ಕರ್ನಾಟಕ

karnataka

ETV Bharat / entertainment

Watch: ಶ್ರೀಮುರಳಿ, ರುಕ್ಮಿಣಿ ವಸಂತ್ ನಟನೆಯ 'ಬಘೀರ' ಬಿಡುಗಡೆ: ಅಭಿಮಾನಿಗಳ ಸಂಭ್ರಮ

ಶ್ರೀಮುರಳಿ ಮತ್ತು ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯ 'ಬಘೀರ' ಬಿಡುಗಡೆ ಆಗಿದೆ.

Bagheera
ಬಘೀರ ಬಿಡುಗಡೆ (ETV Bharat)

By ETV Bharat Entertainment Team

Published : 5 hours ago

ಬೆಂಗಳೂರು: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಬಘೀರ' ಇಂದು ಅದ್ಧೂರಿಯಾಗಿ ತೆರೆಗಪ್ಪಳಿಸಲಿದೆ. ಸ್ಯಾಂಡಲ್​ವುಡ್​ನ ಸೂಪರ್​ ಸ್ಟಾರ್​ಗಳಾದ ಶ್ರೀಮುರಳಿ ಮತ್ತು ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಕಾತರರಾಗಿದ್ದರು. ಫೈನಲಿ ಸಿನಿಮಾ ಇಂದು ತೆರೆಗಪ್ಪಳಿಸಿದ್ದು, ಆರಂಭಿಕವಾಗಿ ಸಿನಿಮಾ ಬಹುತೇಕ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ.

ರೋರಿಂಗ್​ ಸ್ಟಾರ್​ನ ಬಹುನಿರೀಕ್ಷಿತ ಚಿತ್ರ ಇಂದು 250ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಬಘೀರ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ನಾಯಕ ನಟ ಭೇಟಿ ಕೊಟ್ಟಿದ್ದಾರೆ. ಸಂತೋಷ್ ಥಿಯೇಟರ್​ಗೆ ಬರುವ ಮುನ್ನ ಪಕ್ಕದಲ್ಲಿರೋ ಡಾ. ರಾಜ್​​ಕುಮಾರ್ ಪುತ್ಧಳಿಗೆ ಹೂವಿನ ಹಾರ ಹಾಕಿ ನಮಿಸಿದರು. ಬಳಿಕ ಸಂತೋಷ್​ ಚಿತ್ರಮಂದಿರಕ್ಕೆ ಆಗಮಿಸಿದ ನಟ ಶ್ರೀಮುರಳಿ ಕಾರಿನ ಮೇಲೆ ನಿಂತು ಅಭಿಮಾನಿಗಳನ್ನು ಮನರಂಜಿಸಿದರು.

ಬಘೀರ ಅದ್ಧೂರಿ ಬಿಡುಗಡೆ (ETV Bharat)

ಬಘೀರ ಚಿತ್ರಕ್ಕೆ ಕೆಜಿಎಫ್​ ಮತ್ತು ಸಲಾರ್ ಖ್ಯಾತಿಯ​ ಪ್ರಶಾಂತ್ ನೀಲ್ ಕಥೆ ಒದಗಿಸಿದ್ದಾರೆ. 'ಲಕ್ಕಿ' ಸಿನಿಮಾ ನಂತರ ಡಾ.ಸೂರಿ ನಿರ್ದೇಶಿಸಿರುವ ಸಿನಿಮಾವಿದು. ಶ್ರೀಮುರಳಿ ಮತ್ತು ರುಕ್ಮಿಣಿ ವಸಂತ್ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ನಾಗ ಚೈತನ್ಯ ಶೋಭಿತಾ ಧೂಳಿಪಾಲ ಮದುವೆಗೆ ಸಿದ್ಧತೆ: ದಿನಾಂಕ ಇಲ್ಲಿದೆ

ಶ್ರೀಮುರಳಿ ನಟನೆಯ ಮದಗಜ 2021ರಲ್ಲಿ ತೆರೆಕಂಡಿತ್ತು. ಅದಾದ ಬಳಿಕ ಯಾವ ಸಿನಿಮಾನೂ ಬರಲಿಲ್ಲ. ಹಾಗಾಗಿ ರೋರಿಂಗ್​ ಸ್ಟಾರ್​ನ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಟೀಸರ್​, ಟ್ರೇಲರ್​, ಪೋಸ್ಟರ್ಸ್, ಸಾಂಗ್​​​ ಪ್ರೇಕ್ಷಕರ ಕುತೂಹಲ ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ "ಪರಿಚಯವಾದೆ..ಪರಿಚಯವಾದೆ.. ಪರಿ ಪರಿಯಾಗಿ ನನಗೆ" ಎಂಬ ಹಾಡು ಟ್ರೆಂಡಿಂಗ್​​​​ನಲ್ಲಿತ್ತು. ಈಗಲೂ ಈ ಹಾಡು ಬಹಳ ಜನಪ್ರಿಯವಾಗಿದೆ.

ಇದನ್ನೂ ಓದಿ:ಶಿವಣ್ಣನ ಟಗರು ಸಾಂಗ್​ಗೆ ಯಶ್​ ಮಸ್ತ್​ ಡ್ಯಾನ್ಸ್​​: ಮಗನ ಬರ್ತ್​ಡೇ ಪಾರ್ಟಿ ವಿಡಿಯೋ ವೈರಲ್​

ಮನರಂಜನಾ ಕ್ಷೇತ್ರಕ್ಕೆ ಬ್ಲಾಕ್​ಬಸ್ಟರ್ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಈ ಚಿತ್ರಕ್ಕೆ ಕಥೆ ಒದಗಿಸಿದ್ದಾರೆ. ಡಾ.ಸೂರಿ ಅವರು ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಸಿನಿಮಾಗೆ ನಿರ್ದೇಶನದ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಪೂರೈಸಿದ್ದಾರೆ. ಎ.ಜೆ ಶೆಟ್ಟಿ ಅವರ ಕ್ಯಾಮರಾ ಕೈಚಳಕವಿದೆ. ಚೇತನ್‌ ಡಿಸೋಜಾ ಆ್ಯಕ್ಷನ್​ ಕಂಪೋಸ್ ಮಾಡಿದ್ದಾರೆ. ಸೆನ್ಸಾರ್​ ಪರೀಕ್ಷೆಯಲ್ಲಿ ಯು/ಎ ಪ್ರಮಾಣಪತ್ರ ಪಡೆದುಕೊಂಡಿರುವ ಈ ಚಿತ್ರ ಇಂದು ಬಿಡುಗಡೆ ಆಗಿದ್ದು, ಕಲೆಕ್ಷನ್​ ಮೇಲೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಕಲೆಕ್ಷನ್​ ಅಂಕಿ ಅಂಶ ಸಿನಿಮಾದ ಯಶಸ್ಸನ್ನು ನಿರ್ಧರಿಸಲಿದೆ. ಸದ್ಯ ಸೋಷಿಯಲ್​ ಮೀಡಿಯಾಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆಯ ವಿಡಿಯೋಗಳು ವೈರಲ್​ ಆಗುತ್ತಿವೆ.

ABOUT THE AUTHOR

...view details