ರಾಮೋಜಿ ಫಿಲಂ ಸಿಟಿ(ಹೈದರಾಬಾದ್): ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ 'ರಾಮೋಜಿ ಫಿಲಂ ಸಿಟಿ' ಪ್ರವಾಸಿಗರಿಗೆ ಹೊಸ ಬಗೆಯ ಮನರಂಜನೆಯ ಅನುಭವ ನೀಡಲು ವಿಂಟರ್ ಫೆಸ್ಟ್ಗೆ ಸಜ್ಜುಗೊಂಡಿದೆ. ಪ್ರಕೃತಿ ಸೌಂದರ್ಯದ ನಡುವೆ ವಿಶೇಷ ಮನರಂಜನಾ ಕಾರ್ಯಕ್ರಮಗಳೊಂದಿಗೆ ನಾಳೆ (ಡಿ.19)ಯಿಂದ 2025ರ ಜ.19ರವರೆಗೆ ಈ ಹಬ್ಬ ನಡೆಯಲಿದೆ. ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬಗಳ ಸಂಭ್ರಮವನ್ನು ಹೆಚ್ಚಿಸಲು ಇಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಕುಟುಂಬಗಳು ರಜಾ ದಿನಗಳನ್ನು ಮಜವಾಗಿ ಕಳೆಯಲು ಮನರಂಜನಾ ಹಬ್ಬವನ್ನೇ ಇಲ್ಲಿ ವಿನ್ಯಾಸಗೊಳಿಸಲಾಗಿದೆ. ದಿನದ ಪ್ಯಾಕೇಜು, ಸಾಯಂಕಾಲದ ಪ್ಯಾಕೇಜ್ ಸೇರಿದಂತೆ ವಿವಿಧ ಪ್ಯಾಕೇಜ್‌ಗಳಿದ್ದು, ಪ್ರವಾಸಿಗರು ತಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರವಾಸಿಗರು ಬೆಳಗ್ಗೆ 9ರಿಂದ ರಾತ್ರಿ 9ರವರೆಗೂ ಇಡೀ ದಿನವನ್ನು ಎಂಜಾಯ್ ಮಾಡಬಹುದು.
ಮ್ಯೂಸಿಕಲ್ ಗ್ಲೋ ಗಾರ್ಡನ್: ಅದ್ಭುತ ಪ್ರಕೃತಿಗೆ ವಿದ್ಯುತ್ ದೀಪಗಳ ಅಲಂಕಾರ, ಸುಮಧುರ ಸಂಗೀತ ಸಂಯೋಜಿಸಿ ವಿನ್ಯಾಸಗೊಳಿಸಿದ ಕನಸಿನಂತಹ 'ಗ್ಲೋ ಗಾರ್ಡನ್' ಸೌಂದರ್ಯ ಅನುಭವಿಸಬಹುದು. ಈ ಗಾರ್ಡನ್ ಪ್ರವಾಸಿಗರಿಗೆ ಕಣ್ಣಿಗೆ ರಸದೌತಣ ನೀಡಲಿದೆ.
ಮೋಷನ್ ಕ್ಯಾಪ್ಚರ್ ಮತ್ತು ವರ್ಚುವಲ್ ಶೂಟ್: ಇದು ಇನ್ನೊಂದು ಅದ್ಭುತ. ಇಲ್ಲಿ ಸಿನಿಮಾ ಮ್ಯಾಜಿಕ್ ವೀಕ್ಷಿಸಬಹುದು. ಅತಿಥಿಗಳು 'ಮೋಷನ್ ಕ್ಯಾಪ್ಚರ್ ಮತ್ತು ವರ್ಚುವಲ್ ಶೂಟ್' ಸೆಟ್‌ಗೆ ಹೆಜ್ಜೆ ಹಾಕಬಹುದು. ಆಧುನಿಕ ಸಿನಿಮಾ ಜಗತ್ತಿನ ಇಣುಕು ನೋಟ ಇಲ್ಲಿ ಕಾಣಸಿಗುತ್ತದೆ.
ಕಾರ್ನಿವಲ್ ಪರೇಡ್: ಇದು ಆಕರ್ಷಕ ಮತ್ತು ವಿಷಯಾಧಾರಿತ ಸ್ತಬ್ಧಚಿತ್ರಗಳ ದರ್ಶನ ನೀಡುವ ಮೆರವಣಿಗೆ. ಜೊತೆಗೆ ಹಾಸ್ಯ ಕಲಾವಿದರು, ಸ್ಟಿಲ್ ವಾಕರ್ಗಳು ಈ ಮೆರವಣಿಗೆಯಲ್ಲಿ ತಮ್ಮ ಕೌಶಲ್ಯದಿಂದ ಮನರಂಜನೆ ಒದಗಿಸುತ್ತಾರೆ.
DJ ಆನ್ ವೀಲ್ಸ್: ಡಿಜೆ ಆನ್ ವೀಲ್ಸ್ ಕೂಡ ಇದೆ. ಇದು ಪ್ರವಾಸಿಗರನ್ನು ಪಾರ್ಟಿ ಮೂಡ್ಗೆ ಕರೆದೊಯ್ಯುತ್ತದೆ.
ಆಕರ್ಷಕ ವಾಸ್ತವ್ಯ ಪ್ಯಾಕೇಜ್‌ಗಳು: ವಿಂಟರ್ ಫೆಸ್ಟ್‌ನ ಅನುಭವ ಸವಿಯಲು ಆಗಮಿಸುವ ಪ್ರವಾಸಿಗರಿಗೆ ಆಕರ್ಷಕ ವಾಸ್ತವ್ಯದ ಪ್ಯಾಕೇಜ್‌ಗಳು ಲಭ್ಯ. ಐಷಾರಾಮಿ ಹೋಟೆಲ್ಗಾಗಿ ಸಿತಾರಾ, ಕಂಫರ್ಟ್ ಹೋಟೆಲ್ ತಾರಾ, ಬಜೆಟ್ ಹೋಟೆಲ್ ಶಾಂತಿನಿಕೇತನ, ಫಾರ್ಮ್ ಹೌಸ್ ವಸುಂಧರಾ ವಿಲ್ಲಾ, ಸಾಮಾನ್ಯ ವಸತಿಗಾಗಿ ಗ್ರೀನ್ಸ್ ಇನ್ ಮತ್ತು ಗ್ರೂಪ್ಗಳಲ್ಲಿ ಆಗಮಿಸುವವರಿಗೆ ಶೇರಿಂಗ್ ವಾಸ್ತವ್ಯಕ್ಕಾಗಿ ಸಹಾರಾ ಹೋಟೆಲ್ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ www.ramojifilmcity.com ಅಥವಾ 7659876598 ಸಂಪರ್ಕಿಸಿ.
ಇದನ್ನೂ ಓದಿ: ಪ್ರತಿಷ್ಠಿತ ISB ಶಿಕ್ಷಣ ಸಂಸ್ಥೆಗೆ 30 ಕೋಟಿ ಸಿಎಸ್‌ಆರ್ ನಿಧಿ ಉಡುಗೊರೆ ನೀಡಿದ ರಾಮೋಜಿ ಫೌಂಡೇಶನ್