ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11'ರ ಐದನೇ ವಾರದಲ್ಲಿದೆ. ಶೋ ಮುಂದುವರಿದಂತೆ ವಾದ ವಿವಾದ, ಮನಸ್ತಾಪಗಳು ಮುಂದುವರಿದಿವೆ. ಅದರಂತೆ, ಇಂದಿನ ಸಂಚಿಕೆಯಲ್ಲೂ ಮಾತಿನ ಕಿಚ್ಚು ಹೊತ್ತುಕೊಂಡಿದೆ.
''ದೀಪಾವಳಿಗೂ ಮುನ್ನ ಮನೆಯಲ್ಲಿ ಹಾವಳಿಯೋ ಹಾವಳಿ!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಬಿಗ್ ಬಾಸ್ ಮನೆಯಲ್ಲಿ ಗುಣ, ಯೋಗ್ಯತೆ ಪ್ರಶ್ನೆ ಹುಟ್ಟಿಕೊಂಡಿದೆ. ಮಾತಿನ ಭರ ಜೋರಾಗೇ ಇದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.
ಮನೆ ಮಂದಿಗೆ ಲಕ್ಷುರಿ ಬಜೆಟ್ ಗಳಿಸಲು ಟಾಸ್ಕ್ ಒಂದನ್ನು ಬಿಗ್ ಬಾಸ್ ನೀಡಿದ್ದಾರೆ. ಸ್ಪರ್ಧಿಯೋರ್ವರು ಚಿತ್ರವೊಂದನ್ನು ಬಿಡಿಸಬೇಕು, ಅದನ್ನು ಇತರೆ ಸ್ಪರ್ಧಿಗಳು ಕಂಡು ಹಿಡಿಯಬೇಕು. ಇದರಲ್ಲಿ ಗೌತಮಿ ಅವರ ತಂಡ ಗೆದ್ದು ಬೀಗಿದೆ. ನಂತರ ಮಂಜು ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ತ್ರಿವಿಕ್ರಮ್, ಭವ್ಯಾ ಅವರು ಮಂಜು ಬಳಿ ವಾದಕ್ಕಿಳಿದಿದ್ದಾರೆ. ಎಲ್ಲರ ನಂಬಿಕೆಯನ್ನು ಹಾಳು ಮಾಡಿಕೊಂಡ್ರಿ ಎಂದು ಮಂಜು ಬಗ್ಗೆ ತ್ರಿವಿಕ್ರಮ್ ಹೇಳಿದ್ರೆ, ನಿಮ್ಮ ಗುಣಾನೆ ಇದು ಅಂತಾ ಭವ್ಯಾ ತಿಳಿಸಿದ್ದಾರೆ. ಗುಣದ ಬಗ್ಗೆ ಬಂದ ಹಿನ್ನೆಲೆ, ಮಂಜು ದನಿ ಏರಿಸಿದ್ದಾರೆ. ಬೇರೆಯವರ ಆ್ಯಕ್ಟಿಂಗ್ ಬಗ್ಗೆ ಮಾತನಾಡುತ್ತಿದ್ರಲ್ವಾ? ನಿಮ್ಮ ಯೋಗ್ಯತೆ ಏನು ಎಂದು ಭವ್ಯಾ ಕಿಡಿ ಕಾರಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ನಡೆದಂತೆ ತೋರುತ್ತಿದೆ.
ಇದನ್ನೂ ಓದಿ:ಹನುಮಾನ್ ಪಾತ್ರದಲ್ಲಿ ರಿಷಬ್ ಶೆಟ್ಟಿ: ಟಾಲಿವುಡ್ನಲ್ಲಿ ಛಾಪು ಮೂಡಿಸಲು ಕಾಂತಾರ ಸ್ಟಾರ್ ರೆಡಿ