ಹೈದರಾಬಾದ್:ಇತ್ತೀಚಿನ ದಿನದಲ್ಲಿ ದೇಶ ಮಾತ್ರವಲ್ಲದೇ ಜಗತ್ತಿನೆಲ್ಲಡೆ ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿದೆ. 'ಬಾಹುಬಲಿ' 1 ಮತ್ತು 2, 'ಕೆಜಿಎಫ್ ಚಾಪ್ಟರ್ 1' ಮತ್ತು 2, 'ಪುಷ್ಪಾ: ದಿ ರೈಸ್', 'ಆರ್ಆರ್ಆರ್' ಮತ್ತು ಇತರ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಮಾತ್ರವಲ್ಲದೇ, ಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸುತ್ತಿದೆ. ಈ ಚಿತ್ರಗಳು ಊಹಿಸದ ರೀತಿಯಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿವೆ.
ಅನೇಕ ದಕ್ಷಿಣ ಭಾರತದ ಕಲಾವಿದರು ಕೂಡ ಬಾಲಿವುಡ್ ಚಿತ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ. ಸಾಯಿ ಪಲ್ಲವಿ, ಸಮಂತಾ ಋತು ಪ್ರಭು, ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ನಂತಹ ಅನೇಕ ನಟಿಯರು ಬಾಲಿವುಡ್ ಮತ್ತು ಒಟಿಟಿಯಲ್ಲಿ ಮಿಂಚುತ್ತಿದ್ದಾರೆ. ನಟಿ ಸಾಯಿಪಲ್ಲವಿ 'ರಾಮಾಯಣ' ಚಿತ್ರದಲ್ಲಿ ನಟಿ ರಣಬೀರ್ ಕಪೂರ್ ಮತ್ತು ಆಮೀರ್ ಖಾನ್ ಮಗ ಜುನೈದ್ ಖಾನ್ ಜೊತೆಗೆ ಮತ್ತೊಂದು ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕೀರ್ತಿ ಸುರೇಶ್ ನಟನೆಯ 'ಬೇಬಿ ಜಾನ್' ಚಿತ್ರ ಸಿದ್ದವಾಗಿದೆ. ರಶ್ಮಿಕಾ ಮಂದಣ್ಣ 'ಸಿಕಂದರ್' ಮತ್ತು 'ಛಾವಾ' ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನು ಸಮಂತಾ ಸಿಟಾಡೆಲ್ನಲ್ಲಿ ಮಗ್ನರಾಗಿದ್ದಾರೆ.
ತಮ್ಮ ನೈಸರ್ಗಿಕ ನಟನಾ ಸಾಮರ್ಥ್ಯದಿಂದ ಪ್ರೇಕ್ಷಕರನ್ನು ಹಿಡಿದಿರುವ ನಟಿ ಸಾಯಿ ಪಲ್ಲವಿ. ಇದೀಗ ಅವರು ತಮ್ಮ ಮುಂದಿನ ಚಿತ್ರದ ಮೂಲಕ ಅಭಿಮಾನಿಗಳನ್ನು ಮತ್ತಷ್ಟು ಮಂತ್ರ ಮುಗ್ದವಾಗಿಸಲಿದ್ದಾರೆ. ದಕ್ಷಿಣ ಭಾರತದ ಚಿತ್ರಗಳಿಂದ ಅಪಾಯ ಅಭಿಮಾನಿಗಳನ್ನು ಪಡೆದಿರುವ ಅವರು, ಇದೀಗ ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.