ಕರ್ನಾಟಕ

karnataka

ETV Bharat / entertainment

'ಫೈಟರ್​​' ಸಿಕ್ಸ್​​ಪ್ಯಾಕ್​​ಗಾಗಿ ಪರಿಶ್ರಮ: 14 ತಿಂಗಳ ಬಳಿಕ ಸಿಹಿ ಸವಿದ ಹೃತಿಕ್​ ರೋಷನ್​ - ಹೃತಿಕ್ ರೋಷನ್

ಬಹುನಿರೀಕ್ಷಿತ ಫೈಟರ್ ಸಿನಿಮಾದ 'ಇಷ್ಕ್ ಜೈಸಾ ಕುಚ್‌' ಹಾಡಿನ ಮೇಕಿಂಗ್​​ ವಿಡಿಯೋವನ್ನು ಚಿತ್ರತಂಡ ಅನಾವರಣಗೊಳಿಸಿದೆ.

Hrithik Roshan
ಹೃತಿಕ್​ ರೋಷನ್​

By ETV Bharat Karnataka Team

Published : Jan 20, 2024, 2:32 PM IST

Updated : Jan 20, 2024, 6:23 PM IST

ಪಠಾಣ್​ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಫೈಟರ್'. ಇದೇ ಮೊದಲ ಬಾರಿಗೆ ಬಾಲಿವುಡ್​ ಬಹುಬೇಡಿಕೆ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ಹೃತಿಕ್​ ರೋಷನ್​​ ತೆರೆಹಂಚಿಕೊಂಡಿರುವ ಈ ಸಿನಿಮಾ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟೀಸರ್‌ ಮೂಲಕ ಕುತೂಹಲ ಮೂಡಿಸಿದ್ದ ತಂಡ, ಇತ್ತಿಚೆಗೆ ಟ್ರೇಲರ್‌ ಅನಾವರಣಗೊಳಿಸಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿತ್ತು. ಸಿನಿಮಾ ಸಾಂಗ್ಸ್ ಕೂಡ ಅತ್ಯಂತ ಜನಪ್ರಿಯವಾಗಿವೆ. ಇದೀಗ ಟಿ-ಸೀರೀಸ್ ಈ ಸಿನಿಮಾದ ಪಾಪ್ಯುಲರ್ ಸಾಂಗ್ 'ಇಷ್ಕ್ ಜೈಸಾ ಕುಚ್‌'ನ ಮೇಕಿಂಗ್ ವಿಡಿಯೋವನ್ನು ಅನಾವರಣಗೊಳಿಸಿದೆ. ಇದರಲ್ಲಿ ನಾಯಕ ನಟ ಹೃತಿಕ್ ರೋಷನ್ 14 ತಿಂಗಳ ನಂತರ ಸಿಹಿ ಖಾದ್ಯಗಳನ್ನು ಸೇವಿಸಿ ತೃಪ್ತಿ ಪಡುತ್ತಿರೋದನ್ನು ಕಾಣಬಹುದು.

ದೀಪಿಕಾ ಪಡುಕೋಣೆ, ಹೃತಿಕ್ ರೋಷನ್, ಅನಿಲ್ ಕಪೂರ್ ಮತ್ತು ಕರಣ್ ಸಿಂಗ್ ಗ್ರೋವರ್ ಅಭಿನಯದ ವೈಮಾನಿಕ ಸಾಹಸ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. 'ಇಷ್ಕ್ ಜೈಸಾ ಕುಚ್' ಶೀರ್ಷಿಕೆಯ ಬೀಚ್ ಸಾಂಗ್​​ ಬೀಟ್ಸ್​​​ ಅಭಿಮಾನಿಗಳ ಮೈ ಕುಣಿಸುವಂತೆ ಮಾಡಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಬೀಚ್‌ವೇರ್‌ನಲ್ಲಿ ತಮ್ಮ ಫಿಟ್ನೆಸ್​ ಪ್ರದರ್ಶಿಸಿರೋದು ಸಾಂಗ್​​ನ ಹೈಲೆಟ್ಸ್. ಹೃತಿಕ್ ರೋಷನ್ ಅವರ ಸಿಕ್ಸ್​​ಪ್ಯಾಕ್​, ಯುವಕರೂ ನಾಚುವಂತ ಸದೃಢ ಮೈಕಟ್ಟು ಅಭಿಮಾನಿಗಳನ್ನು ಆಕರ್ಷಿಸಿದೆ. ಈ ಫಿಟ್​ ಬಾಡಿಗಾಗಿ ನಟ ಸಾಕಷ್ಟು ಶ್ರಮ ವಹಿಸಿದ್ದಾರೆ.

ಮೇಕಿಂಗ್ ವಿಡಿಯೋ ಪ್ರಾರಂಭವಾಗುತ್ತಿದ್ದಂತೆ, ನಿರ್ದೇಶಕ ಸಿದ್ಧಾರ್ಥ್ ಆನಂದ್ ಟ್ರ್ಯಾಕ್ ಅನ್ನು 'ಕ್ರೇಜಿ' ಎಂದು ಗುಣಗಾನ ಮಾಡಿದ್ದಾರೆ. ಇದು ತನ್ನ ಹೊಸ ಮೆಚ್ಚಿನ ಹಾಡು ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಜೊತೆಗೆ, ದೀಪಿಕಾ ಪಡುಕೋಣೆ ಈ ಹಾಡಿನ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿರೋದನ್ನು ಕಾಣಬಹದು. ಹಾಡನ್ನು 'ನಿಜವಾಗಿಯೂ ಮಾದಕ ಟ್ರ್ಯಾಕ್' ಎಂದು ವರ್ಣಿಸಿದ್ದಾರೆ. ಈ ಹಾಡಿನ ನೃತ್ಯ ಸಂಯೋಜಕ ಬಾಸ್ಕೋ ಅವರು ಹೃತಿಕ್ ಮತ್ತು ದೀಪಿಕಾ ಒಟ್ಟಿಗೆ ಡ್ಯಾನ್ಸ್ ಮಾಡುವಾಗ, ಎರಡು ಸ್ವರ್ಗೀಯ ದೇಹಗಳನ್ನು ನೋಡುತ್ತಿರುವಂತೆ ಭಾಸವಾಗುತ್ತಿದೆ. ಅವರಿಂದ ನಿಮ್ಮ ಗಮನ ಬೇರೆಡೆ ಕೊಂಡೊಯ್ಯಲು ಅಸಾಧ್ಯ ಎಂದು ವರ್ಣಿಸಿದ್ದಾರೆ.

ಇದನ್ನೂ ಓದಿ:ಶ್ರೀ ಅಭಿನಯದ 'ಜಸ್ಟ್ ಪಾಸ್' ಸಿನಿಮಾಗೆ ಶಾಸಕ ಪ್ರದೀಪ್ ಈಶ್ವರ್ ಸಾಥ್

ಹೃತಿಕ್ ಅವರು ಪರ್ಫೆಕ್ಟ್​ ಫಿಟ್​ ಬಾಡಿ ಹೊಂದಲು ತರಬೇತಿ ಪಡೆಯುತ್ತಿರೋದನ್ನೂ ಈ ಮೇಕಿಂಗ್​ ವಿಡಿಯೋದಲ್ಲಿ ಕಾಣಬಹುದು. ನಟನ ಸಮರ್ಪಣೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಕ್ಕಾಗಿ ನೃತ್ಯ ಸಂಯೋಜಕ ಬಾಸ್ಕೋ ಅವರು ಶ್ಲಾಘಿಸಿದ್ದಾರೆ. ಪರಿಪೂರ್ಣತೆಯನ್ನು ಸಾಧಿಸುವಲ್ಲಿ ಕಲಾವಿದರ ಮಹತ್ವವನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ:'ಕಾಟೇರ': ಚೊಚ್ಚಲ ಚಿತ್ರದಲ್ಲೇ ಯಶ ಕಂಡ ಮಾಲಾಶ್ರೀ ಪುತ್ರಿ - ಆರಾಧನಾ ಸಿನಿಮಾ ಭವಿಷ್ಯಕ್ಕೆ ಶುಭಹಾರೈಕೆ

ತೆರೆಮೇಲೆ ಮೇಲೆ ಅತ್ಯುತ್ತಮವಾಗಿ ಕಾಣಿಸಿಕೊಳ್ಳುವವರೆಗೆ ವಾರಗಳ ತಯಾರಿ ಬಗ್ಗೆ ನಿರ್ದೇಶಕರು-ನಟರು ಮಾತನಾಡಿದ್ದಾರೆ. ಮೇಕಿಂಗ್​ ವಿಡಿಯೋ ಕೊನೆಯಲ್ಲಿ, 14 ತಿಂಗಳ ನಂತರ ಹೃತಿಕ್​ ತಮ್ಮಿಷ್ಟದ ತಿನಿಸುಗಳನ್ನು ಸೇವಿಸಿ ಸಂತೋಷ ಪಡುತ್ತಿರೋದನ್ನು ಕಾಣಬಹುದು. ಇದು ನನ್ನ ಆತ್ಮ ತಲುಪಿದೆ, ಸಂತುಷ್ಟಿ ಮತ್ತು ತೃಪ್ತಿ ಎಂದು ಹೃತಿಕ್ ಹೇಳುತ್ತಿರೋದನ್ನು ಕಾಣಬಹುದು. ನಟ ಮೊಗದಲ್ಲಿ ವ್ಯಕ್ತವಾದ ಭಾವನೆ ವರ್ಣನಾತೀತ. ತೆರೆ ಮೇಲೆ ತಾರೆಯರು ಆಕರ್ಷಕವಾಗಿ ತೋರಲು ತೆರೆಹಿಂದಿನ ಶ್ರಮವನ್ನು ಈ ವಿಡಿಯೋ ಬಹಿರಂಗಪಡಿಸಿದೆ. ಈ ಬಹುನಿರೀಕ್ಷಿತ ಸಿನಿಮಾ ಜನವರಿ 25ರಂದು ಚಿತ್ರಮಂದಿರ ಪ್ರವೇಶಿಸಲಿದೆ.

Last Updated : Jan 20, 2024, 6:23 PM IST

ABOUT THE AUTHOR

...view details