ಕರ್ನಾಟಕ

karnataka

ETV Bharat / entertainment

ತರುಣ್ & ಸೋನಾಲ್ ಪರಿಸರಸ್ನೇಹಿ ವಿವಾಹ ಆಮಂತ್ರಣ ಪತ್ರಿಕೆ: ಏನೇನಿದೆ ಗೊತ್ತಾ? - Tarun And Sonal Wedding Card - TARUN AND SONAL WEDDING CARD

ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ವಿವಾಹ ಆಮಂತ್ರಣ ಪತ್ರಿಕೆ ಸಾಕಷ್ಟು ವಿಶೇಷವಾಗಿದೆ.

ತರುಣ್ & ಸೋನಾಲ್ ಪರಿಸರ ಸ್ನೇಹಿ ವಿವಾಹ ಆಮಂತ್ರಣ
ತರುಣ್ & ಸೋನಾಲ್ ಪರಿಸರ ಸ್ನೇಹಿ ವಿವಾಹ ಆಮಂತ್ರಣ (ETV Bharat)

By ETV Bharat Karnataka Team

Published : Jul 29, 2024, 2:13 PM IST

Updated : Jul 29, 2024, 2:37 PM IST

ತರುಣ್ & ಸೋನಾಲ್ ಪರಿಸರಸ್ನೇಹಿ ವಿವಾಹ ಆಮಂತ್ರಣ ಪತ್ರಿಕೆ (Social media)

ಕನ್ನಡ ಸಿನಿಮಾರಂಗದ ಸ್ಟಾರ್​ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಆಮಂತ್ರಣ ಕೊಟ್ಟು ತಮ್ಮ ಮದುವೆಗೆ ಆಹ್ವಾನಿಸಲು ಶುರು ಮಾಡಿದ್ದಾರೆ.

ಸಿನಿಮಾದಲ್ಲಿ ಸದಾ ಸರ್ಪ್ರೈಸ್​ ಪ್ಲಾನ್​ ಮಾಡಿ ಪ್ರೇಕ್ಷಕರನ್ನು ಖುಷಿಪಡಿಸುವ ನಿರ್ದೇಶಕ ತರುಣ್ ತಮ್ಮ ಮದುವೆ ಆಮಂತ್ರಣ ಪತ್ರವನ್ನು ಆಕರ್ಷಕವಾಗಿಯೇ​ ಪ್ಲಾನ್​ ಮಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಆಮಂತ್ರಣದ ಜೊತೆ ಒಂದು ಗಿಡಕೊಟ್ಟು ಕರೆಯೋದುಂಟು​. ಆದರೆ ತರುಣ್​ ಮತ್ತು ಸೋನಾಲ್​ ತಮ್ಮ ವಿವಾಹ ಪತ್ರಿಕೆಯನ್ನು ಸಂಪೂರ್ಣವಾಗಿ ಪರಿಸರಸ್ನೇಹಿಯಾಗಿ ಮಾಡಿದ್ದಾರೆ.

ತರುಣ್​ ನೀಡುತ್ತಿರುವ ಕರೆಯೋಲೆಯಲ್ಲಿ, ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯಲು ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇದೆ. ವಿಶೇಷ ಅಂದ್ರೆ, ಮದುವೆ ಮುಗಿದ ನಂತರ ಆಮಂತ್ರಣ ಪತ್ರಿಕೆಯನ್ನು ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ. ಯಾಕಂದ್ರೆ ಸೋನಾಲ್ ಮತ್ತು ತರುಣ್ ಮದ್ವೆ ನಂತರ ಪತ್ರಿಕೆಯನ್ನು ಒಂದು ಮಣ್ಣಿನ ಪಾಟ್​ನಲ್ಲಿ ಹಾಕಿದರೆ ಅದು ಮಣ್ಣಿನಲ್ಲಿ ಬೆರೆತು ಗಿಡವಾಗುತ್ತದೆ.

ಅದಷ್ಟೇ ಅಲ್ಲ, ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿಯಾದ ನಂತರ ಅದು ಮಣ್ಣು ಸೇರಿದರೆ ಅದರಿಂದಲೂ ಹೂವಿನ ಗಿಡ ಬೆಳೆಯುತ್ತದೆ. ಇನ್ನು ಪೆನ್ ಮತ್ತು ಪೆನ್ಸಿಲ್​ ಬರೆದು ಖಾಲಿಯಾದರೆ ಅದನ್ನು ಮಣ್ಣಿಗೆ ಹಾಕಿದರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ವಿವಾಹದ ಆಹ್ವಾನ ಪತ್ರಿಕೆ ತುಂಬಾ ಸ್ಪೆಷಲ್ ಮತ್ತು ಪರಿಸರಸ್ನೇಹಿ ಆಗಿದೆ.

ಆಗಸ್ಟ್ 10 ಹಾಗೂ 11ರಂದು ನಡೆಯಲಿರುವ ತರುಣ್​ ಮತ್ತು ಸೋನಾಲ್ ಮದುವೆಗೆ ಈಗಾಗಲೇ ಸಕಲ ಸಿದ್ದತೆಗಳು ನಡೆದಿವೆ. ಸ್ಯಾಂಡಲ್​ವುಡ್​ನ ಸ್ಟಾರ್​ ನಿರ್ದೇಶಕ ಹಾಗೂ ನಾಯಕಿಯ ಮದುವೆಗೆ ಇಡೀ ಚಿತ್ರರಂಗ ಸಾಕ್ಷಿಯಾಗಲಿದೆ. ಸದ್ಯ ಮದುವೆ ಇನ್ವಿಟೇಷನ್​ನಲ್ಲಿ ಸ್ಪೆಷಲ್​ ಅನ್ನಿಸ್ತಿರುವ ಈ ಜೋಡಿ ಮದುವೆಯಲ್ಲಿ ಏನೆಲ್ಲಾ ಸರ್ಪ್ರೈಸ್​ ಪ್ಲಾನ್ ಮಾಡಿದೆ ಅಂತ ಕಾದು ನೋಡಬೇಕು.

ಇದನ್ನೂ ಓದಿ:ಮದುವೆ ಆಗುವ ಹುಡುಗಿ ಜೊತೆ ಸ್ಪೆಷಲ್ ವಿಡಿಯೋ ಹಂಚಿಕೊಂಡ ರಾಬರ್ಟ್ ನಿರ್ದೇಶಕ - Tarun Sonal Marriage

Last Updated : Jul 29, 2024, 2:37 PM IST

ABOUT THE AUTHOR

...view details