ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಸರಣಿ ಸಿನಿಮಾಗಳನ್ನು ಹೊಂದಿದ್ದು, 'ಛಾವಾ' ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ಚಿತ್ರದ ಪ್ರಚಾರ ಪ್ರಾರಂಭವಾಗಿದ್ದು, ಇಂದು ಮುಂಬೈನಲ್ಲಿ ಟ್ರೇಲರ್ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮಕ್ಕೆ ನಾಯಕ ನಟಿ ಬಂದ ರೀತಿ ಎಲ್ಲರ ಗಮನ ಸೆಳೆದಿದೆ.
ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಸಿಕಂದರ್' ಮೂರು ತಿಂಗಳ ಬಳಿಕ ಬಿಡುಗಡೆ ಆಗಲಿದೆ. ಇದೇ ಮೊದಲ ಬಾರಿ ಸಲ್ಲು ಜೊತೆ ರಶ್ಮಿಕಾ ತೆರೆ ಹಂಚಿಕೊಂಡಿದ್ದು, ಚಿತ್ರೀಕರಣ ಬಿರುಸಿನಿಂದ ಸಾಗಿದೆ. 'ಪುಷ್ಪ 2' ಯಶಸ್ಸಿನಲೆಯಲ್ಲಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಸಿಕಂದರ್ಗೂ ಮುನ್ನ ಛಾವಾ ಚಿತ್ರದ ಮೂಲಕ ಚಿತ್ರಮಂದಿರ ಪ್ರವೇಶಿಸಲಿದ್ದಾರೆ.
ವಿಕ್ಕಿ ಕೌಶಲ್ ಜೊತೆಗಿನ 'ಛಾವಾ' ಚಿತ್ರ ತನ್ನ ಭರ್ಜರಿ ಪ್ರಚಾರ ಪ್ರಾರಂಭಿಸಿದೆ. ಈ ಹಿನ್ನೆಲೆ ಇಂದು ರಶ್ಮಿಕಾ ಮಂದಣ್ಣ ಹೈದರಾಬಾದ್ನಿಂದ ಮುಂಬೈ ತಲುಪಿದ್ದಾರೆ.
ಇದನ್ನೂ ಓದಿ:'ಆಟೋದಲ್ಲಿ ಸೈಫ್ ನೋವು ಅನುಭವಿಸಿದ್ದರು': ಆಸ್ಪತ್ರೆಯಲ್ಲಿ ನಟನನ್ನು ಭೇಟಿಯಾದ ಚಾಲಕ ಹೇಳಿದ್ದೇನು?
ಇತ್ತೀಚೆಗೆ ಶೂಟಿಂಗ್ ಸೆಟ್ನಲ್ಲಿ ರಶ್ಮಿಕಾ ಮಂದಣ್ಣ ಅವರ ಕಾಲಿಗೆ ಗಾಯವಾಗಿತ್ತು. ಈ ವಿಷಯವನ್ನು ಸ್ವತಃ ನಟಿಯೇ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇಂದು ವಿಮಾನ ನಿಲ್ದಾಣದಲ್ಲಿ ಕುಂಟುತ್ತಾ ಬರೋದು, ವೀಲ್‌ಚೇರ್ ಸಹಾಯದಿಂದ ಹೋಗಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಸಂಜೆ ನಡೆದ ಟ್ರೇಲರ್ ಲಾಂಚ್ ಈವೆಂಟ್ನಲ್ಲೂ ನಟಿ ಕುಂಟುತ್ತಾ ಹೋಗಿರೋದನ್ನು ಕಾಣಬಹುದು.
ಇದನ್ನೂ ಓದಿ:ಛಾವಾ ಟ್ರೇಲರ್: ಸಂಭಾಜಿ ಮಹಾರಾಜರ ಪಾತ್ರದಲ್ಲಿ ಅಬ್ಬರಿಸಿದ ವಿಕ್ಕಿ ಕೌಶಲ್, ಯೇಸುಬಾಯಿಯಾಗಿ ರಶ್ಮಿಕಾ
ಈ ಸಿನಿಮಾದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಟ್ರೇಲರ್ನಲ್ಲಿ ರಾಜಮನೆತನದ ನೋಟ ಬೀರಿದ್ದಾರೆ. ಈವೆಂಟ್ಗೂ ಬಹಳ ಸಾಂಪ್ರದಾಯಿಕವಾಗಿ ರೆಡಿಯಾಗಿದ್ದು, ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ರೆಡ್ ಬ್ಯೂಟಿಫುಲ್ ಔಟ್ಫಿಟ್ನಲ್ಲಿ ಬೆರಗುಗೊಳಿಸುವ ನೋಟ ಬೀರಿದ ನಟಿಗೆ ನಾಯಕ ನಟ ವಿಕ್ಕಿ ಕೌಶಲ್ ಸಹಾಯ ಮಾಡಿದ್ದಾರೆ.