ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ, ಕಿರುತೆರೆ ಹಾಗೂ ಸಿನಿಮಾ ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಟಿ ದೀಪಿಕಾ ದಾಸ್ ತಾಯಿ ಪದ್ಮಲತಾ ಬೆಂಗಳೂರು ಉತ್ತರ ತಾಲೂಕು ಚಿಕ್ಕಬಿದರಕಲ್ಲು, ತುಮಕೂರು ರಸ್ತೆ ಜಿಂದಾಲ್ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ.
ಪದ್ಮಲತಾ ದಾಖಲಿಸಿರುವ ಎಫ್ಐಆರ್ನಲ್ಲಿ ಏನಿದೆ?: ನನ್ನ ಮಗಳು ಚಲನಚಿತ್ರ ನಟಿಯಾಗಿದ್ದು, 8 ತಿಂಗಳ ಹಿಂದೆ ಮಗಳು ದೀಪಿಕಾ ದಾಸ್, ದೀಪಕ್ ಕುಮಾರ್ ಜೊತೆ ಮದುವೆಯಾಗಿದ್ದಾರೆ. ಒಂದು ತಿಂಗಳು ಆಕೆಯ ಅಳಿಯ - ಮಗಳು ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಕಳೆದ 7 ತಿಂಗಳಿಂದ ಯಶವಂತ್ ಎಂಬ ವ್ಯಕ್ತಿ ಫೋನ್ ಮಾಡಿ ನಿಮ್ಮ ಅಳಿಯ ದೀಪಕ್ ಕುಮಾರ್ ಜೈಲಿಗೆ ಹೋಗಿ ಬಂದಿದ್ದಾನೆ, ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಿ ಮೋಸ ಮಾಡಿದ್ದಾನೆಂದು ಹೇಳುತ್ತಿದ್ದಾನೆ. ಕೆಲವು ದಿನಗಳ ನಂತರ ದೀಪಿಕಾ ದಾಸ್ಗೂ ಫೋನ್ ಮಾಡಿ ನಿಮ್ಮ ಗಂಡ ಅಕ್ರಮ ಚಟುವಟಿಕೆಯಿಂದ ಬಡಾವಣೆ ಮಾಡಿ ಮೋಸ ಮಾಡಿದ್ದಾನೆಂದು ಹೇಳಿದ್ದಾನೆ. ಅದಕ್ಕೆ ದೀಪಿಕಾ, ನೀವು ಕಾನೂನು ರೀತಿ ದೂರು ನೀಡಿ ಎಂದಿದ್ದರು.
ಅದಕ್ಕೆ ಅವನು, ನೀವು ಹಣ ನೀಡದಿದ್ದಲ್ಲಿ ಮಾಧ್ಯಮಗಳಿಗೆ ಸುದ್ದಿ ನೀಡಿ ನಿಮ್ಮ ಹೆಸರಿಗೆ ಧಕ್ಕೆ ತರುತ್ತೇನೆ, ಹಣ ನೀಡದೇ ಇದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ ಎಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಆರೋಪಿ ಯಶವಂತನ ವಿರುದ್ಧ ಕಲಂ 308(2) ಬಿಎನ್ಎಸ್ -2023 ರ ಅಡಿ ಎಫ್ಐಆರ್ ದಾಖಲಾಗಿದೆ. ಮಾದನಾಯಕನಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : 'ಪಾರು ಪಾರ್ವತಿ' ಚಿತ್ರಕ್ಕಾಗಿ 1 ತಿಂಗಳಲ್ಲಿ 10 ಕೆ.ಜಿ ತೂಕ ಇಳಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ದೀಪಿಕಾದಾಸ್ - Deepika Das