ETV Bharat / state

ಈ ಸರ್ಕಾರದ ರೀತಿ ನನ್ನ ಸಹಿ ಮಾರಾಟಕ್ಕಿಟ್ಟಿಲ್ಲ; ಎಚ್​ಡಿ ಕುಮಾರಸ್ವಾಮಿ - KUMARASWAMY SLAMS CONGRESS

ಈ ಸರ್ಕಾರದಲ್ಲಿ ಯಾವ ರೀತಿ ಕಮಿಷನ್ ನಡೆಯುತ್ತದೆ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ.

KN_BNG_01_JP_Nagar_Union_Minister_HD_Kumaraswamy_Talk_Script_7208083
ಚ್​ಡಿ ಕುಮಾರಸ್ವಾಮಿ (Etv bharat)
author img

By ETV Bharat Karnataka Team

Published : 3 hours ago

ಬೆಂಗಳೂರು: ನಾನು ಸತ್ಯ ಹರಿಶ್ಚಂದ್ರ ಎಂದು ಎಲ್ಲೂ ಹೇಳಿಕೊಂಡಿಲ್ಲ. ಹಾಗೇ ಈ ಸರ್ಕಾರದ ರೀತಿ ನನ್ನ ಸಹಿಯನ್ನು ಮಾರಾಟಕ್ಕಿಟ್ಟಿಲ್ಲ. ಈ ಸರ್ಕಾರದಲ್ಲಿ ಎಲ್ಲದಕ್ಕೂ ದರ ನಿಗದಿ ಮಾಡಿ, ಸಹಿ ಮಾರಾಟಕ್ಕೆ ಇಟ್ಟಿದೆ ಎಂದು ಎಚ್​​ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

60 ಪರ್ಸೆಂಟ್ ಕಮಿಷನ್ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಹೇಳಬೇಕಿಲ್ಲ. ಈ ಸರ್ಕಾರದಲ್ಲಿ ಯಾವ ರೀತಿ ಕಮಿಷನ್ ನಡೆಯುತ್ತದೆ ಎಂದು ಈ ಬಗ್ಗೆ ಗುತ್ತಿಗೆದಾರರೇ ಹೇಳುತ್ತಾರೆ. ಕಂದಾಯ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿದೆಯಾ? ಎಂದು ಸಚಿವ ಕೃಷ್ಣಬೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ (ETV Bharat)

ಡಿಕೆಶಿಗೆ ತಿರುಗೇಟು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಶತ್ರು ಸಂಹಾರ ಪೂಜೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಎಲ್ಲರನ್ನು ದೇವರೇ ಕಾಪಾಡಬೇಕು. ಅಧಿಕಾರ ಬೇಕು ಅಂತ ಅಲ್ಲಿ ಎಲ್ಲೋ ಶತ್ರು ನಾಶಕ್ಕೆ ಹೋಗುವುದು. ಅಲ್ಲೂ ಕೂಡಾ ದೇವರನ್ನು ಅಧಿಕಾರ ಕೊಡು. ಶತ್ರು ನಾಶ ಮಾಡು ಅಂತಾನೆ ಅಲ್ಲವೇ? ಎಂದ ಅವರು, ಇವತ್ತು ಲಕ್ಷಾಂತರ ಜನ ವೈಕುಂಠ ಏಕಾದಶಿ ಸ್ವರ್ಗದ ಬಾಗಿಲು ತೆಗೆಯುತ್ತೆ ಅಂತ ನಂಬಿಕೆ ಹೊಂದಿದ್ದಾರೆ. ನಾನು ಕೂಡ ದೇವರಲ್ಲಿ ಪ್ರಾರ್ಥನೆ ಮಾಡಿ ಒಳ್ಳೆಯದು ಮಾಡಲಿ ಅಂತ, ಮುಕ್ತಿ ಕೊಡಪ್ಪ ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ತಿರುಗೇಟು ಕೊಟ್ಟರು.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವೈಕುಂಠ ಏಕಾದಶಿ ಶುಭಾಶಯಗಳು. ಇವತ್ತು ಪವಿತ್ರವಾದ ದಿನ. ವಿಷ್ಣು ದೇಶ ಆಳುವವರಿಗೆಗೆ, ರಾಜ್ಯ ಆಳೋರಿಗೆ ಎಲ್ಲರಿಗೂ ಸಮೃದ್ದಿ ಕೊಟ್ಟು ಜನತೆಯ ಸಮಸ್ಯೆಗೆ ಒಳ್ಳೆಯ ಕೆಲಸ ಮಾಡುವ ವಾತಾವರಣ ದೇವರು ನಿರ್ಮಾಣ ಮಾಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್​ ಖಂಡಿತ ಸಿಎಂ ಆಗ್ತಾರೆ: ವಿನಯ್​ ಗೂರುಜಿ ಭವಿಷ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.