ಬಾಲಿವುಡ್ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ 'ಫೈಟರ್' ಸಿನಿಮಾ ಯಶಸ್ಸಿನ ಅಲೆಯಲ್ಲಿದ್ದಾರೆ. ಅಮೋಘ ಅಭಿನಯ ಮಾತ್ರವಲ್ಲದೇ ಅತ್ಯುತ್ತಮ 'ಡ್ರೆಸ್ಸಿಂಗ್ ಸೆನ್ಸ್'ಗೂ ಇವರು ಹೆಸರುವಾಸಿ. ಇದೀಗ ಮುಂಬೈ ಏರ್ಪೋರ್ಟ್ನಿಂದ ದೀಪಿಕಾ ವಿಡಿಯೋ ಹೊರಬಿದ್ದಿದೆ. ತಮ್ಮ ಸಹೋದರಿ ಅನಿಶಾ ಪಡುಕೋಣೆ ಜೊತೆ ಅವರು ಕಾಣಿಸಿಕೊಂಡರು. ನಟಿಯ ಆಕರ್ಷಕ ಉಡುಗೆ ಮತ್ತು ಸಹೋದರಿಯ ಮೇಲೆ ತೋರಿದ ಕಾಳಜಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.
ದೀಪಿಕಾ ಮತ್ತು ಅನಿಶಾ ಭಾರತದ ಹೆಸರಾಂತ ಬ್ಯಾಡ್ಮಿಂಟನ್ಪಟು ಪ್ರಕಾಶ್ ಪಡುಕೋಣೆ ಮತ್ತು ಉಜ್ಜಲಾ ಪಡುಕೋಣೆ ದಂಪತಿಯ ಪುತ್ರಿಯರು. ಇಬ್ಬರು ಸಹೋದರಿಯರು ಅನ್ಯೋನ್ಯ ಬಾಂಧವ್ಯ ಹೊಂದಿದ್ದಾರೆ. ಪರಸ್ಪರರ ಕೆಲಸಗಳನ್ನು ಸದಾ ಬೆಂಬಲಿಸುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಂದರ್ಶನಗಳಲ್ಲಿ ಇದು ಕಂಡುಬಂದಿದೆ.
ದೀಪಿಕಾ ಪಡುಕೋಣೆ ಮುಂಬೈ ಏರ್ಪೋರ್ಟ್ನಲ್ಲಿ ಮೋಹಕ ಉಡುಗೆಯಲ್ಲಿ ಕಾಣಿಸಿಕೊಂಡರು. ಚೆಕರ್ಡ್ ಓವರ್ಕೋಟ್ ಮತ್ತು ಬ್ಲ್ಯೂ ಡೆನಿಮ್ ಧರಿಸಿದ್ದರು. ಕೂದಲನ್ನು ಬಿಗಿಯಾಗಿ, ಬನ್ ಸ್ಟೈಲ್ನಲ್ಲಿ ಕಟ್ಟಿದ್ದರು. ಸರಳ ಕೇಶವಿನ್ಯಾಸ ಮತ್ತು ಮಿನಿಮಮ್ ಮೇಕ್ಅಪ್ ಅಭಿಮಾನಿಗಳ ಮನಸೆಳೆದಿದೆ. ದಿರಿಸಿಗೆ ಪೂರಕವಾಗಿ ಕಂದು ಬಣ್ಣದ ಸನ್ ಗ್ಲಾಸ್ ಮತ್ತು ಬ್ಲ್ಯಾಕ್ ಶೂ ಧರಿಸಿ ಕಂಗೊಳಿಸಿದರು.