ETV Bharat / state

ಹಂಪಿಗೆ ಭೇಟಿ ನೀಡಿದ ಶ್ರೀಲಂಕಾದ ಮಾಜಿ ಅಧ್ಯಕ್ಷ ರನೀಲ್ ವಿಕ್ರಂ ಸಿಂಘೆ: ಹೀಗಿದೆ ಕಿಷ್ಕಿಂದಾ ಇತಿಹಾಸ - RANIL WICKREMESINGHE

ವಿಶ್ವವಿಖ್ಯಾತ ಹಂಪಿಗೆ ಶ್ರೀಲಂಕಾದ ಮಾಜಿ ಅಧ್ಯಕ್ಷ ರನೀಲ್ ವಿಕ್ರಂ ಸಿಂಘೆ ಅವರು ಕುಟುಂಬದವರೊಂದಿಗೆ ಭೇಟಿ ನೀಡಿದ್ದಾರೆ.

ranil-wickremesinghe-visits-to-hampi-in-ballari
ಹಂಪಿಗೆ ಭೇಟಿ ನೀಡಿದ ಶ್ರೀಲಂಕಾದ ಮಾಜಿ ಅಧ್ಯಕ್ಷ ರನೀಲ್ ವಿಕ್ರಂ ಸಿಂಘೆ (ETV Bharat)
author img

By ETV Bharat Karnataka Team

Published : Nov 28, 2024, 9:12 PM IST

Updated : Nov 28, 2024, 10:15 PM IST

ಹೊಸಪೇಟೆ (ವಿಜಯನಗರ): ಶ್ರೀಲಂಕಾದ ಮಾಜಿ ಅಧ್ಯಕ್ಷ ರನೀಲ್ ವಿಕ್ರಂ ಸಿಂಘೆ ಅವರು ಕುಟುಂಬದೊಂದಿಗೆ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದರು.

ಬೆಳಗ್ಗೆ ವಿರೂಪಾಕ್ಷೇಶ್ವರ ದೇಗುಲಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಲಕ್ಷ್ಮಿ ಆನೆಯು ಸ್ವಾಗತ ಮಾಡಿತು. ಬಳಿಕ ಅವರು ವಿರೂಪಾಕ್ಷೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಉಗ್ರನರಸಿಂಹ, ಕಮಲ್‌ಮಹಾಲ್, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ವಿಜಯವಿಠಲ ದೇಗುಲ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಹಂಪಿಯ ಸ್ಮಾರಕಗಳು ನೋಡಲು ಅತ್ಯದ್ಭುತವಾಗಿವೆ. ಭಾರತಕ್ಕೆ ಹಂಪಿ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಾಹ್ನದವರೆಗೆ ಹಂಪಿ ವೀಕ್ಷಿಸಿ ಪ್ರಯಾಣ ಬೆಳೆಸಿದರು.

ಪ್ರವಾಸಿ ಮಾರ್ಗದಶಿ ವಿ. ಗೋಪಾಲ್ ಹಂಪಿಯ ಇತಿಹಾಸದ ಬಗ್ಗೆ ಮಾರ್ಗದರ್ಶನ ನೀಡಿದರು. ಅವರಿಗೆ ಹಂಪಿ ಪೊಲೀಸರು ಭದ್ರತೆ ಒದಗಿಸಿದರು. ಪ್ರವಾಸೋದ್ಯಮ ಇಲಾಖೆಯ ಸ್ಥಾನಿಧಿಕಾರಿಗಳಾದ ಹರೀಶ್, ಸಾಗರ್, ಪೊಲೀಸ್ ಇಲಾಖೆಯ ರವಿಕುಮಾರ್ ಹಾಜರಿದ್ದರು.

ಹಂಪಿಗೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರು: ಕಲೆ ಮತ್ತು ವಾಸ್ತುಶಿಲ್ಪವನ್ನು ನೋಡಲು ಸಾವಿರಾರೂ ಪ್ರವಾಸಿಗರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಗೆ ಭೇಟಿ ನೀಡುತ್ತಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರವಾಸಿಗಳು ಒಂದು ಹಂತದಲ್ಲಿ ಇದ್ದರೆ, ಶನಿವಾರ ಹಾಗೂ ಭಾನುವಾರ, ರಜೆ ದಿನಗಳಲ್ಲಿ ಪ್ರವಾಸಿಗರ ದಂಡು ಹಂಪಿಯಲ್ಲಿ ನಾಗಲೋಟವಾಗಿ ಪ್ರತ್ಯಕ್ಷವಾಗುತ್ತದೆ. ಅದರಲ್ಲಿ ಕುಟುಂಬಸ್ಥರು, ಶಾಲಾ ಕಾಲೇಜಿನ ಮಕ್ಕಳ ಸಂಖ್ಯೆ ಹೆಚ್ಚು ಇರುತ್ತದೆ.

ಯೂನೆಸ್ಕೋ ವಿಶ್ವ ಪರಂಪರೆಯ ತಾಣ: ವಿಜಯನಗರವು ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಇದು ತುಂಗಭದ್ರಾ ನದಿಯ ದಡದಲ್ಲಿದೆ. ಇದು ದೊಡ್ಡ ಪ್ರದೇಶದಲ್ಲಿ ಹರಡಿಕೊಂಡಿತ್ತು. ಹಂಪಿಯಲ್ಲಿರುವ ಸ್ಮಾರಕಗಳ ಗುಂಪು ಎಂದು ಕರೆಯಲ್ಪಡುವ ವಿಜಯನಗರದ ಅವಶೇಷಗಳ ಒಂದು ಭಾಗವನ್ನು ಯೂನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗೊತ್ತುಪಡಿಸಿದೆ.

ನಗರವು 13ನೇ ಶತಮಾನದಲ್ಲಿ ಪುರಾತನ ಯಾತ್ರಾ ಕೇಂದ್ರವಾಗಿ, 14 ನೇ ಶತಮಾನದ ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೇಗವಾಗಿ ಬೆಳೆವಣಿಗೆ ಕಂಡಿತು ಮತ್ತು 16ನೇ ಶತಮಾನದ ಆರಂಭದ ವೇಳೆಗೆ ಸರಿಸುಮಾರು 650 ಚದರ ಕಿಲೋಮೀಟರ್ (250 ಚದರ ಮೈಲಿ) ಮಹಾನಗರವಾಗಿ ಅಭಿವೃದ್ಧಿ ಹೊಂದಿತ್ತು.

ರಾಜಧಾನಿ ವಿಜಯನಗರದ ವಾಸ್ತುಶಿಲ್ಪವು ರಾಮನ ಕಾಲದ ನಗರದ ನೈಸರ್ಗಿಕ ಲಕ್ಷಣಗಳೊಂದಿಗೆ ನಿರ್ಮಿಸಲ್ಪಟ್ಟಿದೆ. ವಿಜಯನಗರವು ಹಂಪಿಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ಧಾರ್ಮಿಕ ಹಿಂದೂ ದೇವಾಲಯದ ಸಂಕೀರ್ಣ, ಪಂಪಾ ತೀರ್ಥ ಮತ್ತು ಕಿಷ್ಕಿಂಧೆಯ ಸುತ್ತಲೂ ಸ್ಥಾಪಿಸಲ್ಪಟ್ಟಿತ್ತು ಎಂದು ಇತಿಹಾಸ ಹೇಳುತ್ತಿದೆ.

ಈ ಕ್ಷೇತ್ರಕ್ಕೆ ಪೌರಣಿಕ ಐತಿಹ್ಯವೂ ಇದೆ; ನಗರ ಕೇಂದ್ರವಾದ ಹಂಪಿ ಎಂಬ ಹೆಸರು ಹಿಂದೂ ಧರ್ಮ ಶಾಸ್ತ್ರದಲ್ಲಿ ಪಾರ್ವತಿ ದೇವಿಯ ಇನ್ನೊಂದು ಹೆಸರಾದ ಪಂಪಾದಿಂದ ಬಂದಿದೆ. ಸ್ಥಳ ಪುರಾಣದ ಪ್ರಕಾರ, ಪಾರ್ವತಿ (ಪಂಪಾ) ಈಗ ಹಂಪಿಯ ಭಾಗವಾಗಿರುವ ಹೇಮಕೂಟ ಬೆಟ್ಟದ ತುಂಗಭದ್ರಾ ನದಿಯ ದಡದಲ್ಲಿ ತಪಸ್ವಿ ಶಿವನನ್ನು ಗೆಲ್ಲಲು ದೊಡ್ಡ ತಪಸ್ಸನ್ನೇ ಮಾಡಿದ್ದಳು. ಶಿವನನ್ನು ಪಂಪಾಪತಿ ಎಂದೂ ಕರೆಯುವುದರಿಂದ ಇಲ್ಲಿನ ನದಿಯನ್ನು ಪಂಪಾ ನದಿ ಎಂದು ಕರೆಯಲಾಗುತ್ತಿತ್ತು,

ಪಂಪಾ ಎಂಬ ಸಂಸ್ಕೃತ ಪದವು ಕನ್ನಡದ ಹಂಪ ಎಂಬ ಪದದಿಂದ ರೂಪುಗೊಂಡಿದೆ. ಇನ್ನು ಪಾರ್ವತಿ ಅವರು ಬಯಸಿದ್ದನ್ನು ಅನುಸರಿಸಿದ ಸ್ಥಳವು ಹಂಪೆ ಅಥವಾ ಹಂಪಿ ಎಂದು ಕರೆಯಲ್ಪಟ್ಟಿತು. ಇದರ ಹಿಂದೂ ಪ್ರಾಮುಖ್ಯತೆಯು ಹಿಂದೂಮಹಾಕಾವ್ಯ ರಾಮಾಯಣದ ಕಿಷ್ಕಿಂಧಾ ಅಧ್ಯಾಯಗಳಿಂದಲೂ ತಿಳಿದುಕೊಳ್ಳಬಹುದಾಗಿದೆ. ಅಲ್ಲಿ ರಾಮ ಮತ್ತು ಲಕ್ಷ್ಮಣರು ಹನುಮಾನ್, ಸುಗ್ರೀವ ಮತ್ತು ವಾನರ ಸೈನ್ಯವನ್ನು ಅಪಹರಿಸಿದ ಸೀತೆಯನ್ನು ಹುಡುಕುವಲ್ಲಿ ಭೇಟಿಯಾಗುತ್ತಾರೆ. ಹಂಪಿ ಪ್ರದೇಶವು ಮಹಾಕಾವ್ಯದಲ್ಲಿ ವಿವರಿಸಿದ ಸ್ಥಳಕ್ಕೆ ಅನೇಕ ನಿಕಟ ಹೋಲಿಕೆಗಳನ್ನು ಹೊಂದಿದೆ ಎಂದು ಪುರಾಣಗಳು ಉಲ್ಲೇಖಿಸುತ್ತಿವೆ.

ಇದನ್ನೂ ಓದಿ : ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ- ನೋಡಿ

Last Updated : Nov 28, 2024, 10:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.