ಕರ್ನಾಟಕ

karnataka

ETV Bharat / entertainment

ಚಿರಂಜೀವಿ, ವೈಜಯಂತಿಮಾಲಾಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ - Padma Vibhushan

ಕಲಾವಿದರಾದ ವೈಜಯಂತಿಮಾಲಾ ಬಾಲಿ ಮತ್ತು ಚಿರಂಜೀವಿ ಕೊನಿಡೇಲಾ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

Chiranjeevi
ಚಿರಂಜೀವಿಗೆ ಪದ್ಮವಿಭೂಷಣ ಪ್ರದಾನ (ANI)

By ETV Bharat Karnataka Team

Published : May 10, 2024, 7:14 AM IST

ನವದೆಹಲಿ: ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಟಾಲಿವುಡ್ ಸೂಪರ್​​ ಸ್ಟಾರ್ ಚಿರಂಜೀವಿ ಕೊನಿಡೇಲಾ ಅವರ ಅಸಾಧಾರಣ ಸೇವೆ ಗುರುತಿಸಿ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣ ಪ್ರಶಸ್ತಿಯನ್ನು ಗುರುವಾರ ಪ್ರದಾನ ಮಾಡಲಾಯಿತು.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗುರುವಾರ ಜರುಗಿದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 90ರ ಹರೆಯದ ನಟಿ ವೈಜಯಂತಿಮಾಲಾ ಮತ್ತು 68ರ ಚಿರಂಜೀವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್​​​ಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಭಾರತೀಯ ಚಿತ್ರರಂಗದದಲ್ಲಿ ಅತ್ಯುತ್ತಮ ನಟಿ ಮತ್ತು ನೃತ್ಯಗಾರ್ತಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವೈಜಯಂತಿಮಾಲಾ ಅವರು 1950-1960ರ ದಶಕಗಳಲ್ಲಿ ಸಿನಿರಂಗವನ್ನು ಆಳಿದ್ದರು. ತಮ್ಮ ನಟನೆ ಮತ್ತು ನೃತ್ಯದಿಂದ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಅವರ ಚಿತ್ರಗಳಾದ ದೇವ್​​​ದಾಸ್, ನಯಾ ದೌರ್, ಆಶಾ, ಸಾಧನ, ಗಂಗಾ ಜುಮ್ನಾ, ಸಂಗಮ್ ಮತ್ತು ಜ್ಯುವೆಲ್ ಥೀಫ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಅಲ್ಲದೇ ಕೆಲ ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 1970ರ ಗನ್ವಾರ್ ಅವರ ಕೊನೆಯ ಹಿಂದಿ ಚಿತ್ರ. 1968ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಇನ್ನೂ ದಕ್ಷಿಣ ಚಿತ್ರರಂಗದ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾದ ಚಿರಂಜೀವಿ ಅವರು ತೆಲುಗು, ಹಿಂದಿ, ಕನ್ನಡ, ತಮಿಳು ಭಾಷೆ ಸೇರಿದಂತೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ರುದ್ರ ವೀಣ, ಇಂದ್ರ, ಟ್ಯಾಗೋರ್, ಸ್ವಯಂ ಕೃಷಿ, ಸೈರಾ ನರಸಿಂಹ ರೆಡ್ಡಿ, ಸ್ಟಾಲಿನ್ ಮತ್ತು ಗ್ಯಾಂಗ್ ಲೀಡರ್ ಅವರ ಕೆಲ ಜನಪ್ರಿಯ ಚಿತ್ರಗಳು. ಕೊನೆಯದಾಗಿ 2023ರಲ್ಲಿ ಭೋಲಾ ಶಂಕರ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶ್ವಂಭರ ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ. 2006ರಲ್ಲಿ ಇವರಿಗೆ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣವನ್ನು ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ:ಸಲ್ಮಾನ್ ಖಾನ್ ನಟನೆಯ 'ಸಿಖಂದರ್‌'ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ - Rashmika Mandanna

ಈ ವರ್ಷಾರಂಭ ಅಂದರೆ ಜನವರಿ ಕೊನೆಯಲ್ಲಿ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳನ್ನು ಸರ್ಕಾರ ಘೋಷಿಸಿತ್ತು. ಆ ಸಂದರ್ಭದಲ್ಲಿ ಅಭಿಮಾನಿಗಳು ಸೇರಿದಂತೆ ಸರ್ವರಿಗೂ ಚಿರಂಜೀವಿ ಮನತುಂಬಿ ಕೃತಘ್ಞತೆ ಅರ್ಪಿಸಿದ್ದರು. ಚಿರಂಜೀವಿ ಅವರ ಮೂಲ ಹೆಸರು ಕೊನಿಡೇಲ ಶಿವಶಂಕರ ವರಪ್ರಸಾದ್. ಸಿನಿಪಯಣ ಪ್ರಾರಂಭಿಸಿದ ಸಂದರ್ಭ ಚಿರಂಜೀವಿ ಎಂದು ಹೆಸರು ಬದಲಾಯಿಸಿಕೊಂಡರು. ಚಿತ್ರರಂಗದಲ್ಲಿ ನಾಲ್ಕು ದಶಕ ಪೂರೈಸಿರುವ ನಟ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ದೊಡ್ಡ ಮಟ್ಟಿನ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಪುತ್ರ ರಾಮ್​ ಚರಣ್​ ಕೂಡ ಸದ್ಯ ಬಹುಬೇಡಿಕೆ ನಟ. ಕಟುಂಬ ಸದಸ್ಯರ ಪೈಕಿ ಹೆಚ್ಚಿನವರು ಚಿತ್ರರಂಗದಲ್ಲೇ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೇನ್ಸ್​​ ಫೆಸ್ಟಿವಲ್​ನಲ್ಲಿ ಮಿಂಚು ಹರಿಸಲು ಸಜ್ಜಾದ ಐಶ್ವರ್ಯಾ ರೈ, ಅದಿತಿ ರಾವ್ ಹೈದರಿ - Cannes 2024

ABOUT THE AUTHOR

...view details