ಕರ್ನಾಟಕ

karnataka

ETV Bharat / entertainment

'ದುಃಖದಿಂದ ಪ್ರೀತಿವರೆಗೆ': ಯೂಟ್ಯೂಬ್‌ನಲ್ಲಿ 400M ವೀಕ್ಷಣೆ ಕಂಡ ಡಿಯರ್ ಕಾಮ್ರೇಡ್ - Dear Comrade - DEAR COMRADE

'ಡಿಯರ್ ಕಾಮ್ರೇಡ್' ಯೂಟ್ಯೂಬ್‌ನಲ್ಲಿ 400 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು, ಚಿತ್ರದ ನಟ ನಟಿ ತಮ್ಮ ಅಭಿಮಾನಿಗಳಿಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ.

Vijay Deverakonda Rashmika Mandanna
ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ (Film Poster)

By ETV Bharat Karnataka Team

Published : Jun 15, 2024, 2:23 PM IST

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಟಾಲಿವುಡ್​ನ ಪಾಪ್ಯುಲರ್​ ಆನ್​ಸ್ಕ್ರೀನ್​ ಜೋಡಿ. 2019ರಲ್ಲಿ ತೆರೆಕಂಡ ಈ ಜೋಡಿಯ ಚಿತ್ರ 'ಡಿಯರ್ ಕಾಮ್ರೇಡ್' ಯೂಟ್ಯೂಬ್‌ನಲ್ಲಿ 400 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಈ ಹಿನ್ನೆಲೆ, ತಾರಾ ಜೋಡಿ ಅಭಿಮಾನಿಗಳ ಮೇಲೆ ಪ್ರೀತಿಯ ಸುರಿ ಮಳೆಗೈದಿದ್ದಾರೆ. ವಿಜಯ್, ರಶ್ಮಿಕಾ ಇಬ್ಬರೂ ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ ಸ್ಟೋರಿ ಸೆಕ್ಷನ್​​ನಲ್ಲಿ, ಸಿನಿಮಾದ ಫೋಟೋ ಜೊತೆಗೆ ಹೃದಯಸ್ಪರ್ಶಿ ಬರಹವನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಇನ್​​ಸ್ಟಾಗ್ರಾಮ್​ ಸ್ಟೋರಿ (Rashmika Instagram Screenshot)

ಜೂನ್ 14ರಂದು ವಿಜಯ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಡಿಯರ್ ಕಾಮ್ರೇಡ್ ಚಿತ್ರದ ಫೋಟೋ ಶೇರ್ ಮಾಡಿದ್ದಾರೆ. ಆನ್​​​​ಸ್ಕ್ರೀನ್​ ತಾರಾಜೋಡಿ ನದಿ ತೀರದಲ್ಲಿ ಕುಳಿತಿರುವ ಸುಂದರ ಫೋಟೋವಿದು. "ನಿಮ್ಮಲ್ಲಿ 400 ಮಿಲಿಯನ್ ಜನರು ಡಿಯರ್​ ಕಾಮ್ರೇಡ್​​ ಅನ್ನು ವೀಕ್ಷಿಸಿದ್ದೀರಿ. 2019ರಲ್ಲಿ ಸಿನಿಮಾ ತೆರೆಕಂಡ ದಿನ ನಾವು ಅನುಭವಿಸಿದ ದುಃಖದಿಂದ, ಚಿತ್ರದ ಬಗ್ಗೆ ಹೊಂದಿರುವ ಅಪಾರ ಪ್ರೀತಿಯವರೆಗೆ ಒಂದು ಪಯಣ. ಡಿಯರ್​ ಕಾಮ್ರೇಡ್​​ ನಾನು ಇಷ್ಟಪಟ್ಟು ಮಾಡಿದ ಸಿನಿಮಾ, ನಾನು ಹೇಳಲು ಇಷ್ಟಪಡುವ ಕಥೆ'' ಎಂದು ಬರೆದುಕೊಂಡಿದ್ದಾರೆ. ಇದೇ ಸ್ಟೋರಿಯ ಸ್ಕ್ರೀನ್​ಶಾಟ್​ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ, 'ಡಿಯರ್ ಕಾಮ್ರೇಡ್ ಎಂದೆಂದಿಗೂ ನನಗೆ ಬಹಳ ವಿಶೇಷ' ಎಂದು ಬರೆದುಕೊಂಡಿದ್ದಾರೆ.

ವಿಜಯ್​ ಇನ್​​ಸ್ಟಾಗ್ರಾಮ್​ ಸ್ಟೋರಿ (Vijay Instagram Screenshot)

ಭರತ್ ಕಮ್ಮಾ ನಿರ್ದೇಶನದ ಡಿಯರ್ ಕಾಮ್ರೇಡ್ ತೆರೆಕಂಡು ಜುಲೈ 26ಕ್ಕೆ 5 ವರ್ಷ ಪೂರ್ಣಗೊಳ್ಳಲಿದೆ. ಈ ಚಿತ್ರ ವಿಜಯ್ ಮತ್ತು ರಶ್ಮಿಕಾ ಕಾಂಬಿನೇಶನ್​ನ ಎರಡನೇ ಸಿನಿಮಾ. 2018ರಲ್ಲಿ ಬಂದ ಮೊದಲ ಚಿತ್ರ ಗೀತ ಗೋವಿದಂ ಕೂಡ ಯಶಸ್ವಿಯಾಯಿತು. ಡಿಯರ್ ಕಾಮ್ರೇಡ್ ಚಿತ್ರಕ್ಕೆ ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸಿದ್ದರು. ಆದರೆ ಸಿನಿಮಾ ತೆರೆಕಂಡ ಸಂದರ್ಭ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ:ಸಂಕಷ್ಟದಿಂದ ಪಾರಾಗಲು ದರ್ಶನ್ ಭಾವನಿಂದ ಕೈಗಾದಲ್ಲಿ ವಿಶೇಷ ಪೂಜೆ - Special Puja by Darshan relative

ಇವರ ಸಿನಿಮಾ ವಿಚಾರ ಗಮನಿಸುವುದಾದರೆ, ರಶ್ಮಿಕಾ ಅವರು ಧನುಷ್ ಜೊತೆಗಿನ ತಮಿಳು ಚಿತ್ರ ಕುಬೇರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ತೆಲುಗು ಚಿತ್ರ ದಿ ಗರ್ಲ್‌ಫ್ರೆಂಡ್, ತಮಿಳು - ತೆಲುಗು ದ್ವಿಭಾಷಾ ಸಿನಿಮಾ ರೈನ್‌ಬೋ ಮತ್ತು ಬಾಲಿವುಡ್​ನ ಛಾವಾ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಛಾವಾ ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ತೆರೆಹಂಚಿಕೊಂಡಿದ್ದಾರೆ. ಅಲ್ಲದೇ, ಶೀಘ್ರದಲ್ಲೇ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗಿನ ಸಿಖಂದರ್ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಇನ್ನೂ, ಪುಷ್ಪ 2: ದಿ ರೂಲ್​ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಸದ್ಯ ಸಿನಿವಲಯದಲ್ಲಿ ಇದೇ ಸಿನಿಮಾದ ಸದ್ದು. ಮತ್ತೊಂದೆಡೆ, ವಿಜಯ್ ದೇವರಕೊಂಡ ಅವರು ರವಿಕಿರಣ್ ಅವರ ಆ್ಯಕ್ಷನ್ ಥ್ರಿಲ್ಲರ್​ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರವನ್ನು ಎಸ್​ವಿಸಿ59 ಎಂದು ಹೆಸರಿಸಲಾಗಿದೆ.

ಇದನ್ನೂ ಓದಿ:ಅಲ್ಲು ಅರ್ಜುನ್​ನನ್ನು ಅನ್​ಫಾಲೋ ಮಾಡಿದ ಸಾಯಿ ಧರಂ ತೇಜ್​​: ಈ ಬಗ್ಗೆ ನಿಹಾರಿಕಾ ಹೇಳಿದ್ದಿಷ್ಟು! - Tej unfollows Allu Arjun

ABOUT THE AUTHOR

...view details