ಭಾರತೀಯ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಮಾಡೆಲ್, ಡ್ಯಾನ್ಸರ್ ನತಾಶಾ ಸ್ಟಾಂಕೋವಿಕ್ ದಂಪತಿ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಇಬ್ಬರೂ ಸ್ವತಃ ಯಾವುದೇ ಹೇಳಿಕೆ ನೀಡದೇ ಇದ್ದರೂ ವಿಚ್ಛೇದನದ ವದಂತಿ ಹಬ್ಬಿದೆ. ಇದು ಸ್ಟಾರ್ ಕಪಲ್‌ಗಿರುವ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಹಾರ್ದಿಕ್ ಮತ್ತು ನತಾಶಾ ಕೆಲವು ತಿಂಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಚಿತ್ರಗಳನ್ನು ಹಂಚಿಕೊಂಡಿಲ್ಲ. ಇವರಿಬ್ಬರೂ ಒಟ್ಟಿಗಿರುವ ಯಾವುದೇ ಫೋಟೋ-ವಿಡಿಯೋಗಳನ್ನೂ ಅಭಿಮಾನಿಗಳು ಬಹಳ ದಿನಗಳಿಂದ ನೋಡಿಲ್ಲ. ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡದ ಪಂದ್ಯದ ವೇಳೆಯೂ ನತಾಶಾ ಸ್ಟೇಡಿಯಂಗಳಲ್ಲಿ ಕಾಣಿಸಿಕೊಳ್ಳಲಿಲ್ಲ . ಈ ವಿಚಾರಗಳು ಊಹಾಪೋಹವನ್ನು ಮತ್ತಷ್ಟು ಹೆಚ್ಚಿಸಿವೆ. ಇದರ ನಡುವೆ ನತಾಶಾ ರಹಸ್ಯ (ಕ್ರಿಪ್ಟಿಕ್) ಪೋಸ್ಟ್ ಶೇರ್ ಮಾಡಿದ್ದಾರೆ.
ನತಾಶಾ ಇನ್‌ಸ್ಟಾಗ್ರಾಮ್ ಸ್ಟೋರಿ (Natasha stankovic Instagram) ನತಾಶಾ ಸ್ಟಾಂಕೋವಿಕ್ ಅವರು ಶನಿವಾರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ಸೆಕ್ಷನ್ನಲ್ಲಿ ರಹಸ್ಯಕರ ಸಂದೇಶವುಳ್ಳ ಫೋಟೋ ಹಂಚಿಕೊಂಡಿದ್ದಾರೆ. ಯೇಸು ಮತ್ತು ಕುರಿಮರಿಯ ಒಂದು ನೋಟವನ್ನು ಈ ಸ್ಟೋರಿ ಒಳಗೊಂಡಿದೆ. ಲಾರ್ಡ್ ಜೀಸಸ್ ಕುರಿಮರಿಯ ಹಿಂದೆ ನಡೆಯುತ್ತಿದ್ದಾರೆ. ಫೋಟೋಗೆ ಯಾವುದೇ ಕ್ಯಾಪ್ಷನ್ ಕೊಟ್ಟಿಲ್ಲ. ಆದರೆ ಇಂಟರ್ನೆಟ್ ಬಳಕೆದಾರರು ಎಂದಿನಂತೆ ಅಂತೆಕಂತೆಗಳಲ್ಲಿ ಮುಳುಗಿದ್ದಾರೆ. ಟ್ರೋಲಿಗರು ತಮ್ಮ ಆಟ ಶುರು ಮಾಡಿಕೊಂಡಿದ್ದಾರೆ.
ನತಾಶಾ ಇನ್‌ಸ್ಟಾಗ್ರಾಮ್ ಸ್ಟೋರಿ (Natasha stankovic Instagram) ವಿಚ್ಛೇದನ ವದಂತಿಗಳ ನಂತರ ನಿನ್ನೆ ನತಾಶಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತ್ಯಕ್ಷವಾದರು. ಅಲ್ಲಿಯೂ ಹಲವು ಪ್ರಶ್ನೆಗಳು ಎದುರಾದವು. ಕೆಲವೇ ಹೊತ್ತಲ್ಲಿ ಈ ಸ್ಟೋರಿ ಶೇರ್ ಆಗಿದೆ. ಕಳೆದ ಶನಿವಾರ, ನತಾಶಾ ಅವರು ನಟಿ ದಿಶಾ ಪಟಾನಿ ವದಂತಿಯ ಗೆಳೆಯ ಅಲೆಕ್ಸಾಂಡರ್ ಅವರೊಂದಿಗೆ ಕಾಣಿಸಿಕೊಂಡಿದ್ದು, ವಿಡಿಯೋಗಳು ವೈರಲ್ ಆಗಿವೆ. ರೆಸ್ಟೋರೆಂಟ್‌ನಿಂದ ಹೊರಬರುವಾಗ ಪಾಪರಾಜಿಗಳು ಎದುರಾಗಿದ್ದಾರೆ. ಈ ಸಂದರ್ಭದಲ್ಲಿ ಪಾಪರಾಜಿಯೋರ್ವರು ನತಾಶಾ ಬಳಿ ವಿಚ್ಛೇದನದ ಕುರಿತು ಕೇಳಿದ್ದಾರೆ. ನತಾಶಾ ಉತ್ತರ ಕೊಡಲಿಲ್ಲ. ಮುಗುಳ್ನಕ್ಕು 'ಧನ್ಯವಾದ' ಎನ್ನುತ್ತಾ ತಮ್ಮ ಕಾರಿನೆಡೆಗೆ ಸಾಗಿದ್ದಾರೆ.
ಇದನ್ನೂ ಓದಿ:ಸಲ್ಮಾನ್-ರಶ್ಮಿಕಾ ನಟನೆಯ 'ಸಿಖಂದರ್'ಗೆ ವಿಲನ್ ಬೇಕಿದ್ದಾರೆ!: ಈ ಮೂವರಲ್ಲಿ ಯಾರಿಗೆ ಚಾನ್ಸ್? - Villain For Sikandar
ನತಾಶಾ ಮತ್ತು ಹಾರ್ದಿಕ್ ಒಟ್ಟಿಗೆ ಜೀವನ ಆರಂಭಿಸಿ ನಾಲ್ಕು ವರ್ಷಗಳಾಗಿವೆ. ಕೋವಿಡ್ ಅವಧಿಯಲ್ಲಿ ಈ ವಿಚಾರ ಹೊರಬಂದಿತ್ತು. ಜನವರಿ 1, 2020ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮೇ 2020ರಲ್ಲಿ ವಿವಾಹವಾಗಿದ್ದರು. ಇದು ರಿಜಿಸ್ಟರ್ ಮ್ಯಾರೇಜ್ ಎಂದು ಹೇಳಲಾಗಿದೆ. ಅದೇ ವರ್ಷ ತಮ್ಮ ಮೊದಲ ಮಗ ಅಗಸ್ತ್ಯನನ್ನು ಸ್ವಾಗತಿಸಿದರು. ಕಳೆದ ವರ್ಷ ಪ್ರೇಮಿಗಳ ದಿನದ ಸಂದರ್ಭ ಹಿಂದೂ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮರು ಮದುವೆಯಾಗಿ ಗಮನ ಸೆಳೆದರು. ಆದ್ರೆ ಇತ್ತೀಚೆಗೆ ನತಾಶಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ 'ಪಾಂಡ್ಯ' ಎಂಬ ಉಪನಾಮವನ್ನು ತೆಗೆದುಹಾಕಿದ ಹಿನ್ನೆಲೆಯಲ್ಲಿ ದಂಪತಿ ನಡುವೆ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈವರೆಗೆ ದಂಪತಿ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ.
ಇದನ್ನೂ ಓದಿ:ಬೆಂಗಳೂರು ರೇವ್ ಪಾರ್ಟಿ ಕೇಸ್: ತೆಲುಗು ನಟಿಯ ಬೆಂಬಲಕ್ಕೆ ನಿಂತ ಟಾಲಿವುಡ್ ಸೂಪರ್ ಸ್ಟಾರ್ - Vishnu Manchu On Rave Party