ಕನ್ನಡ ಚಿತ್ರರಂಗದ ಜನಪ್ರಿಯ ತಾರಾ ದಂಪತಿ ಹರ್ಷಿಕಾ ಪೂಣಚ್ಚ ಭುವನ್ ಪೊನ್ನಣ್ಣ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದುಕೊಂಡಿದ್ದಾರೆ. ಮೊದಲ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿರುವ ದಂಪತಿ ಇತ್ತೀಚೆಗೆ ಮಗಳೊಂದಿಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಜೋಡಿಯ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮಗಳ ಜೊತೆ ಮೊದಲ ಬಾರಿಗೆ ಕೊಲ್ಲೂರಿಗೆ ಭೇಟಿ ಕೊಟ್ಟಿದ್ದಾರೆ. ಮಗು ಜನಿಸಿದ ಬಳಿಕ ಕೊಲ್ಲೂರಿಗೆ ಭೇಟಿ ನೀಡುತ್ತೇವೆ ಎಂದು ದಂಪತಿ ಪ್ರಾರ್ಥಿಸಿದ್ದರು. ಅದರಂತೆ ಕುಟುಂಬ ಸಮೇತ ಕೊಲ್ಲೂರಿಗೆ ಆಗಮಿಸಿ, ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಫೋಟೋ ವಿಡಿಯೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇಂದು ದೇವಸ್ಥಾನ ಭೇಟಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ಗೆ, ''ಹೊಸ ವರ್ಷ 2025 ರಲ್ಲಿ ಪೋಷಕರಂತೆ ಹೊಸ ಆರಂಭಕ್ಕೆ, ನಮ್ಮ ಶಕ್ತಿ ದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ದೈವಿಕ ಆಶೀರ್ವಾದವನ್ನು ಪಡೆಯಲು ನಾವು ನಮ್ಮ ಪುಟ್ಟ ದೇವತೆಯೊಂದಿಗೆ ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಭೇಟಿ ನೀಡಿದ್ದೇವೆ. ದೇವಿಯು ನಿಮ್ಮೆಲ್ಲರನ್ನು ಆಶೀರ್ವದಿಸಲಿ'' ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಕುಟುಂಬದ ಫೋಟೋ ಹಂಚಿಕೊಂಡು, ನಮ್ಮ ಕುಟುಂಬದಿಂದ ನಿಮ್ಮ ಕುಟುಂಬಕ್ಕೆ 2025ರ ಹೊಸ ವರ್ಷದ ಶುಭಾಶಯಗಳು. ದೇವತೆ ಕೊಲ್ಲೂರು ಮೂಕಾಂಬಿಕೆ ನಿಮಗೆಲ್ಲರಿಗೂ ವರ್ಷವಿಡೀ ಸಂತೋಷ ಮತ್ತು ಸಮೃದ್ಧಿಯನ್ನು ಆಶೀರ್ವದಿಸಲಿ. ನಮ್ಮ ಕಡೆಯಿಂದ ಪ್ರೀತಿ ಮತ್ತು ಪಾಸಿಟಿವಿಟಿ, ಬೆಳಗೋಣ ಎಂದು ತಿಳಿಸಿದ್ದರು.