ಕರ್ನಾಟಕ

karnataka

ETV Bharat / entertainment

ಬೆಳೆಯುತ್ತಿರೋ ಪ್ರತಿಭೆಗೆ ಕರೆಮಾಡಿದ ಯಶ್​: 'ನಮ್ಮೆಲ್ಲರನ್ನು ಮೀರಿಸುವಂತಾಗಿ, ಅದೇ ನಮಗೆ ಕೊಡೋ ಗೌರವ'ವೆಂದ ರಾಕಿಂಗ್​ ಸ್ಟಾರ್ - Yash calls Kanti - YASH CALLS KANTI

ಕನ್ನಡದ ಜನಪ್ರಿಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿ ಎಂಬ ಪಾತ್ರ ನಿರ್ವಹಿಸುತ್ತಿರುವ ನಟ ಧನುಷ್ ​​ 'ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​'ನ ಸ್ಪರ್ಧಿ ಕೂಡಾ ಹೌದು. ವೇದಿಕೆಯಲ್ಲಿದ್ದ ಕಂಠಿಗೆ ರಾಕಿಂಗ್​ ಸ್ಟಾರ್ ಯಶ್​ ಕರೆ ಮಾಡಿ ಶುಭ ಹಾರೈಸಿದ್ದಾರೆ. ನಟನ ಮಾತುಗಳು ಸ್ಫೂರ್ತಿದಾಯಕವಾಗಿದ್ದು, 'ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​' ಶೋನ ಪ್ರೋಮೋ ಸಖತ್​ ಸದ್ದು ಮಾಡುತ್ತಿದೆ.

ocking star yash
ರಾಕಿಂಗ್​ ಸ್ಟಾರ್ ಯಶ್ (ANI/ETV Bharat)

By ETV Bharat Karnataka Team

Published : Aug 9, 2024, 1:44 PM IST

Updated : Aug 9, 2024, 1:49 PM IST

ರಾಕಿಂಗ್​ ಸ್ಟಾರ್ ಯಶ್​​, ವಿಶೇಷ ಪರಿಚಯದ ಅಗತ್ಯವಿಲ್ಲ. ಕನ್ನಡ ಚಿತ್ರರಂಗದ ಸ್ವಯಂ ನಿರ್ಮಿತ ನಟ. ಕಿರುತೆರೆಯಿಂದ ಪಯಣ ಆರಂಭಿಸಿ ಸದ್ಯ ಹಿರಿತೆರೆಯಲ್ಲಿ ದೊಡ್ಡ ಮಟ್ಟದ ಸ್ಟಾರ್​​ಡಮ್​​ ಹೊಂದಿರುವ ಅತ್ಯಂತ ಜನಪ್ರಿಯ ನಟ. ಇದೀಗ ಬೆಳೆಯುತ್ತಿರೋ ಕಿರುತೆರೆ ಪ್ರತಿಭೆಗೆ ಕರೆಮಾಡಿ, ಅವರ ಏಳಿಗೆಗೆ ನಿಷ್ಕಲ್ಮಷ ಮನಸ್ಸಿನಿಂದ ಹಾರೈಸಿ ಗಮನ ಸೆಳೆದಿದ್ದಾರೆ.

ರಾಕಿ ಭಾಯ್​ ಯಶ್​ ನಿನ್ನೆಯಷ್ಟೇ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್'ನ ಮುಹೂರ್ತ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಮುಂದಿನ ಸಾಲಿನಲ್ಲಿ ತೆರೆಕಾಣಲಿರುವ ಈ ಸಿನಿಮಾ ಸೆಟ್ಟೇರಿದ್ದು, ಸಿನಿಪ್ರಿಯರು ಮತ್ತು ಅಭಿಮಾನಿಗಳ ಕುತೂಹಲ, ನಿರೀಕ್ಷೆಗಳು ದ್ವಿಗುಣಗೊಂಡಿವೆ. ಟಾಕ್ಸಿಕ್ ಮುಹೂರ್ತ ಸಮಾರಂಭದ ಫೋಟೋ - ವಿಡಿಯೋಗಳು ಸದ್ದು ಮಾಡುತ್ತಿರುವ ಹೊತ್ತಲ್ಲೇ ನಟನಿಗೆ ಸಂಬಂಧಿಸಿದ ಮತ್ತೊಂದು ವಿಶೇಷ ವಿಡಿಯೋವೀಗ ಕನ್ನಡಿಗರ ಮನ ಗೆದ್ದಿದೆ.

ಕಂಠಿಗೆ ಕರೆಮಾಡಿದ ಯಶ್​: ಕನ್ನಡದ ಜನಪ್ರಿಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿ ಎಂಬ ಪಾತ್ರ ಪ್ರೇಕ್ಷಕರ ಮನಮುಟ್ಟಿದೆ. ನಟ ಧನುಷ್​ ಈ ಪಾತ್ರಕ್ಕೆ ಜೀವ ತುಂಬುತ್ತಿದ್ದು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಂಠಿ ಪಾತ್ರಧಾರಿ ಧನುಷ್​​ 'ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​'ನ ಸ್ಪರ್ಧಿ ಕೂಡಾ ಹೌದು. ಇತ್ತೀಚೆಗೆ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​​ ಸಿನಿಮಾ ಸಾಂಗ್​​ಗೆ ಧನುಷ್​​ ಕುಣಿದು ಕುಪ್ಪಳಿಸಿದ್ದರು. ಅಂದಿನ ಪರ್ಫಾಮೆನ್ಸ್​ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಯಶ್​​ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಕಠಿ ಜೊತೆ ಫೋನ್​ ಮೂಲಕ ಮಾತನಾಡಿ, ಶುಭ ಹಾರೈಸಿದ್ದಾರೆ. 'ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​' ಶೋ ಅನಾವರಣಗೊಳಿಸಿರುವ ಪ್ರೊಮೋದಲ್ಲಿ ನಾವಿದನ್ನು ಕಾಣಬಹುದು.

'ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್' ಪ್ರೋಮೋ: ಪ್ರೋಮೋ ಅನಾವರಣಗೊಳಿಸಿರುವ ವಾಹಿನಿ, ''ತನ್ನನ್ನು ದೇವರಂತೆ ಆರಾಧಿಸೋ ಕಂಠಿಗೆ ಮಾತನಾಡಿ ಸ್ಫೂರ್ತಿ ತುಂಬಿದ ರಾಕಿಂಗ್ ಸ್ಟಾರ್ ಯಶ್. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಲವ್​​ ಅಂಡ್​​ ರಿಮ್ಯಾನ್ಸ್ ರೌಂಡ್​. ಶನಿ - ಭಾನು ರಾತ್ರಿ 7:30ಕ್ಕೆ'' ಎಂದು ಬರೆದುಕೊಂಡಿದೆ. ವಾರಾಂತ್ಯ ಪ್ರಸಾರವಾಗಲಿರುವ ಸಂಪೂರ್ಣ ಕಾರ್ಯಕ್ರಮದಲ್ಲಿ ಯಶ ಮತ್ತು ಕಂಠಿಯ ಸಂಪೂರ್ಣ ಮಾತುಕತೆಯನ್ನು ಕೇಳ ಬಹುದಾಗಿದೆ. ಸದ್ಯ ಈ ಪ್ರೋಮೋ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಇದನ್ನೂ ಓದಿ:ಲೈಟ್ ಬಾಯ್​​​ನಿಂದ 'ಟಾಕ್ಸಿಕ್'ಗೆ ಕ್ಲ್ಯಾಪ್ ಮಾಡಿಸಿದ ರಾಕಿ ಬಾಯ್​​: ಇಂದೇ ಶೂಟಿಂಗ್​ನಲ್ಲಿ ಭಾಗಿಯಾಗಲಿರುವ ಯಶ್​​​ - Yash Toxic

ಪ್ರೋಮೋದಲ್ಲಿ, ಮೊದಲಿಗೆ ನಿರೂಪಕಿ ಅನುಶ್ರೀ ನಿಮಗೊಂದು ಸರ್ಪ್ರೈಸ್​ ಇದೆ ಎಂದು ಹೇಳುತ್ತಿದ್ದಂತೆ ಕರೆ ಬಂದಿದೆ. 'ನಮಸ್ತೆ ಕಂಠಿ ಅವ್ರೇ ಹೇಗಿದ್ದೀರಿ' ಎಂಬ ಮಾತು ಕೇಳಿಬರುತ್ತದೆ. ಯಶ್​ ದನಿ ಕೇಳುತ್ತಿದ್ದಂತೆ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅಣ್ಣಾ ಎಂದು ಸ್ಪರ್ಧಿ ಸಂತಸಗೊಂಡಿದ್ದಾರೆ. ನಿಮ್ಮ ಪರ್ಫಾಮೆನ್ಸ್ ನೋಡ್ದೆ. ಮೈಂಡ್​​​ಬ್ಲೋಯಿಂಗ್​​. ನನಗೆ ತುಂಬಾನೇ ಖುಷಿ ಆಯ್ತು. ಬೆಳೆಯುವಾಗ ಯಾರು ಬೆನ್ನು ತಟ್ಟುತ್ತಾರೆ ಅನ್ನೋದು ಬಹಳ ಮುಖ್ಯ. ಶಿವಣ್ಣ ಸ್ಪೂರ್ತಿ. ನಮ್ಮನ್ನೆಲ್ಲಾ ಮೀರಿ ನೀವು ಬೆಳೆದು ಕನ್ನಡ ತಾಯಿ ಸೇವೆ ಮಾಡೋ ಹಾಗೇ ಆಗ್ಬೇಕು. ಅದು ನಮಗೆ ನೀವು ಕೊಡೋ ನಿಜವಾದ ಗೌರವ ಎಂದು ಯಶ್​ ತಿಳಿಸಿದ್ದಾರೆ. ಕಂಠಿ, ಸಲಾಮ್​ ರಾಕಿ ಭಾಯ್​ ಎಂದು ಹೇಳಿದ್ದು ಪ್ರೋಮೋ ಪೂರ್ಣಗೊಂಡಿದೆ.

ಇದನ್ನೂ ಓದಿ:'ಭೀಮ'ನ ಅದ್ಧೂರಿ ಎಂಟ್ರಿ: ವಿಶೇಷಚೇತನ ಅಭಿಮಾನಿಯನ್ನು ಥಿಯೇಟರ್​ಗೆ ಸ್ವಾಗತಿಸಿದ ದುನಿಯಾ ವಿಜಯ್​​ - Bheema Grand Release

ಕಾರ್ಯಕ್ರಮದಲ್ಲಿದ್ದ ಸ್ಪರ್ಧಿಗಳು ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ. ವೇದಿಕೆಯಲ್ಲಿದ್ದವರು, ತೀರ್ಪುಗಾರರು ಆಶ್ಚರ್ಯದ ಜೊತೆ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Last Updated : Aug 9, 2024, 1:49 PM IST

ABOUT THE AUTHOR

...view details