ಬಿಗ್ ಬಾಸ್ ಕನ್ನಡ ಸೀಸನ್ 11 ಮೂರನೇ ವಾರದಲ್ಲಿದೆ. ಈ ಸೀಸನ್ನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ವಾರದ ಎಲಿಮಿನೇಷನ್ನ ನಾಮಿನೇಷನ್ ಪ್ರಕ್ರಿಯೆಯೂ ವಿಭಿನ್ನವಾಗಿದೆ. ಎಲಿಮಿನೇಷನ್ಗಾಗಿ ಈಗಾಗಲೇ ನಾಮಿನೇಷನ್ ಆರಂಭಗೊಂಡಿದೆ. ಆದರೆ ಈ ನಾಮಿನೇಷನ್ ಪ್ರಕ್ರಿಯೆಯೇ ದೊಡ್ಡ ಸೀನ್ಗಳನ್ನು ಕ್ರಿಯೇಟ್ ಮಾಡುತ್ತಿದೆ.
ಹೌದು, ನಿನ್ನೆಯ ಸಂಚಿಕೆಯಲ್ಲಿ ಅನುಷಾ ಅವರು ನಾಮಿನೇಟ್ ಆಗಿದ್ದಾರೆ. ಕಹಿಸತ್ಯ ಎಂಬ ಶೀರ್ಷಿಕೆಯಡಿ ಈ ನಾಮಿನೇಷನ್ ಪ್ರೊಸೆಸ್ ಶುರುವಾಗಿದೆ. ಅದರಂತೆ, ಕ್ಯಾಪ್ಟನ್ ಶಿಶಿರ್ ಅವರು ಅನುಷಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದು ಅನುಷಾ ಮತ್ತು ಐಶ್ವರ್ಯಾ ಅವರ ಜಗಳಕ್ಕೆ ಕಾರಣವಾಗಿದೆ. ಇಂದಿನ ಸಂಚಿಕೆಯಲ್ಲೂ ಕ್ಯಾಪ್ಟನ್ ಅವರಿಗೆ ನೇರ ನಾಮಿನೇಟ್ ಮಾಡುವ ಅವಕಾಶ ಸಿಕ್ಕಿದ್ದು, ಧನರಾಜ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದು ಧನರಾಜ್ ಕುಗ್ಗುವಿಕೆಗೆ ಕಾರಣವಾಗಿದೆ.
''ಅತಿಥಿಯೋ, ಆಟಗಾರನೋ? ಫುಲ್ ಕನ್ಫ್ಯೂಶನ್!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪ್ರೋಮೋ ಅನಾವರಣಗೊಳಿಸಿದೆ.
ನಾಮಿನೇಟ್ ಮಾಡಿ, ಸೂಕ್ತ ಕಾರಣ ನೀಡಿ:ಸದಸ್ಯರ ಪೈಕಿ ಒಬ್ಬರನ್ನು ನೀವು ನಾಮಿನೇಟ್ ಮಾಡಬೇಕು ಮತ್ತು ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕೆಂದು ಬಿಗ್ ಬಾಸ್ ಕಡೆಯಿಂದ ಕ್ಯಾಪ್ಟನ್ ಶಿಶಿರ್ಗೆ ಆದೇಶ ಬಂದಿದೆ. ಅದರಂತೆ ಶಿಶಿರ್ ಅವರು ಧನರಾಜ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಅವರಿನ್ನೂ ಕನ್ಫ್ಯೂಶನ್ನಲ್ಲಿದ್ದಾರೆ. ಈ ಮನೆಯಲ್ಲಿ ಆಟಗಾರನ ಅಥವಾ ಗೆಸ್ಟ್ ಆ ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ ಎಂದು ಶಿಶಿರ್ ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ. ಅದನ್ನು ವಿವರಿಸಬಹುದಾ? ಎಂದು ಧನರಾಜ್ ಕೇಳಿಕೊಂಡಿದ್ದಾರೆ.
ನೀವೆಲ್ಲೋ ಕಳೆದು ಹೋಗಿದ್ದೀರಾ ಅನ್ನೋದು ನನ್ನ ಅಭಿಪ್ರಾಯ ಎಂದು ವಿವರಿಸಿದ್ದಾರೆ. ಅದಕ್ಕೆ ಮಚ್ಚಾ ಮಚ್ಚಾ ಬಚ್ಚಲ್ ಮನೆ ಸ್ವಚ್ಛ ಎಂದು ಹೇಳುತ್ತಲೇ ಧನರಾಜ್ ಕಹಿ ಜ್ಯೂಸ್ ಅನ್ನು ಕುಡಿದಿದ್ದಾರೆ. ನಂತರ ಈ ಬಗ್ಗೆ ಚಿಂತಿಸತೊಡಗಿದ ಧನರಾಜ್ ಅವರು, ಆಕಡೆ ಮಾತನಾಡುತ್ತೀನಿ, ಈಕಡೆ ಮಾತನಾಡೋದೂ ಇಲ್ಲ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ನಾನೇ ಅನ್ಫಿಟ್ ಅನ್ಸೋಕೆ ಶುರುವಾಗೋಗಿದೆ ನನ್ ಮನ್ಸಲ್ಲೇ ಎಂದು ಕೊರಗಿದ್ದಾರೆ.