ಕರ್ನಾಟಕ

karnataka

ETV Bharat / entertainment

ಮಿಥುನ್ ಚಕ್ರವರ್ತಿ ವಿರುದ್ಧ ಎಫ್‌ಐಆರ್: 'ಮಮತಾ ಬ್ಯಾನರ್ಜಿ ಸೇಡಿನ ರಾಜಕಾರಣ' - ಬಿಜೆಪಿ ಆರೋಪ - FIR AGAINST MITHUN CHAKRABORTY

ನಟ ಮಿಥುನ್ ಚಕ್ರವರ್ತಿ ವಿರುದ್ಧ ಬೌಬಜಾರ್ ಮತ್ತು ಬಿಧಾನ್​​ನಗರ್​​ ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿವೆ.

Mithun Chakraborty
ಮಿಥುನ್​ ಚಕ್ರವರ್ತಿ (ANI)

By ETV Bharat Entertainment Team

Published : Nov 6, 2024, 7:36 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ ಮಿಥುನ್ ಚಕ್ರವರ್ತಿ ವಿರುದ್ಧ ಇಲ್ಲಿನ ಬೌಬಜಾರ್ ಮತ್ತು ಬಿಧಾನ್​​ನಗರ್​​ ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ಗಳು ದಾಖಲಾಗಿವೆ. ಅದಾಗ್ಯೂ, ಲಾಲ್‌ಬಜಾರ್‌ನಲ್ಲಿರುವ ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿಯ ಅಧಿಕಾರಿಗಳು ನಟನನ್ನು ವಿಚಾರಣೆಗೆ ಕರೆಸಿಕೊಳ್ಳಲು ನಿಖರ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ.

ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದಿದ್ದ ಬಿಜೆಪಿಯ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ನಟ, ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದರು. ಎಫ್‌ಐಆರ್‌ನಲ್ಲಿ, ಮಿಥುನ್ ಅವರ ಕೆಲ ಮಾತುಗಳು ಪ್ರಚೋದನಕಾರಿಯಾಗಿದ್ದು, ಇವು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗಬಹುದು ಎಂದು ಆರೋಪಿಸಲಾಗಿದೆ.

ಲಾಲ್‌ಬಜಾರ್‌ನ ಹಿರಿಯ ಅಧಿಕಾರಿಯೊಬ್ಬರು, ''ನಟನ ವಿರುದ್ಧ ಎಫ್‌ಐಆರ್ ದಾಖಲಿಸಿರುವ ವ್ಯಕ್ತಿಯ ಹೆಸರನ್ನು ನಾವು ಸದ್ಯ ಬಹಿರಂಗಪಡಿಸುವುದಿಲ್ಲ. ಪ್ರಕರಣ ಪ್ರಸ್ತುತ ತನಿಖೆಯಲ್ಲಿದೆ'' ಎಂದು ತಿಳಿಸಿದರು.

ಅಕ್ಟೋಬರ್ 27 ರಂದು ಮಿಥುನ್​ ಚಕ್ರವರ್ತಿ ಕೋಲ್ಕತ್ತಾಗೆ ಭೇಟಿ ನೀಡಿದ್ದರು. ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಸಾಲ್ಟ್ ಲೇಕ್‌ನಲ್ಲಿರುವ ಪೂರ್ವ ವಲಯ ಕಲ್ಚರಲ್​​​ ಸೆಂಟರ್​​​​ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದರು. ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಬಗ್ಗೆ ನಟ ಇನ್ನೂ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ:ಮೊದಲ ವಿಶ್ವಸುಂದರಿ ಕಿಕಿ ನಿಧನ: ಬಿಕಿನಿ ಧರಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದ ಮೊದಲ ಮತ್ತು ಕೊನೆಯ ಚೆಲುವೆ ಈಕೆ

ಮಿಥುನ್ ಚಕ್ರವರ್ತಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಪಶ್ಚಿಮ ಬಂಗಾಳದ ಪ್ರತಿಪಕ್ಷ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದೆ. ಬಂಗಾಳ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಮಾತನಾಡಿ, ''ರಾಜ್ಯದ ವಿಫಲ ಮುಖ್ಯಮಂತ್ರಿ ಮತ್ತೊಮ್ಮೆ ರಾಜಕೀಯ ಲಾಭ ಪಡೆಯೋ, ಪೊಲೀಸ್ ಮತ್ತು ಆಡಳಿತವನ್ನು ಬಳಸಿಕೊಂಡು ಖ್ಯಾತ ನಟ ಮತ್ತು ಬಿಜೆಪಿಯ ಹಿರಿಯ ನಾಯಕ ಮಿಥುನ್ ಚಕ್ರವರ್ತಿ ಅವರನ್ನು ನಿಂದಿಸಲು ಮತ್ತು ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟನಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮಿಥುನ್ ಬಂಗಾಳದ ಹೆಮ್ಮೆ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಗಣ್ಯರು. ಸಿನಿಮಾ ಲೋಕಕ್ಕೆ ಅವರ ಕೊಡುಗೆ ಅಪಾರ. ಆದರೂ, ರಾಜ್ಯದ ಕ್ರೂರ ಮತ್ತು ವಿಫಲ ಮುಖ್ಯಮಂತ್ರಿ ರಾಜಕೀಯ ಲಾಭ ಪಡೆಯಲು ಸುಳ್ಳು ಆರೋಪಗಳಲ್ಲಿ ಅವರನನ್ನು ಸಿಲುಕಿಸಲು ಪ್ರಯತ್ನಿಸಿದ್ದಾರೆ. ಈ ಪ್ರತೀಕಾರದ ಕೃತ್ಯವನ್ನು ನಾವು ಖಂಡಿಸುತ್ತೇವೆ. ಮಮತಾ ಬ್ಯಾನರ್ಜಿ ಅವರ ದೌರ್ಜನ್ಯದ ವಿರುದ್ಧ ನಮ್ಮ ಸಾಮೂಹಿಕ ಪ್ರತಿಭಟನೆ ಮುಂದುವರಿಯುತ್ತದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ದೊಡ್ಮನೆ ಶಕ್ತಿ ಪಾರ್ವತಮ್ಮ ಹಾದಿಯಲ್ಲಿ ಸೊಸೆ ಗೀತಾ ಶಿವರಾಜ್​ಕುಮಾರ್: ಸಿನಿಮಾ ಫೈನಲ್ ಮಾಡೋದು ಇವರೇ

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಸಭಾ ಸದಸ್ಯ ಸಮಿಕ್ ಭಟ್ಟಾಚಾರ್ಯ, ''ಎಲ್ಲಾ ರಾಜಕಾರಣಿಗಳು ಕಾಮೆಂಟ್ಸ್ ಮತ್ತು ತಮ್ಮ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ನಂತರ ಯಾರೂ ಈ ಬಗ್ಗೆ ಏನೂ ಹೇಳಲಿಲ್ಲ. ಪೊಲೀಸರು ಕೂಡಾ ಸ್ವಯಂ ಪ್ರೇರಿತ ದೂರು ದಾಖಲಿಸಿಲ್ಲ. ಮಿಥುನ್ ಚಕ್ರವರ್ತಿ ಅವರು ಬಂಗಾಳದ ಜನರ ಅನಿಸಿಕೆಗಳನ್ನೇ ಹೇಳಿದ್ದಾರಷ್ಟೇ. ನಟನ ವಿರುದ್ಧದ ಈ ದುರುದ್ದೇಶಪೂರಿತ ಪ್ರಕರಣವನ್ನು ಪಕ್ಷ ತನ್ನದೇ ಆದ ರೀತಿಯಲ್ಲಿ ನಿಭಾಯಿಸಲಿದೆ'' ಎಂದು ತಿಳಿಸಿದರು.

ABOUT THE AUTHOR

...view details