ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಪೊಲಿಟಿಕಲ್ ಡ್ರಾಮಾ 'ಗೇಮ್ ಚೇಂಜರ್' ಇಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಸಿನಿಮಾ ಕೋಟ್ಯಂತರ ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ಹಬ್ಬದ ವಾತಾವರಣ ಮೂಡಿಸಿದೆ. ಶಂಕರ್ ನಿರ್ದೇಶನದ ಸಿನಿಮಾ ತನ್ನ ಮೊದಲ ದಿನದ ಮೊದಲ ಪ್ರದರ್ಶನದಲ್ಲೇ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದೆ. ದೇಶಾದ್ಯಂತ ಮಾರ್ನಿಂಗ್ ಶೋಗಳನ್ನು ಆಯೋಜಿಸಲಾಗಿತ್ತು. ಆದ್ರೆ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಬಹುತೇಕ ಮೆಚ್ಚುಗೆ ಪಡೆದುಕೊಂಡಿದೆ.
ಸುಮಾರು 450 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ 'ಗೇಮ್ ಚೇಂಜರ್' ಚಿತ್ರ ನಿರ್ದೇಶಕ ಮತ್ತು ನಟರಿಗಿಬ್ಬರಿಗೂ ಪ್ರಮುಖ ಬಿಡುಗಡೆಯಾಗಿದ್ದು, ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಆದಾಗ್ಯೂ, ನಿರ್ಮಾಪಕರಿಗೆ ನಿರಾಶೆ ಮೂಡಿಸುವಂತೆ, ಚಿತ್ರ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿದೆ. ಅನೇಕ ಎಕ್ಸ್ ಬಳಕೆದಾರರು ಗೇಮ್ ಚೇಂಜರ್ ಅನ್ನು ಒಮ್ಮೆ ಮಾತ್ರ ವೀಕ್ಷಿಸಬಹುದಾದ ಚಿತ್ರ ಎಂದು ಉಲ್ಲೇಖಿಸಿದ್ದಾರೆ.
Excellent performance by Ramcharan and Sj Surya.
— Clay Patrick Jensen (@DattuClay) January 10, 2025
Good story, poor narration and dead screenplay and bad writing.
Songs aren’t so good. Bgm is decent.
Sound mixing issues unayi few places.
Excessive usage of Mocobot and bad CGI.
Time for Shankar sir retirement. #GameChanger
ಸಿನಿಮಾದ ಗ್ರ್ಯಾಂಡ್ ರಿಲೀಸ್ ನಂತರ ಅನೇಕ ಅಭಿಮಾನಿಗಳು ಮತ್ತು ಸಿನಿಪ್ರಿಯರು ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ ಎಕ್ಸ್ನಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ನೆಗೆಟಿವ್ ಪಾಸಿಟಿವ್ ಎರಡೂ ಇದ್ದರೂ, ವಿಮರ್ಶೆಗಳಲ್ಲಿ ಸಾಮಾನ್ಯ ವಿಷಯವೆಂದರೆ ಬಹುತೇಕರು ರಾಮ್ ಚರಣ್ ಅವರ ಅಭಿನಯವನ್ನು ಗುಣಗಾನ ಮಾಡಿದ್ದಾರೆ. ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು, ತಮ್ಮ ಮ್ಯಾಗ್ನೆಟಿಕ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಅಮೋಘ ಅಭಿನಯದಿಂದ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ.
ಎಕ್ಸ್ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, "ರಾಮ್ ಚರಣ್ ತಮ್ಮ ವರ್ಚಸ್ಸಿನಿಂದ ಸ್ಕ್ರೀನ್ ಮೇಲೆ ರಾರಾಜಿಸಿದ್ದಾರೆ" ಎಂದು ತಿಳಿಸಿದ್ದಾರೆ. ರಾ ಮಚಾ ಮಚಾ.. ಹಾಡಿನ ಅವರ ಡ್ಯಾನ್ಸ್ ಅನ್ನು ಅಭಿಮಾನಿಗಳು ಗುಣಗಾನ ಮಾಡಿದ್ದಾರೆ.
Game Changer is a waste of time for Ram Charan which will never come back! What a horrible piece of cinema this is, terribly inconsistent and cringe pro max!@shankarshanmugh exit please🙏
— Charlie Harper 🇮🇳 (@suryatej_borra) January 9, 2025
ಆದಾಗ್ಯೂ, ಚಿತ್ರದ ನಿರೂಪಣೆ ಮತ್ತು ವೇಗಕ್ಕೆ ಪ್ರೇಕ್ಷಕರಿಂದ ಟೀಕೆ ವ್ಯಕ್ತವಾಗಿದೆ. ರಾಮ್ ಚರಣ್ ಮತ್ತು ಎಸ್.ಜೆ.ಸೂರ್ಯ ಇಬ್ಬರೂ ಅಮೋಘವಾಗಿ ಅಭಿನಯಿಸಿದ್ದರೂ, ಚಿತ್ರವನ್ನು ಕಾರ್ಯಗತಗೊಳಿಸುವಲ್ಲಿ ಎಡವಿದ್ದಾರೆಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. "ರಾಮ್ ಚರಣ್ ಮತ್ತು ಎಸ್.ಜೆ.ಸೂರ್ಯ ಅವರ ಅಭಿನಯ ಅತ್ಯುತ್ತಮ, ಆದರೆ ನಿರೂಪಣೆ ಕಳಪೆಯಾಗಿದೆ ಮತ್ತು ಸ್ಕ್ರೀನ್ಪ್ಲೇ ಕಂಪ್ಲೀಟ್ಲಿ ಡೆಡ್" ಎಂದು ಎಕ್ಸ್ ಬಳಕೆದಾರರೋರ್ವರು ತಿಳಿಸಿದ್ದಾರೆ. ಮತ್ತೊಬ್ಬರು ಈ ಚಿತ್ರದಿಂದ "ರಾಮ್ ಚರಣ್ ಸಮಯ ವ್ಯರ್ಥ" ಎಂದು ತಿಳಿಸಿದ್ದಾರೆ. ರಾಮ್ ಚರಣ್ ಈ ಪೊಲಿಟಿಕಲ್ ಡ್ರಾಮಾಗೆ 4 ವರ್ಷಗಳನ್ನು ಹೇಗೆ ನೀಡಿದರು ಎಂಬುದನ್ನು ಒತ್ತಿ ಹೇಳಿದ್ದಾರೆ. ಸೋಲೋ ಹೀರೋ ಆಗಿ ನಾಲ್ಕು ವರ್ಷಗಳ ಬಳಿಕ ಬಂದ ರಾಮ್ ಚರಣ್ ಅವರ ಚಿತ್ರ ಇದಾಗಿದೆ.
Game Changer Review:
— avengerallyTFI (@avengerallytfi) January 9, 2025
Game Changer is a strictly above-average political entertainer with its highs and lows. The movie opens with an oora mass train fight scene featuring Ram Charan, setting the tone with sheer energy and action. This is followed by the vibrant “Ra Macha Macha”…
ಟೀಕೆಗಳ ಹೊರತಾಗಿಯೂ, ಗೇಮ್ ಚೇಂಜರ್ ತನ್ನದೇ ಆದ ಉತ್ತಮ ಕ್ಷಣಗಳನ್ನು, ಪಾಸಿಟಿವ್ ರೆಸ್ಪಾನ್ಸನ್ನೂ ಹೊಂದಿದೆ. ಚಿತ್ರದ ಗಮನಾರ್ಹ ಹೈಲೈಟ್ ಅಂದ್ರೆ ಅದು ಮಧ್ಯಂತರ ತಿರುವಾಗಿದ್ದು, ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ. ಕಥೆ ಹೇಳುವ ಕೌಶಲ್ಯಕ್ಕಾಗಿ ಶಂಕರ್ ಅವರನ್ನು ಪ್ರಶಂಸಿಸಲಾಗಿದೆ.
ಮತ್ತೊಂದೆಡೆ, ಕಿಯಾರಾ ಅಡ್ವಾಣಿ ಮತ್ತು ರಾಮ್ ಚರಣ್ ನಡುವಿನ ರೊಮ್ಯಾನ್ಸ್ ಅತಿಯಾಗಿದೆ ಎಂದು ಹಲವರು ತಿಳಿಸಿದ್ದಾರೆ. ಕಿಯಾರಾ ಅಡ್ವಾಣಿ ಅವರೊಂದಿಗಿನ ಪ್ರೇಮಕಥೆಯ ಕ್ಷಣಗಳು ಅನಗತ್ಯವಾಗಿ ಹೆಚ್ಚಿದೆ ಎಂದು ಓರ್ವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಇಂದು ತೆರೆಕಾಣಬೇಕಿದ್ದ "ಸಂಜು ವೆಡ್ಸ್ ಗೀತಾ 2" ಮುಂದೂಡಿಕೆ: ಹೊಸ ಬಿಡುಗಡೆ ದಿನಾಂಕ?
#GameChanger
— 𝗡 𝗜 𝗞 𝗛 𝗜 𝗟 (@NIKHIL_SUPERFAN) January 9, 2025
Racy and engaging political entertainer 👍👍
Not in the league of Shankar’s classics but a decent comeback from his last outing
Story and screenplay are outdated but the jet pace and cat and mouse fight between Ram Charan and SJ Suryah saved it
ಮಿಶ್ರ ವಿಮರ್ಶೆಗಳೊಂದಿಗೆ ಆರಂಭ ಕಂಡಿರುವ ಗೇಮ್ ಚೇಂಜರ್ ವಾರಾಂತ್ಯ ಮತ್ತು ಸಂಕ್ರಾಂತಿ ರಜಾದಿನಗಳನ್ನು ಸದುಪಯೋಗಪಡಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ಎಲ್ಲಾ ಭಾಷೆಗಳನ್ನೂ ಒಳಗೊಂಡಂತೆ ಚಿತ್ರದ ವ್ಯವಹಾರ 43.55 ಕೋಟಿ ರೂ.ಗಳನ್ನು ದಾಟಿದೆ. ಮತ್ತೊಂದೆಡೆ, ಸಿನಿಮಾ ವ್ಯವಹಾರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಅವರು ವಿಶ್ವಾದ್ಯಂತ ಚಿತ್ರ 65 ಕೋಟಿ ರೂಪಾಯಿ ದಾಟಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಟಾಕ್ಸಿಕ್ ಗ್ಲಿಂಪ್ಸ್ 'ಟ್ರೆಂಡಿಂಗ್ #1': ರಾಕಿಭಾಯ್ನ ಗ್ಯಾಂಗ್ಸ್ಟರ್ ಅವತಾರಕ್ಕೆ ಫ್ಯಾನ್ಸ್ ಕಾತರ
ಸಿನಿಮಾ ನೋಡುವ ರೀತಿ, ಸ್ವೀಕರಿಸುವ ರೀತಿ, ಅರ್ಥ ಮಾಡಿಕೊಳ್ಳುವ ರೀತಿ ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ವಿಭಿನ್ನವಾಗಿರುತ್ತದೆ. ಪ್ರತೀ ಅಭಿಪ್ರಾಯಗಳು ವೈಯಕ್ತಿಕ. ಸಿನಿಮಾ ಗೆಲುವು ಪ್ರೇಕ್ಷಕರ ಪ್ರತಿಕ್ರಿಯೆ ಜೊತೆಗೆ ಬಾಕ್ಸ್ ಆಫೀಸ್ ಅಂಕಿ ಅಂಶಗಳನ್ನೂ ಅವಲಂಭಿಸಿದೆ. ಚಿತ್ರ ಎಷ್ಟರ ಮಟ್ಟಿಗೆ ಗಳಿಕೆ ಮಾಡಲಿದೆ ಅನ್ನೋದು ನಾಳೆ ಬೆಳಗ್ಗೆ ತಿಳಿಯಲಿದೆ.