ETV Bharat / bharat

ಕನ್ನಡಕದಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಅಯೋಧ್ಯೆ ರಾಮಮಂದಿರ ಪ್ರವೇಶಿಸಿದ ಯುವ ಉದ್ಯಮಿ - GUJARAT BIZMAN CAUGHT IN RAM MANDIR

ಅಯೋಧ್ಯೆ ರಾಮಮಂದಿರದ ಪ್ರಮುಖ ದ್ವಾರದ​ ಮುಂದೆ ಬರುತ್ತಿದ್ದಂತೆ ಯುವ ಉದ್ಯಮಿಯ ಕನ್ನಡಕದಿಂದ ಫ್ಲಾಶ್​​ ಲೈಟ್​ ಆನ್​ ಆಗಿದ್ದು, ತಕ್ಷಣ ಸೆಕ್ಯೂರಿಟಿ ಗಾರ್ಡ್ ಗಮನಿಸಿದ್ದಾರೆ.

young man wearing glasses with spy camera breach of security protocol in Ram Janmabhoomi premises
ಅಯೋಧ್ಯೆ ಶ್ರೀರಾಮ ಮಂದಿರ (IANS)
author img

By ETV Bharat Karnataka Team

Published : Jan 7, 2025, 12:19 PM IST

ಅಯೋಧ್ಯೆ(ಉತ್ತರ ಪ್ರದೇಶ): ಭದ್ರತೆಯ ಉದ್ದೇಶದಿಂದ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇದರ ಮಧ್ಯೆಯೂ ಗುಜರಾತ್​ನ ಯುವ ಉದ್ಯಮಿಯೊಬ್ಬ ಭದ್ರತಾ ನಿಮಯಗಳನ್ನು ಉಲ್ಲಂಘಿಸಿ, ಮಂದಿರದ ಪ್ರಮುಖ ದ್ವಾರದವರೆಗೂ ಸಾಗಿದ್ದು, ಬಳಿಕ ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಸೋಮವಾರ ನಡೆಯಿತು.

ರಾಮಲಲ್ಲಾ ದೇಗುಲದ ಆವರಣದಲ್ಲಿ ಫೋಟೋ ಸೆರೆ ಹಿಡಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ, ಈ ವ್ಯಕ್ತಿ ತನ್ನ ಕನ್ನಡಕದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಕೊಂಡು ದೇಗುಲದ ಫೋಟೋ ಪಡೆಯಲು ಮುಂದಾಗಿದ್ದಾನೆ. ದೇಗುಲದ ಪ್ರಮುಖ ಗೇಟ್​ಗೆ ಆಗಮಿಸುವ ಮುನ್ನ ನಡೆದ ಎಲ್ಲಾ ಭದ್ರತಾ ತಪಾಸಣೆಗಳಲ್ಲೂ ಕಣ್ತಪ್ಪಿಸಿ ಮುಂದೆ ಸಾಗಿದ್ದಾನೆ. ಪ್ರಮುಖ ಗೇಟ್​ ಮುಂದೆ ಬರುತ್ತಿದ್ದಂತೆ ಈತನ ಕನ್ನಡಕದಿಂದ ಫ್ಲಾಶ್​​ ಲೈಟ್​ ಆನ್​ ಆಗಿದ್ದು, ಸೆಕ್ಯೂರಿಟಿ ಗಾರ್ಡ್​​ಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.

ವಡೋದರದ ನಿವಾಸಿಯಾದ ಈತನ ಹೆಸರು ಜಾನಿ ಜೈಶಂಕರ್. ಪತ್ನಿಸಮೇತ ರಾಮಲಲ್ಲಾನ ದರ್ಶನಕ್ಕೆ ಆಗಮಿಸಿದ್ದ ಎಂಬ ಮಾಹಿತಿ ದೊರೆತಿದೆ. ಈತನನ್ನು ವಶಕ್ಕೆ ಪಡೆದ ಬಳಿಕ ಭದ್ರತಾ ಏಜೆನ್ಸಿ ಮತ್ತು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಸೋಮವಾರ ಮಧ್ಯಾಹ್ನ 3ರ ಸುಮಾರಿಗೆ ಪತ್ನಿಸಮೇತ ರಾಮ ಮಂದಿರದ ಸಿಂಗ್​ದ್ವಾರರ ತಲುಪಿದ್ದ. ಇಲ್ಲಿ ಆತ ಕನ್ನಡಕದ ಫ್ರೇಮ್​ಗೆ ಅಳವಡಿಸಿದ್ದ ರಹಸ್ಯ ಕ್ಯಾಮೆರಾದಿಂದ ದೇಗುಲದ ಫೋಟೋ ತೆಗೆಯಲು ಮುಂದಾಗಿದ್ದಾನೆ. ಕೈಯಲ್ಲಿದ್ದ ಬಟನ್​ ಪ್ರೆಸ್​ ಮಾಡುತ್ತಿದ್ದಂತೆ ಕನ್ನಡದ ಫ್ರೆಮ್​ ಹೊಳೆಯಲಾರಂಭಿಸಿದೆ. ಕನ್ನಡಕದಲ್ಲಿ ಲೈಟ್​ ಹೊಳೆಯುತ್ತಿದ್ದರಿಂದ ಅನುಮಾನಗೊಂಡ ಎಸ್​ಎಸ್​ಎಫ್​ ವಾಚರ್​ ಅನುರಾಜ್​ ಬಜ್​ಪೈ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರ ವಿಚಾರಣೆಯ ವೇಳೆ ತನ್ನ ಕನ್ನಡಕಕ್ಕೆ ರಹಸ್ಯ ಕ್ಯಾಮೆರಾ ಅಳವಡಿಸಿದ್ದು, ಅದರ ಸಹಾಯದಿಂದ ದೇಗುಲದ ಫೋಟೋ ತೆಗೆಯುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಯಾವುದೇ ಅಪರಾಧ ಹಿನ್ನಲೆ ಹೊಂದಿಲ್ಲ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

ತಾನು ವಡೋದರದಲ್ಲಿ ಉದ್ಯಮಿ. ಧರಿಸಿದ್ದ ಕನ್ನಡಕದ ಮೌಲ್ಯ 50,000 ಎಂದೂ ಹೇಳಿದ್ದಾನೆ. ತೀವ್ರ ವಿಚಾರಣೆ ನಡೆಸಿದ ಬಳಿಕ ಬಿಟ್ಟು ಕಳುಹಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಾರಾಟದ ವೇಳೆ ಎಂಜಿನ್ ಬಂದ್​; ಬೆಂಗಳೂರಿನಲ್ಲಿ ವಿಮಾನ ತುರ್ತು ಲ್ಯಾಂಡಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.