪ್ಯಾನ್ - ಇಂಡಿಯನ್ ಮೂವಿ ಜೂನ್ 27ರಂದು ವಿಶ್ವದಾದ್ಯಂತ ಬಿಗ್ ಸ್ಕ್ರೀನ್ನಲ್ಲಿ ಅಬ್ಬರಿಸಲು ಸಜ್ಜಾಗಿದೆ. ನಿನ್ನೆ ಅನಾವರಣಗೊಂಡ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ದೃಶ್ಯಗಳನ್ನು ಈ ಟ್ರೇಲರ್ ಒಳಗೊಂಡಿದೆ ಅಂತಾರೆ ಅಭಿಮಾನಿಗಳು.
ಮತ್ತೊಂದು ಟ್ರೇಲರ್ ಅನಾವರಣ? ಉತ್ಸಾಹ ಇಲ್ಲಿಗೆ ಮುಗಿಯಲ್ಲ. ನಿರ್ದೇಶಕ ನಾಗ್ ಅಶ್ವಿನ್ ನೇತೃತ್ವದ ಚಿತ್ರತಂಡ ಮತ್ತೊಂದು ಟ್ರೇಲರ್ ಅನಾವರಣಗೊಳಿಸುವ ಸಾಧ್ಯತೆಯಿದೆ. 2-ನಿಮಿಷ, 30-ಸೆಕೆಂಡ್ಗಳ ಮತ್ತೊಂದು ಟ್ರೇಲರ್ ಅನ್ನು ಸಿನಿಮಾ ಬಿಡುಗಡೆಗೂ ಒಂದು ವಾರಕ್ಕೂ ಮುನ್ನ ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಸಿನಿಮಾ ಸುತ್ತಲಿರುವ ಸುದ್ದಿಗಳ ಪ್ರಕಾರ, ಇದು ಮೊದಲನೆ ಟ್ರೇಲರ್ಗೂ ಹೆಚ್ಚು ಆಕರ್ಷಿತ ದೃಶ್ಯಗಳನ್ನು ಒಳಗೊಂಡಿರಲಿದೆ.
ಸಾಗರೋತ್ತರ ಪ್ರದೇಶಗಳಲ್ಲಿ ಈಗಾಗಲೇ ಟಿಕೆಟ್ ಮಾರಾಟ ಪ್ರಾರಂಭವಾಗಿದೆ. ಐಮ್ಯಾಕ್ಸ್ (IMAX) ವರ್ಷನ್ನ ಭವ್ಯ ಬಿಡುಗಡಗೆ ಅನೇಕರು ಎದುರು ನೋಡುತ್ತಿದ್ದಾರೆ. ಐಮ್ಯಾಕ್ಸ್ ಪರದೆಯಲ್ಲಿ ಕಲ್ಕಿ 2898 ಎಡಿ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರಭಾಸ್ ಅಭಿಮಾನಿಗಳು ಮತ್ತು ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ಅದರಂತೆ ಇಂದು ಕಲ್ಕಿ 2898 ಎಡಿ ಐಮ್ಯಾಕ್ಸ್ ಪೋಸ್ಟರ್ ಅನಾವರಣಗೊಳ್ಳುತ್ತಿದ್ದಂತೆ, ನೆಟಿಜನ್‌ಗಳು ಮತ್ತು ಪ್ರಭಾಸ್ ಸೇರಿ ಚಿತ್ರದಲ್ಲಿರುವ ಬಹುತಾರೆಯರ ಫ್ಯಾನ್ಸ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ನಾಗ್ ಅಶ್ವಿನ್ ಅವರ ನಿರ್ದೇಶನಾ ಶೈಲಿಯನ್ನು ಗುಣಗಾನ ಮಾಡುವುದರಿಂದ ಹಿಡಿದು ಸಿನಿಮಾ ವೀಕ್ಷಿಸುವ ತಮ್ಮ ಕಾತುರವನ್ನು ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ:'ಕೋಟಿ': ಡಾಲಿ ವೃತ್ತಿಜೀವನದಲ್ಲೇ ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರ - Kotee Movie
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಬಾಲಿವುಡ್ ಸ್ಟಾರ್ಸ್ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಚಿತ್ರದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವೈಜಯಂತಿ ಮೂವೀಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಪೌರಾಣಿಕ ಅಂಶಗಳನ್ನು ಒಳಗೊಂಡಿರುವ ಈ ಸೈನ್ಸ್ ಫಿಕ್ಷನ್ ಸಿನಿಮಾವನ್ನು ನಾಗ್ ಅಶ್ವಿನ್ ಬರೆದು ನಿರ್ದೇಶಿಸಿದ್ದಾರೆ. ಅತ್ಯಾಧುನಿಕ ವಿಎಫ್ಎಕ್ಸ್ಗಳೊಂದಿಗೆ ಅದ್ಭುತ ಸಿನಿಮೀಯ ಅನುಭವ ನೀಡುವ ಭರವಸೆಯನ್ನು ಚಿತ್ರತಂಡ ನೀಡಿದೆ. ಸರಿಸುಮಾರು 600 ಕೋಟಿ ರೂ. ಬಜೆಟ್ನ ಈ ಚಿತ್ರ ಇದೇ ಜೂನ್ 27ರಂದು ಬಿಡುಗಡೆಯಾಗಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರ ದಾಳಿ: ರಶ್ಮಿಕಾ, ಪರಿಣಿತಿ ಸೇರಿ ಸೆಲೆಬ್ರಿಟಿಗಳಿಂದ ಖಂಡನೆ - Celebrities Condemn Terror Attack