ಹೈದರಾಬಾದ್(ತೆಲಂಗಾಣ):ಕನ್ನಡದ 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಕಿರುತೆರೆ ನಟಿ ಶೋಭಿತಾ ಶಿವಣ್ಣ(30) ಅವರು ಹೈದರಾಬಾದ್‌ನ ಕೊಂಡಾಪುರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿ ಕಳೆದ ರಾತ್ರಿ ಸಾವನ್ನಪ್ಪಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಹಾಸನದ ಸಕಲೇಶಪುರ ಮೂಲದವರಾದ ಶೋಭಿತಾ, ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 'ಬ್ರಹ್ಮಗಂಟು', 'ನಿನ್ನಿಂದಲೇ' ಧಾರಾವಾಹಿ ಮತ್ತು 'ಜಾಕ್‌ಪಾಟ್', 'ಎರಡೊಂದ್ಲ ಮೂರು', 'ವಂದನಾ', 'ಅಟೆಂಪ್ಟ್ ಟು ಮರ್ಡರ್' ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದರು. 'ಫಸ್ಟ್ ಡೇ ಫಸ್ಟ್ ಶೋ' ಎಂಬ ಹೊಸ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.