ETV Bharat / state

2 ಲಕ್ಷಕ್ಕೂ ಅಧಿಕ ಅಂಚೆ ಚೀಟಿ ಕಣ್ತುಂಬಿಕೊಂಡ ಕುಂದಾನಗರಿ ಜನ! - POSTAGE STAMPS EXHIBITION

ಮೂರು ದಿನಗಳ ಅಂಚೆ ಚೀಟಿಗಳ ಪ್ರದರ್ಶನವನ್ನು 50 ಸಾವಿರಕ್ಕೂ ಅಧಿಕ ಜನರು ಕಂಡು ರೋಮಾಂಚನಗೊಂಡರು.

three-days-postage-stamps-exhibition-in-belagavi
ಬೆಳಗಾವಿಯಲ್ಲಿ ಗಮನ ಸೆಳೆದ ಅಂಚೆ ಚೀಟಿಗಳ ಪ್ರದರ್ಶನ: ಏನಂತಾರೆ ಅಂಚೆ ಚೀಟಿ ಸಂಗ್ರಹಕಾರರು..? (ETV Bharat)
author img

By ETV Bharat Karnataka Team

Published : 4 hours ago

ಬೆಳಗಾವಿ: ಮೇಲ್, ವಾಟ್ಸ್​​ಆ್ಯಪ್​​ , ಮೆಸ್ಸೆಂಜರ್, ಫೇಸ್​​ಬುಕ್, ಇನ್​​​​ಸ್ಟಾಗ್ರಾಂ ಕಾಲದಲ್ಲೂ ಬೆಳಗಾವಿಯಲ್ಲಿ ಆಯೋಜಿಸಿದ್ದ ಅಂಚೆ ಚೀಟಿಗಳ ಪ್ರದರ್ಶನ ಜನರನ್ನು ಆಕರ್ಷಿಸಿತು. ಹಳೆ ಕಾಲದಿಂದ ಹಿಡಿದು ಈವರೆಗಿನ ಅಂಚೆ ಚೀಟಿಗಳನ್ನು 50 ಸಾವಿರಕ್ಕೂ ಅಧಿಕ ಜನರು ಬೆರಗಿನಿಂದ ವೀಕ್ಷಿಸಿದರು.

ಅಂಚೆ ಇಲಾಖೆ, ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಗಳ ಗ್ರೂಪ್(ಬಿಪಿಎಎನ್‌ಜಿ) ಸಹಯೋಗದೊಂದಿಗೆ ನಗರದ ಮಹಾವೀರ ಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ‘ಇಕ್ಷುಪೆಕ್ಸ್‌ – 2025’ ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನಕ್ಕೆ ಇಂದು ಅದ್ಧೂರಿ ತೆರೆ ಬಿದ್ದಿತು. ಸಾವಿರಾರು ವಿದ್ಯಾರ್ಥಿಗಳು, ಅಂಚೆ ಚೀಟಿ ಪ್ರಿಯರು ದೇಶ, ವಿದೇಶಗಳ ಅಂಚೆ ಚೀಟಿಗಳನ್ನು ನೋಡಿ ಪುಳಕಿತರಾದರು.

ಬೆಳಗಾವಿಯಲ್ಲಿ ಗಮನ ಸೆಳೆದ ಅಂಚೆ ಚೀಟಿಗಳ ಪ್ರದರ್ಶನ (ETV Bharat)

2 ಲಕ್ಷಕ್ಕೂ ಅಧಿಕ ಅಂಚೆ ಚೀಟಿ ಪ್ರದರ್ಶನಕ್ಕಿಟ್ಟಿದ್ದರು: ಜಿಲ್ಲೆ ಮತ್ತು ರಾಜ್ಯದ ವಿವಿಧೆಡೆಯಿಂದ 165 ಜನ ಸಂಗ್ರಹಕಾರರು ತಾವು ಸಂಗ್ರಹಿಸಿದ ಸುಮಾರು 2 ಲಕ್ಷಕ್ಕೂ ಅಧಿಕ ಅಂಚೆ ಚೀಟಿಗಳನ್ನು 180 ಫ್ರೇಮ್ ಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇತಿಹಾಸ, ಭೂಗೋಳಶಾಸ್ತ್ರ, ವಿಜ್ಞಾನ, ಕೃಷಿ, ಕ್ರೀಡೆ, ಅಂತರಿಕ್ಷ ಯಾನ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಒಳಗೊಂಡ ಅಂಚೆ ಚೀಟಿಗಳೂ ಇಲ್ಲಿದ್ದವು. ಬುದ್ಧ, ಬಸವಣ್ಣ, ರಾಣಿ ಚನ್ನಮ್ಮ, ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಪಂಡಿತ್ ಜವಾಹರಲಾಲ್ ನೆಹರೂ, ಬಿ.ಆರ್.ಅಂಬೇಡ್ಕರ್‌ ಸೇರಿ ಹಲವು ಮಹಾನ್‌ ನಾಯಕರ ಅಂಚೆ ಚೀಟಿಗಳು ಗಮನ ಸೆಳೆದವು.

1947ರಿಂದ ಇಲ್ಲಿಯವರೆಗೂ ಭಾರತ ಸೇರಿ ವಿವಿಧ ದೇಶಗಳು ಬಿಡುಗಡೆಗೊಳಿಸಿರುವ 5 ರೂ.ಯಿಂದ 200 ರೂ.ವರೆಗಿನ ಅಂಚೆ ಚೀಟಿಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದು ವಿಶೇಷವಾಗಿತ್ತು. ಸ್ವಿಟ್ಸ್ ಆಫ್ ಬೆಳಗಾವಿ ಕುಂದಾ, ಕರದಂಟು, ಐನಾಪುರ ಪೇಡಾ ಮತ್ತು ಮಂಡಿಗೆ ಅಂಚೆ ಚೀಟಿಗಳು ಆಕರ್ಷಿಸಿದವು. ಇದೇ ವೇಳೆ ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ ದಿ.ಉಮೇಶ ಕತ್ತಿ ಅವರ ಲಕೋಟೆಯನ್ನು ಬಿಡುಗಡೆಗೊಳಿಸಿದ್ದು ವಿಶೇಷ.

ಈಟಿವಿ ಭಾರತ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿ ಜೀಯಾ ಥರಪಟ್ಟಿ ಮಾತನಾಡಿ, ಅಂಚೆಚೀಟಿಗಳನ್ನು ಸಂಗ್ರಹಿಸುವಂತೆ ನಮ್ಮ ಶಿಕ್ಷಕರೊಬ್ಬರು ಹೇಳಿದರು. ಇದರಲ್ಲಿ ನನಗೂ ಆಸಕ್ತಿ ಬಂತು. ಇದೇ ಮೊದಲ ಬಾರಿ ಪ್ರದರ್ಶನದಲ್ಲಿ ಭಾಗವಹಿಸಿದ್ದು, ತುಂಬಾ ಖುಷಿಯಾಗುತ್ತದೆ. ಸದ್ಯ ಯುನೆಸ್ಕೋ ಹೆರಿಟೇಜ್ ಆಫ್ ಸೈನ್ಸ್ ಇಂಡಿಯಾ ಚೀಟಿಗಳನ್ನು ಸಂಗ್ರಹಿಸಿದ್ದು, ಮುಂದೆ ಇನ್ನು ಹೆಚ್ಚು ಚೀಟಿಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದೇನೆ ಎಂದರು.

ಮಗಳ ಪ್ರಯತ್ನ ಖುಷಿ ಕೊಟ್ಟಿದೆ: ನಮ್ಮ ಮಗಳು ಜೀಯಾ, ಗೂಗಲ್​​ನಲ್ಲಿ ಮಾಹಿತಿ ಪಡೆದು ಬರೆದಿದ್ದಾಳೆ. ಮಗಳ ಈ ಪ್ರಯತ್ನ ಮತ್ತು ಹವ್ಯಾಸ ನಮಗೆ ತುಂಬಾ ಖುಷಿ ತಂದಿದೆ. ಇಲ್ಲಿ ನಾನಾ ರೀತಿಯ ಅಂಚೆ ಚೀಟಿಗಳನ್ನು ನೋಡಿದೇವು ಎನ್ನುತ್ತಾರೆ ನಿರ್ಮಲಾ ಥರಪಟ್ಟಿ.

50ಕ್ಕೂ ಅಧಿಕ ದೇಶಗಳ ಅಂಚೆ ಚೀಟಿಗಳ ಸಂಗ್ರಹ: ನ್ಯಾಯವಾದಿಯೂ ಆಗಿರುವ ಸಂಗ್ರಹಕಾರ ವಿನಾಯಕ ಲೇಂಡಿ ಮಾತನಾಡಿ, ಎ ಯಿಂದ ವಾಯ್ ವರೆಗೆ ಸುಮಾರು 50ಕ್ಕೂ ಅಧಿಕ ದೇಶಗಳ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದೇನೆ. ಇವುಗಳನ್ನು ನೋಡಿದ ವಿದ್ಯಾರ್ಥಿಗಳು ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂಚೆ ಇಲಾಖೆ ನನಗೆ ಗುರುತಿಸಿಕೊಳ್ಳಲು ಒಂದು ಒಳ್ಳೆಯ ವೇದಿಕೆ ಕೊಟ್ಟಿದೆ ಎಂದರು.

ಉತ್ತಮ ಸಂಗ್ರಾಹಕರಿಗೆ ಪ್ರಶಸ್ತಿ: "ಅಂಚೆಚೀಟಿಗಳ ಪ್ರದರ್ಶನದ ಸ್ಪರ್ಧೆ ಕೂಡ ನಡೆಸುತ್ತಿದ್ದೇವೆ. ಯಾರು ಚೆನ್ನಾಗಿ ಸಂಗ್ರಹಿಸಿರುತ್ತಾರೆ ಅವರಿಗೆ ಬಹುಮಾನ‌ ನೀಡಲಿದ್ದೇವೆ. ದೇಶ, ವಿದೇಶಗಳ ಮತ್ತು ಬಂಗಾರ, ಬೆಳ್ಳಿ ಅಂಚೆ ಚೀಟಿಗಳು ಇಲ್ಲಿವೆ. ವಿದ್ಯಾರ್ಥಿಗಳು ಪ್ರತಿಯೊಂದು ಚೀಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ‌. ಅಲ್ಲದೇ ನಾವೂ ಈ ರೀತಿ ಸಂಗ್ರಹಿಸಬೇಕು ಅಂದುಕೊಂಡು ತೆರಳುತ್ತಿದ್ದಾರೆ. ಅಂಚೆ ಸಂಗ್ರಹಕಾರರನ್ನು ಉತ್ತೇಜಿಸಬೇಕು ಎಂಬ ನಮ್ಮ ಉದ್ದೇಶ ಈಡೇರಿದೆ" ಎಂದು ಅಂಚೆ ಇಲಾಖೆ ಸಹಾಯಕ ಸೂಪರಿಂಟೆಂಡೆಂಟ್ ಈರಣ್ಣ ಮುತ್ನಾಳೆ ಹರ್ಷ ವ್ಯಕ್ತಪಡಿಸಿದರು.

ಮಕ್ಕಳಿಗೋಸ್ಕರ ಈ ಪ್ರದರ್ಶನ: ಅಂಚೆ ಚೀಟಿ ಸಂಗ್ರಹ ಕಚೇರಿ ಉಸ್ತುವಾರಿ ರಮೇಶ ದಾನಶೆಟ್ಟಿ ಮಾತನಾಡಿ, ಮಕ್ಕಳಿಗೋಸ್ಕರವೇ ಈ ಪ್ರದರ್ಶನ ಏರ್ಪಡಿಸಲಾಗಿತ್ತು. ಇಂದಿನ ಡಿಜಿಟಲ್ ಯುಗದಲ್ಲೂ ಮಕ್ಕಳಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಸಪ್ರಶ್ನೆ, ಪತ್ರ ಬರೆಯುವ ಸ್ಪರ್ಧೆಯಲ್ಲಿ‌ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ‌ ವಿತರಿಸಲಾಯಿತು. ಅದೇ ರೀತಿ ಭಾಗಿಯಾದ ಅಂಚೆ ಚೀಟಿ ಸಂಗ್ರಹಕಾರರಿಗೂ ಬಹುಮಾನ ವಿತರಿಸಲಾಯಿತು‌ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಂಚೆ ಚೀಟಿ ಸಂಗ್ರಹ: ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ ಉಡುಪಿಯ ನಿವೃತ್ತ ನೌಕರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.