ಕರ್ನಾಟಕ

karnataka

ETV Bharat / entertainment

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್-ಅಥಿಯಾ ಶೆಟ್ಟಿ? ಸುಳಿವು ಕೊಟ್ಟ ಸುನೀಲ್ ಶೆಟ್ಟಿ - Athiya KL Rahul

ಸುನೀಲ್ ಶೆಟ್ಟಿ ಅವರ ಹೇಳಿಕೆಯೊಂದು ನಟಿ ಅಥಿಯಾ ಶೆಟ್ಟಿ ಗರ್ಭಿಣಿ ಎಂಬ ಊಹೆಗೆ ಕಾರಣವಾಗಿದೆ.

Athiya Shetty-KL Rahul
ಕೆಎಲ್ ರಾಹುಲ್-ಅಥಿಯಾ ಶೆಟ್ಟಿ

By ETV Bharat Karnataka Team

Published : Mar 31, 2024, 5:55 PM IST

2023ರ ಜನವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿಟ್ಟಿರುವ ಬಾಲಿವುಡ್​ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಶೀಘ್ರದಲ್ಲೇ ಪೋಷಕರಾಗಿ ಭಡ್ತಿ ಪಡೆಯಲಿದ್ದಾರೆ ಎಂಬ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿಲ್ಲ. ಅಪರೂಪಕ್ಕೆ ತಮ್ಮ ಪ್ರವಾಸ, ಐಷಾರಾಮಿ ಜೀವನದ ಒಂದು ಚಿಕ್ಕ ನೋಟವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಮೆಚ್ಚುಗೆ ಸ್ವೀಕರಿಸುತ್ತಾರೆ. ಇದೀಗ ನಟಿ ಅಥಿಯಾ ಶೆಟ್ಟಿ ಪ್ರೆಗ್ನೆಂಟ್​ ಎಂಬ ವದಂತಿ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಥಿಯಾ ಶೆಟ್ಟಿ ಅವರ ತಂದೆ ಹಾಗೂ ಜನಪ್ರಿಯ ನಟರೂ ಆಗಿರುವ ಸುನೀಲ್ ಶೆಟ್ಟಿ ಅವರು ಡ್ಯಾನ್ಸ್ ರಿಯಾಲಿಟಿ ಶೋನ ವಿಶೇಷ ಸಂಚಿಕೆಯಲ್ಲಿ, ಮಗಳ ಗರ್ಭಾವಸ್ಥೆ ಬಗ್ಗೆ ಸುಳಿವು ನೀಡಿದ ಹಿನ್ನೆಲೆ ವದಂತಿ ಪ್ರಾರಂಭವಾಯಿತು. ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸುನೀಲ್ ಶೆಟ್ಟಿ ಅವರಲ್ಲಿ ಅಜ್ಜ ಆಗುವ ಅನುಭವದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ನಟ, "ಹೌದು, ಮುಂದಿನ ಸೀಸನ್ ಬಂದಾಗ ನಾನು ವೇದಿಕೆಯ ಮೇಲೆ 'ನಾನಾ' (ಅಜ್ಜ) ನಂತೆ ನಡೆಯುತ್ತೇನೆ" ಎಂದು ತಿಳಿಸಿದರು.

ನಟನ ಈ ಹೇಳಿಕ ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟುಹಾಕಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಇದ್ದಾರೆ ಎಂಬ ಅಂತೆಕಂತೆಗಳು ಆನ್​ಲೈನ್​ನಲ್ಲಿ ಸದ್ದು ಮಾಡುತ್ತಿವೆ. ಅದಾಗ್ಯೂ ದಂಪತಿ ಅಥವಾ ಅವರ ಕುಟುಂಬದಿಂದ ಅಧಿಕೃತ ದೃಢೀಕರಣ ನಿರೀಕ್ಷಿಸುವುದು ಅತ್ಯಗತ್ಯ. ಸದ್ಯಕ್ಕಿದು ವದಂತಿಯಷ್ಟೇ.

ಇದನ್ನೂ ಓದಿ:ರಿತೇಶ್​-ಜೆನಿಲಿಯಾ ಪ್ರೇಮ್​​ಕಹಾನಿ: ಪ್ರೇಮಪತ್ರಗಳ ಮೂಲಕ ನಡೆಯುತ್ತಿತ್ತು ಲವ್​ಬರ್ಡ್ಸ್ ಮಾತುಕತೆ - Riteish Genelia

ಈ ಹಿಂದೆ ಕೆ.ಎಲ್​ ರಾಹುಲ್ ನಡೆನುಡಿ ಬಗ್ಗೆ ಮಾತನಾಡಿದ್ದ ಸುನೀಲ್ ಶೆಟ್ಟಿ, "ಅವನು ಫಿನಿಕ್ಸ್‌ನಂತೆ ಎತ್ತರಕ್ಕೆ ಏರಿ ಸಾಧನೆಗೈದಾಗ ಇದು ಸ್ಫೂರ್ತಿ ಪಡೆಯಬೇಕಾದ ವಿಷಯ ಎಂದು ನೀವು ಭಾವಿಸುತ್ತೀರಿ ಮತ್ತು ತಂಡದ ಗಟ್ಟಿಮುಟ್ಟಾದ ಹುಡುಗರಿಗಿರಬೇಕಾದ ಗುಣ ಇದು. ನಾನು ಹೆಮ್ಮೆಯ ತಂದೆ. ಆಥಿಯಾ ಮತ್ತು ಅಹಾನ್ ಆಶೀರ್ವದಿಸಿದ್ದಾರೆ. ರಾಹುಲ್​ನಿಂದ ಕಲಿಯಬೇಕಾಗಿದ್ದು ಬಹಳಷ್ಟಿದೆ. ಅವನು ಶಾಂತ ಮತ್ತು ತುಂಬಾ ಗೌರವಾನ್ವಿತ ವ್ಯಕ್ತಿ. ನಾನು ದೇವರಲ್ಲಿ ಇದಕ್ಕಿಂತ ಹೆಚ್ಚು ಉತ್ತಮ ಮಗನನ್ನು ಕೇಳಬಹುದಿತ್ತು ಎಂದು ನನಗನಿಸಲಿಲ್ಲ'' ಎಂದು ತಿಳಿಸಿದರು.

ಇದನ್ನೂ ಓದಿ:'ರಣ್​​​ಬೀರ್​ ಕಪೂರ್​ ಸಂಸ್ಕಾರವಂತ': ಚರ್ಚೆಗೆ ಕಾರಣವಾಯ್ತು ತಾಯಿ ನೀತು ಹೇಳಿಕೆ - Ranbir Kapoor

ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ 2023ರ ಆರಂಭದಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು. ಹೀರೋ ಮತ್ತು ಮುಬಾರಕನ್‌ನಂತಹ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಅಥಿಯಾ ಶೆಟ್ಟಿ ಇನ್ನೂ ತಮ್ಮ ಮುಂದಿನ ಸಿನಿಮಾಗಳನ್ನು ಘೋಷಿಸಿಲ್ಲ. ನಟಿಯ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ABOUT THE AUTHOR

...view details