ಕರ್ನಾಟಕ

karnataka

ETV Bharat / entertainment

'ಸಾಚಾ ಆಟಗಳನ್ನು ನೋಡಿಕೊಂಡೇ ಬಂದಿರೋದು': ರಜತ್​ ಹದ್ದು ಮೀರಿದ ವರ್ತನೆಗೆ ರೊಚ್ಚಿಗೆದ್ದ ಬಿಗ್​​ ಬಾಸ್​ ಮನೆ! - RAJATH KISHAN CLASH

'ಹದ್ದು ಮೀರಿದೆ ವರ್ತನೆ, ರೊಚ್ಚಿಗೆದ್ದಿದೆ ಇಡೀ ಮನೆ!' ಇದು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದಿರುವ ರಜತ್​ ಕಿಶನ್​ ವರ್ತನೆ ಕಂಡು ಬಿಗ್​ಬಾಸ್​ ನೀಡಿರುವ ಕ್ಯಾಪ್ಷನ್​. ಬಿಗ್​ಬಾಸ್​ನ ಸ್ಪರ್ಧಿಗಳೆಲ್ಲರೂ ತಿರುಗಿಬಿದ್ದಿರೋದು ಇದರಿಂದ ಗೊತ್ತಾಗಿದೆ.

Rajath Kishan
ರಜತ್​ ಕಿಶನ್​ (Photo: Bigg Boss Team)

By ETV Bharat Entertainment Team

Published : Dec 17, 2024, 4:47 PM IST

ಕನ್ನಡದ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿರುವ ರಜತ್​​ ಕಿಶನ್​​ ಅವರ ಆರ್ಭಟ ದಿನೇ ದಿನೆ ಹೆಚ್ಚುತ್ತಿದೆ. ಅತಿ ಕಡಿಮೆ ಅವಧಿಯಲ್ಲಿ ಪ್ರೇಕ್ಷಕರನ್ನು ತಲುಪಿ ಜನಪ್ರಿಯತೆ ಸಂಪಾದಿಸಿದರಾದರೂ, ಅವರ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಹದ್ದು ಮೀರಿದೆ ವರ್ತನೆ, ರೊಚ್ಚಿಗೆದ್ದಿದೆ ಇಡೀ ಮನೆ!' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​​ನಡಿ ಪ್ರೋಮೋ ಅನಾವರಣಗೊಂಡಿದ್ದು, ಹೆಚ್ಚಿನವರು ರಜತ್​ ಕಿಶನ್​​​ ಅವರ ವರ್ತನೆಗೆ ರೊಚ್ಚಿಗೆದ್ದಿರೋದನ್ನು ಕಾಣಬಹುದು.

ಬಿಗ್​ ಬಾಸ್​ಗೆ ಅಗೌರವ?'ಚೆಂಡು ಸಾಗಲಿ ಮುಂದೆ ಹೋಗಲಿ' ಎಂಬ ಟಾಸ್ಕ್​​ ಅನ್ನು ಬಿಗ್​ ಬಾಸ್​ ನೀಡಿದ್ದಾರೆ. ಅದರಂತೆ ಧನರಾಜ್​ ಆಟಕ್ಕಿಳಿದಿದ್ದು, ವಿರೋಧಿ ತಂಡದ ಚೈತ್ರಾ ಉಸ್ತುವಾರಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಮಧ್ಯದಲ್ಲಿ ಮಾತನಾಡುತ್ತಿದ್ದ ರಜತ್​​ ವಿರುದ್ಧ ಚೈತ್ರಾ ಅಸಮಧಾನಗೊಂಡು, ಇನ್ನೊಂದು ಅಕ್ಷರ ಮಾತನಾಡುವಂತಿಲ್ಲ ಎಂದು ಸೂಚಿಸಿದ್ದಾರೆ. ಧನರಾಜ್​ ಅವರ ಆಟದಲ್ಲಿ ಎರಡ್ಮೂರು ಬಾರಿ ಚೈತ್ರಾ ಫೌಲ್​ ಕೊಟ್ಟಿದ್ದಾರೆ. ಇದರಿಂದ ಕೆರಳಿದ ಟೀಮ್​ ಲೀಡರ್​ ರಜತ್​​ ಹೋಗಿ ಆಟ ಆಡದಂತೆ ಧನರಾಜ್​ ಅವರನ್ನು ತಡೆದಿದ್ದಾರೆ. ಟಾಸ್ಕ್​ ಪ್ರಾಪರ್ಟಿಯನ್ನು ತಳ್ಳೋ ಮೂಲಕ ಬಿಗ್​ ಬಾಸ್​ಗೆ ಅಗೌರವ ತೋರಿದ್ದಾರೆ. ಇತರೆ ಸ್ಪರ್ಧಿಗಳು ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ:'ನಾನಿರೋದೇ ಹೀಗೆ': ಮುಂದುವರಿದ ರಜತ್​ ಆರ್ಭಟ; ಸುದೀಪ್​ ಮಾತಿಗೂ ಡೋಂಟ್​ ಕೇರ್?

ಆಡಿ ಗೆಲ್ಲೋಕೊಂತೂ ಯೋಗ್ಯತೆ ಇಲ್ಲ ನಿಂಗೆ ಅನ್ನೋ ಮಾತು ರಜತ್​ ಅವರ ಬಾಯಿಂದ ಬಂದಿದೆ. ಹೋಗೋಲೋ ಎಂಬ ಮಾತನ್ನು ಚೈತ್ರಾ ಹೇಳಿದ್ದಾರೆ. ಜೊತೆಗೆ, ತಾಯ್ತ ಕಟ್ಟಿಸ್ತೀನಿ ಅಂದೋರೆಲ್ಲಾ ಕಟ್ಟಿಸಿಕೊಂಡು ಹೋಗ್ತಾರೆ ಅನ್ನೋ ಮಾತು ಕೂಡಾ ಚೈತ್ರಾರಿಂದ ಬಂದಿದೆ. ನಂತರ ಟಿವಿನಲ್ಲಿ ಗೇಮ್​ ನೋಡಿಕೊಂಡು ಬಂದೋರ್ದು ಇದೇ ಕಥೆ ಎಂದು ಉಗ್ರಂ ಮಂಜು ತಿಳಿಸಿದ್ದು, ನೀನೇನು ಸಾಚಾ ತರ ಮಾತನಾಡುತ್ತಿದ್ದೀಯ. ನಿನ್​​ ಸಾಚಾ ಆಟಗಳನ್ನು ನಾನ್​ ನೋಡ್ಕೊಂಡೇ ಬಂದಿರೋದು ಎಂದು ರಜತ್​ ತಿಳಿಸುತ್ತಿದ್ದಂತೆ ಉಗ್ರಂ ಮಂಜು ಉಗ್ರಾವತಾರ ಎತ್ತಿದ್ದಾರೆ. ಪರಸ್ಪರ ಮುಖಾಮುಖಿಯಾಗಿದ್ದು, ತಾಕತ್ತಿದ್ರೆ ಮುಟ್ಟೋಲೆ ಎಂಬ ಮಾತು ಬಂದಿದೆ. ಇವರಿಬ್ಬರ ಸಂಭಾವ್ಯ ಹೊಡೆದಾಟವನ್ನು ತಡೆಯಲು ಮನೆ ಮಂದಿ ಹರಸಾಹಸಪಟ್ಟಿದ್ದಾರೆ.

ಇದನ್ನೂ ಓದಿ:ಚಂದನ್‌ ಶೆಟ್ಟಿ-ನಿವೇದಿತಾ ಗೌಡ TO ರೆಹಮಾನ್​​​, ಧನುಷ್​: 2024ರಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸೆಲೆಬ್ರಿಟಿಗಳ ಡಿವೋರ್ಸ್ ಲಿಸ್ಟ್

ವಾರಾಂತ್ಯದ ಸಂಚಿಕೆಯಲ್ಲಿ ಸ್ಪರ್ಧಿಗಳನ್ನು ತಿದ್ದಿ ತೀಡುವ ಕೆಲಸವನ್ನು ನಿರೂಪಕ ಸುದೀಪ್ ಅವರು​ ಮಾಡ್ತಾರೆ. ಈಗಾಗಲೇ ರಜತ್​ ಕಿಶನ್​ ಅವರ ಕೆಲ ವಿಷಯಗಳಲ್ಲಿ ಚರ್ಚೆ ನಡೆಸಿರುವ ಕಿಚ್ಚ ನಿಮ್ಮ ಮಾತಿನ ಮೇಲೆ ನಿಗಾ ಇರಲಿ ಎಂದು ಬಿಸಿ ಮುಟ್ಟಿಸಿದ್ದರು. ಆದ್ರೆ ಪ್ರತಿ ದಿನ ಯಾರದ್ದಾದರೂ ಒಬ್ಬರ ವಿಷಯದಲ್ಲಿ ರಜತ್ ಅವರ ದನಿ ಏರುತ್ತಲೇ ಇದ್ದು, ಮನೆಯ ವಾತಾವರಣ ಹದಗೆಡುವ ಸಾಧ್ಯತೆಗಳಿವೆ. ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ABOUT THE AUTHOR

...view details