ಹೈದರಾಬಾದ್: ಪ್ರತಿಷ್ಠಿತ ಸಿನಿಮಾ ಉತ್ಸವ ಕೇನ್ಸ್ನ ಸಮಾನಂತರ ವಿಭಾಗವಾದ ಅಸೋಸಿಯೇಷನ್ ಫಾರ್ ದಿ ಡಿಫ್ಯೂಷನ್ ಆಫ್ ಇಂಡಿಪೆಂಡೆಂಟ್ ಸಿನಿಮಾ ಇನ್ ಫ್ರಾನ್ಸ್ (ಎಸಿಐಡಿ) ಈ ವರ್ಷ ನಡೆಯಲಿದೆ. ಈ ವರ್ಷ ಮೂರು ಡಾಕ್ಯುಮೆಂಟರಿ ಸೇರಿದಂತೆ 9 ಚಿತ್ರಗಳನ್ನು ವರ್ಲ್ಡ್ ಪ್ರೀಮಿಯರ್ನಲ್ಲಿ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಅದರಲ್ಲಿ ಭಾರತೀಯರು ಹೆಮ್ಮೆಪಡುವ ಭಾರತದ ಸಿನಿಮಾ ಕೂಡ ಪ್ರದರ್ಶನಕ್ಕೆ ಸಜ್ಜಾಗಿದೆ. ಭಾರತೀಯ ಇರಾನಿಯನ್ ಚಲನಚಿತ್ರ ನಿರ್ಮಾಪಕ ಮೈಸಮ್ ಅಲಿ ಅವರ ಚಲನಚಿತ್ರ, 'ಇನ್ ರಿಟ್ರೀಟ್' ಈ ಬಾರಿ ಎಸಿಐಡಿ 2024ರಲ್ಲಿ ಪ್ರದರ್ಶಿತವಾಗಲಿದೆ.
ಫ್ರಾನ್ಸ್ನ ಪ್ರತಿಷ್ಠಿತ ಕೇನ್ಸ್ ಉತ್ಸವ ವಿಶ್ವದ ಚಿತ್ರ ಪ್ರೇಮಿಗಳನ್ನು ಸೆಳೆಯುತ್ತದೆ. ಈ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಕೆಲವು ವಿಶಿಷ್ಠ ಫ್ರೆಂಚ್ ಮತ್ತು ಅಂತಾರಾಷ್ಟ್ರೀಯ ಸಿನಿಮಾಗಳನ್ನು ಕಳೆದ 30 ವರ್ಷಗಳಿಂದ ಪ್ರದರ್ಶಿಸಿಕೊಂಡು ಬರಲಾಗುತ್ತಿದೆ. 2024ರ ಸಿನಿಮಾ ಉತ್ಸವದಲ್ಲಿ ಮೈಸಮ್ ಅಲಿ ಅವರ 'ಇನ್ ರಿಟ್ರೀಟ್' ಕೂಡ ಪ್ರದರ್ಶಿತವಾಗಲು ಸಜ್ಜಾಗಿದೆ. ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಪದವಿ ಪಡೆದ ಇವರ ಅನೇಕ ಶಾರ್ಟ್ ಫಿಲ್ಮ್ಗಳನ್ನು ವಿಶ್ವದಾದ್ಯಂತ ಪ್ರದರ್ಶನ ನಡೆಸಿದ್ದು, ಅವರ ಮೊದಲ ಫಿಕ್ಷನ್ ಸಿನಿಮಾ 'ಇನ್ ರಿಟ್ರೀಟ್' ಬಿಡುಗಡೆಗೆ ಮುನ್ನ ಪ್ರದರ್ಶನ ಕಾಣಲಿದೆ.
'ಇನ್ ರಿಟ್ರೀಟ್' ಚಿತ್ರವೂ ವ್ಯಕ್ತಿಯೊಬ್ಬ ಚಳಿಗಾಲದ ಆರಂಭಕ್ಕೂ ಮುನ್ನ ವ್ಯಕ್ತಿಯೊಬ್ಬ ಸಣ್ಣ ಪರ್ವತದಲ್ಲಿನ ತನ್ನ ಸಮುದಾಯಕ್ಕೆ ಬಂದು ಸೇರುವ ಕಥಾನಕವನ್ನು ಹೊಂದಿದೆ. ಮನೆಗೆ ಸದಾ ತಡವಾಗಿ ಬರುವ 50ರ ಹರೆಯದ ವ್ಯಕ್ತಿ ತನ್ನ ಸಹೋದರನ ಅಂತ್ಯಕ್ರಿಯೆಯನ್ನೇ ತಪ್ಪಿಸಿಕೊಳ್ಳುತ್ತಾನೆ. ಹಳೆಕಾಲದ ಮನೆಯ ಬಾಗಿಲ ಬಳಿ ನಿಂತು ಒಂದು ರಾತ್ರಿ ತಡವಾಗುವ ಕುರಿತು ಯೋಚಿಸುತ್ತಾ ಸಂಬಂಧಗಳ ಮೌಲ್ಯವನ್ನು ಹುಡುಕುವ ಕಥೆಯನ್ನು ಚಿತ್ರ ಹೊಂದಿದೆ.