'ಬಿಗ್ ಬಾಸ್ ಕನ್ನಡ ಸೀಸನ್ 11' ಆರಂಭವಾಗಿ 10 ವಾರ ಸಮೀಪಿಸಿದೆ. ಆಟ ರಂಗೇರುತ್ತಿದ್ದು, ಸ್ಪರ್ಧಿಗಳ ಅಸಲಿತನ ಹೊರ ಬರುತ್ತಿದೆ. ಇದೀಗ ಬೆಸ್ಟ್ ಫ್ರೆಂಡ್ಸ್ ಆಗಿದ್ದ ಮೋಕ್ಷಿತಾ ಮತ್ತು ಗೌತಮಿ ನಡುವಿನ ಮನಸ್ತಾಪಗಳು ಎಲ್ಲರೆದುರು ಬಹಿರಂಗಗೊಳ್ಳುತ್ತಿವೆ. ಅದರಂತೆ ಇದೀಗ ಮೋಕ್ಷಿತಾ ತೆಗೆದುಕೊಂಡ ಆ ಒಂದು ನಿರ್ಧಾರ ಅವರಿಗೇನೇ ಮುಳುವಾಗಿದೆ. ಸಂಭಾವ್ಯ ಕ್ಯಾಪ್ಟನ್ಸಿ ಪಟ್ಟವನ್ನು ಅವರು ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಗೌತಮಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
ಈ ವಾರ ಬಿಗ್ ಬಾಸ್ ಮನೆ ಎರಡು ವಾಹಿನಿಗಳಾಗಿ ರೂಪುಗೊಂಡಿತ್ತು. ಸ್ಪರ್ಧಿಗಳನ್ನು ಎರಡು ಬಣಗಳಾಗಿ ವಿಂಗಡಿಸಿ ವಿಶೇಷ ಟಾಸ್ಕ್ಗಳನ್ನು ನೀಡಲಾಗಿತ್ತು. ಹೀಗೆ ಆಟಗಳು ಸಾಗಿ ಪ್ರೇಕ್ಷಕರಿಗೆ ಮನರಂಜನೆಯೂ ಸಿಕ್ಕಿತ್ತು. ಕ್ಯಾಪ್ಟನ್ಸಿ ಟಾಸ್ಕ್ಗಾಗಿ ಮೋಕ್ಷಿತಾ ಅವರು ಗೌತಮಿ ಅವರ ಸಹಾಯ ಪಡೆಯಬೇಕಿತ್ತು. ಆದ್ರೆ ತಮ್ಮ ನಡುವಿನ ಮನಸ್ತಾಪ ಹಿನ್ನೆಲೆ, ಮೋಕ್ಷಿತಾ ಅವರು ಗೌತಮಿ ಅವರೊಂದಿಗೆ ಆಡಲು ನಿರಾಕರಿಸಿದರು.
ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕೂಡಾ ಬಿಗ್ ಬಾಸ್ ಎಚ್ಚರಿಸಿದ್ದರು. ಮೋಕ್ಷಿತಾ ಮಾಡಿದ ತಪ್ಪಿನಿಂದಾಗಿ ಮತ್ತು ಗೌತಮಿ ತಮ್ಮ ಪರಿಶ್ರಮದಿಂದ ಕ್ಯಾಪ್ಷನ್ ಆಗಿ ಹೊರಹೊಮ್ಮಿದ್ದಾರೆ. ಇದರ ಝಲಕ್ ಅನ್ನು ''ಒಂದು ಕಡೆ ಸಂಭ್ರಮ, ಮತ್ತೊಂದು ಕಡೆ ಸಂಘರ್ಷ'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್ನೊಂದಿಗೆ ಅನಾವರಣಗೊಂಡ ಪ್ರೋಮೋದಲ್ಲಿ ಕಾಣಬಹುದಾಗಿದೆ. ಗೌತಮಿ ಕ್ಯಾಪ್ಟನ್ಸಿಯಡಿ ಮೋಕ್ಷಿತಾ ಅವರ ನಡೆ ಹೇಗಿರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.