ಕರ್ನಾಟಕ

karnataka

ETV Bharat / entertainment

ಸ್ಯಾಂಡಲ್​ವುಡ್​​ ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​: ವಿಡಿಯೋ ನೋಡಿ - DHANANJAY

ಸ್ಯಾಂಡಲ್​ವುಡ್​​ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​​ ಕನ್ನಡ ಚಿತ್ರರಂಗದ ಗಣ್ಯರನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.

Dhananjay invites celebrities to his wedding
ಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​ (Photo: ETV Bharat)

By ETV Bharat Entertainment Team

Published : Jan 10, 2025, 3:56 PM IST

ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಡಾಲಿ ಧನಂಜಯ್​​ ತಮ್ಮ ಲಗ್ನಪತ್ರಿಕೆ ಹಂಚುವುದರಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಈಗಾಗಲೇ ಹಲವು ಸಿನಿಗಣ್ಯರು, ರಾಜಕಾರಣಿಗಳು ಹಾಗೂ ಮಠಾಧೀಶರುಗಳಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಿರುವ ಸ್ಯಾಂಡಲ್​ವುಡ್​​ ನಟರಾಕ್ಷಸ, ಇದೀಗ ಹಲವು ನಟ-ನಟಿಯರಿಗೆ ಲಗ್ನಪತ್ರಿಕೆ ನೀಡುವ ಮೂಲಕ ಮದುವೆಗೆ ಆಹ್ವಾನಿಸಿದ್ದಾರೆ. ಪ್ರಮುಖವಾಗಿ ನಟ ರಾಘವೇಂದ್ರ ರಾಜ್​​ಕುಮಾರ್‌, ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​​​ಕುಮಾರ್​, ರಿಯಲ್‌ ಸ್ಟಾರ್‌ ಉಪೇಂದ್ರ ದಂಪತಿ, ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನ ನಾಗರಾಜ್‌ ಸೇರಿದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ಕಷ್ಟ ಪಟ್ಟು ಮೇಲೆ ಬಂದವರ ಪೈಕಿ ಪ್ರತಿಭಾನ್ವಿತ ಡಾಲಿ ಧನಂಜಯ್​ ಕೂಡಾ ಓರ್ವರು. ಪ್ರಸ್ತುತ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ಅಮೋಘ ಅಭಿನಯ ಮಾತ್ರವಲ್ಲದೇ ನಿರ್ಮಾಣದಲ್ಲೂ ಗುರುತಿಸಿಕೊಂಡಿದ್ದಾರೆ. ತಮ್ಮದೇ ಡಾಲಿ ಪಿಕ್ಷರ್ಸ್​​ ಮೂಲಕ ನವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಹೊಸಬರ ಸಿನಿಮಾಗಳು ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕೂಡಾ ಕಂಡಿದೆ. ಹೀಗೆ ತಮ್ಮ ಸಿನಿಮಾ ಸಕ್ಸಸ್​​​ನಿಂದಾಗಿ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ಡಮ್​ ಗಿಟ್ಟಿಸಿಕೊಂಡಿರುವ ತಾರೆಯ ಮದುವೆ ಕುರಿತು ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರಶ್ನೆಗಳನ್ನೆತ್ತಿದ್ದರು. ಸ್ಯಾಂಡಲ್‌ವುಡ್‌ನ ಮೋಸ್ಟ್​ ಎಲಿಜಬಲ್ ಬ್ಯಾಚುಲರ್, ಹ್ಯಾಂಡ್ಸಮ್ ಹಂಕ್ ಆಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ಮುಂದಿನ ತಿಂಗಳು ಹಸೆಮಣೆ ಏರುತ್ತಿದ್ದಾರೆ. ಮದುವೆ ಯಾವಾಗ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಕಳೆದ ದೀಪಾವಳಿ ಸಂದರ್ಭ ಉತ್ತರ ಕೊಟ್ಟಿದ್ದರು.

ಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​ (ETV Bharat)

ಹೌದು, ನವೆಂಬರ್​ 1ರಂದು ನಟ-ನಿರ್ಮಾಪಕ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಆಕರ್ಷಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಪ್ರೀ ವೆಡ್ಡಿಂಗ್​​ ಸ್ಪೆಷಲ್ ಶೂಟ್​ ಮೂಲಕ​ ತಮ್ಮ ಬಾಳಸಂಗಾತಿಯನ್ನು ಕರುನಾಡಿಗೆ ಪರಿಚಯಿಸಿದ್ದರು. ಡಾಲಿ ಯಾರಾದರು ನಟಿಯನ್ನು ವರಿಸಲಿದ್ದಾರೆ ಅಥವಾ ಬೇರೆ ಕ್ಷೇತ್ರದವರೇ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಫೈನಲಿ ನಟ ತಮ್ಮ ಗೆಳತಿ, ವೃತ್ತಿಯಲ್ಲಿ ವೈದ್ಯೆಯಾಗಿರುವ ಗೈನಕಾಲಜಿಸ್ಟ್ ಧನ್ಯತಾ ಅವರನ್ನು ವರಿಸಲಿದ್ದಾರೆ.

ವಿಡಿಯೋ ಹಂಚಿಕೊಂಡಿದ್ದ ನಟ, ''ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು. ನಾನು ಧನ್ಯ. ಇಂತಿ ನಿಮ್ಮವ ಧನಂಜಯ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:ಆರ್​ಆರ್​ಆರ್​ ಬಳಿಕ 'ಗೇಮ್​ ಚೇಂಜರ್​'​: ಮೊದಲ ದಿನವೇ ₹65 ಕೋಟಿಗೂ ಅಧಿಕ ಗಳಿಕೆ ಸಾಧ್ಯತೆ

2024ರ ಡಿಸೆಂಬರ್​ 15ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ನೀಡಿ, ಆಹ್ವಾನಿಸಿದ್ದರು. ನಂತರ ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್​, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಗಣ್ಯರನ್ನು ಮದುವೆಗೆ ಆಹ್ವಾನಿಸಿದ್ದರು. ಇದೀಗ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಿಗೆ ತಮ್ಮ ಲಗ್ನಪತ್ರಿಕೆ ಹಂಚಿದ್ದಾರೆ.

ಇದನ್ನೂ ಓದಿ:ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್​: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ

ವಿವಾಹ ಮಹೋತ್ಸವ ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಫೆಬ್ರವರಿ 16ರಂದು ಜರುಗಲಿದೆ. ಶನಿವಾರ (ಫೆ.15) ಆರತಕ್ಷತೆ ನಡೆದರೆ, ಭಾನುವಾರ ವಿವಾಹ ಅದ್ಧೂರಿಯಾಗಿ ನೆರವೇರಲಿದ್ದು, ಸಮಾರಂಭಕ್ಕೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಸಾಕ್ಷಿಯಾಗುವ ನಿರೀಕ್ಷೆಯಿದೆ.

ABOUT THE AUTHOR

...view details