ಕರ್ನಾಟಕ

karnataka

ETV Bharat / entertainment

ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾ ಶೀಘ್ರದಲ್ಲೇ ಒಟಿಟಿಗೆ - MARTIN MOVIE OTT RELEASE DATE

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈವೋಲ್ಟೇಜ್ 'ಮಾರ್ಟಿನ್' ಸಿನಿಮಾ ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ.

MARTIN MOVIE
ಮಾರ್ಟಿನ್ ಚಿತ್ರದ ಪೋಸ್ಟರ್​ (Cinema Team)

By ETV Bharat Karnataka Team

Published : Oct 16, 2024, 3:39 PM IST

ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಸಂಸ್ಕೃತಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಸ್ಟಾರ್ ಸಿನಿಮಾಗಳಿಂದ ಹಿಡಿದು ಹೊಸಬರ ಚಿತ್ರಗಳೂ ಒಂದೇ ತಿಂಗಳಲ್ಲಿ ಒಟಿಟಿಗೆ ಬರುತ್ತಿರುವ ಬೆಳವಣಿಗೆಗಳು ಹೆಚ್ಚಾಗುತ್ತಿವೆ. ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೊಟ್ಟ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ 'ಮಾರ್ಟಿನ್' ಸಿನಿಮಾ ಇನ್ನು ಒಂದೇ ತಿಂಗಳಲ್ಲಿ ಒಟಿಟಿಗೆ ಬರಲು ಸಜ್ಜಾಗಿದೆ. ಎರಡು ದಿನಗಳ ಹಿಂದೆಯಷ್ಟೇ 'ಮಾರ್ಟಿನ್' ಸಕ್ಸಸ್ ವಿಚಾರಕ್ಕೆ ಧ್ರುವ ಸರ್ಜಾ ಚಿತ್ರತಂಡದೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು.

ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್​ನಲ್ಲಿ 20 ಕೋಟಿಗೆ ಹೆಚ್ಚು ಕಲೆಕ್ಷನ್ ಮಾಡಿರುವ 'ಮಾರ್ಟಿನ್' ಇನ್ನು ಒಂದೇ ತಿಂಗಳಲ್ಲಿ ಒಟಿಟಿಗೆ ಬರಲಿದೆ. ಈ ಬಗ್ಗೆ ಧ್ರುವ ಸರ್ಜಾ ಆಪ್ತರೊಬ್ಬರು ಹೇಳುವ ಹಾಗೆ ಚಿತ್ರದ ಡಿಜಿಟಲ್ ರೈಟ್ಸ್ ಹಾಗೂ ಟಿವಿ ರೈಟ್ಸ್ ಬಗ್ಗೆ ಜೀ ನೆಟ್​ವರ್ಕ್ ಜೊತೆ ಮಾತುಕತೆ ಆಗುತ್ತಿದೆ. ಆದರೆ, ಇನ್ನೂ ಸಿನಿಮಾ ಸೇಲ್ ಆಗಿಲ್ಲ. ಈ ವಿಚಾರವಾಗಿ ನಿರ್ಮಾಪಕ ಉದಯ್ ಕೆ.ಮೆಹ್ತಾ ಸದ್ಯ ಮುಂಬೈನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಮಾರ್ಟಿನ್ ಚಿತ್ರದ ಪೋಸ್ಟರ್​ (Cinema Team)

ಔಟ್ ಆ್ಯಂಡ್​ ಔಟ್ ಆ್ಯಕ್ಷನ್ ಸಿನಿಮಾ ಆಗಿರುವ ಮಾರ್ಟಿನ್ ಮಿಶ್ರ ಪ್ರತಿಕ್ರೆಯೆ ನಡುವೆಯೂ ಟಿವಿ ಹಾಗೂ ಡಿಜಿಟಲ್ ರೈಟ್ಸ್ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. ಧ್ರುವಗೆ ಜೋಡಿಯಾಗಿ ವೈಭವಿ ಶಾಂಡಿಲ್ಯಾ ನಟಿಸಿದ್ದು, ಅನ್ವೇಶಿ ಜೈನ್, ನಿಕಿತಿನ್ ಧೀರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಬೆಂಗಳೂರು ಹಾಗೂ ಕಾಶ್ಮೀರದ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಸಿನಿಮಾ ಪ್ರೇಕ್ಷಕರಿಗೆ ಎಂಟರ್​ಟೈನ್ ಮಾಡುತ್ತವೆ. ಕನ್ನಡದಲ್ಲಿ ಕೃಷ್ಣನ ಲವ್ ಸ್ಟೋರಿ, ಬಚ್ಚನ್, ಕೃಷ್ಣ ರುಕ್ಕು, ಬ್ರಹ್ಮಚಾರಿ ಅಂತಹ ಸಿನಿಮಾಗಳನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ಉದಯ್ ಕೆ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

ಮಾರ್ಟಿನ್ ಚಿತ್ರದ ಪೋಸ್ಟರ್​ (Cinema Team)

ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನೊಂದು ವಿಶೇಷತೆಯೆಂದರೆ, ಸಂಗೀತ ನಿರ್ದೇಶಕ ರವಿ ಬಸ್ರೂರ್​​ ಈ ಚಿತ್ರತಂಡದ ಜೊತೆ ಕೈಜೋಡಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಇಷ್ಟೆಲ್ಲ ಹೈಲೆಟ್ಸ್ ಇರುವ ಈತ್ರ ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ಫ್ಯಾಮಿಲಿ ಸಮೇತ ಮನೆಯಲ್ಲಿ ನೋಡಬಹುದು.

ಮಾರ್ಟಿನ್ ಚಿತ್ರ ತಂಡ (Cinema Team)

ಇದನ್ನೂ ಓದಿ:ಮಾರ್ಟಿನ್​​ ಬಗ್ಗೆ ಅಪಪ್ರಚಾರ: 'ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ' ಎಂದ ಧ್ರುವ ಸರ್ಜಾ

ABOUT THE AUTHOR

...view details