ಕರ್ನಾಟಕ

karnataka

ETV Bharat / entertainment

ಹನುಮ ಜಯಂತಿ: ರಾಮ್​ ಚರಣ್​ ಸೇರಿ ಸೆಲೆಬ್ರಿಟಿಗಳಿಂದ ಶುಭಾಶಯ - Hanuman Jayanti - HANUMAN JAYANTI

ಹನುಮ ಜಯಂತಿ ಪ್ರಯುಕ್ತ ಚಿತ್ರರಂಗದ ಗಣ್ಯರು ಶುಭಾಶಯ ಕೋರಿದ್ದಾರೆ.

CELEBS WISH ON HANUMAN JAYANTI
ಸೆಲೆಬ್ರಿಟಿಗಳಿಂದ ಹನುಮ ಜಯಂತಿಯ ಶುಭಾಶಯ

By ETV Bharat Karnataka Team

Published : Apr 23, 2024, 3:40 PM IST

ದೇಶಾದ್ಯಂತ ಹನುಮಾನ್​​ ಜಯಂತಿಯ ಸಂಭ್ರಮ ಮನೆ ಮಾಡಿದೆ. ಭಕ್ತಗಣ ತಮ್ಮದೇ ಆದ ರೀತಿಯಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಖ್ಯಾತ ಸೆಲೆಬ್ರಿಗಳು ಸಹ ಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸ್ಟೋರಿ ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭಾಶಯ ಸಲ್ಲಿಸಿದ್ದಾರೆ.

ವಿಕ್ಕಿ ಕೌಶಲ್​ ಇನ್​ಸ್ಟಾ ಸ್ಟೋರಿ

ಹನುಮ ಜಯಂತಿಯ ಶುಭ ದಿನದ ಸಲುವಾಗಿ ಬಾಲಿವುಡ್​ನ ಖ್ಯಾತ ನಟ ಅನುಪಮ್ ಖೇರ್ ಸರ್ವರಿಗೂ ಶುಭಾಶಯ ತಿಳಿಸಿದ್ದಾರೆ. ಹನುಮಾನ್ ಚಾಲೀಸ ದನಿಯನ್ನು ಹೊಂದಿರುವ ಹನುಮನ ಪೋಸ್ಟ್ ಶೇರ್ ಮಾಡಿದ ನಟ, "ಶ್ರೀ ಹನುಮಾನ್ ಜಯಂತಿಯಂದು ಎಲ್ಲರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳು. ಸಾಧನೆ, ಸಂಪತ್ತುಗಳನ್ನು ನೀಡುವ ಮತ್ತು ಭಗವಾನ್ ಶ್ರೀರಾಮನ ನಿಷ್ಠಾವಂತ ಅನುಯಾಯಿಯಾದ ಶ್ರೀ ಹನುಮಾನ್ ಜಿ ಅವರ ಆಶೀರ್ವಾದ ನಮ್ಮೆಲ್ಲರೊಂದಿಗಿರಲಿ. ಓಂ ಹನುಮತೇ ನಮಃ" ಎಂದು ಬರೆದುಕೊಂಡಿದ್ದಾರೆ.

ರಾಮ್​ ಚರಣ್​​ ಇನ್​ಸ್ಟಾ ಸ್ಟೋರಿ

ಸೂಪರ್​ ಹಿಟ್​​ ಸಿನಿಮಾ ಆರ್‌ಆರ್‌ಆರ್ ಖ್ಯಾತಿಯ ಜನಪ್ರಿಯ ನಟ ರಾಮ್ ಚರಣ್ ತಮ್ಮ ಇನ್‌ಸ್ಟಾಗ್ರಾಮ್​ ಸ್ಟೋರಿ ವಿಭಾಗದಲ್ಲಿ, ಹನುಮಾನ್ ವಿಗ್ರಹದ ಮುಂದೆ ನೃತ್ಯ ಮಾಡಿರುವ ತಮ್ಮದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ, "ಹನುಮಾನ್ ಜಯಂತಿಯ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. ಬಾಲಿವುಡ್​ನ ಹ್ಯಾಂಡ್ಸಮ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ, ಪರ್ವತಗಳಿಂದ ಸುತ್ತುವರಿದ ರಮಣೀಯ ವಾತಾವರಣದ ನಡುವೆ ಕುಳಿತಿರುವ ಭಗವಾನ್ ಹನುಮಂತನ ಬೃಹತ್ ವಿಗ್ರಹದ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಕಿರು ವಿಡಿಯೋದೊಂದಿಗೆ ನಟ ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ಇನ್​ಸ್ಟಾ ಸ್ಟೋರಿ

ಜರಾ ಹಟ್ಕೆ ಜರಾ ಬಚ್ಕೆ ಖ್ಯಾತಿಯ ನಟ ವಿಕ್ಕಿ ಕೌಶಲ್ ಕೂಡ ಹಬ್ಬ ಆಚರಿಸಿದ್ದಾರೆ. ತಮ್ಮ ಕಾರಿನಲ್ಲಿರುವ ಹನುಮಾನ್ ಮೂರ್ತಿಯ ಚಿತ್ರವನ್ನು ಹಂಚಿಕೊಂಡ ನಟಿ ಕತ್ರಿನಾ ಕೈಫ್​ ಅವರ ಪತಿ, ಹನುಮಾನ್ ಚಾಲೀಸದ ಎರಡು ಸಾಲುಗಳನ್ನು ಬರೆದಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭುದೇವ ಕೂಡ ಈ ವಿಶೇಷ ದೈವಿಕ ದಿನದಂದು ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಮತ್ತೊಂದೆಡೆ ನಟ ಅಭಿಷೇಕ್ ಬಚ್ಚನ್ ಭಗವಾನ್ ಹನುಮಂತನ ಚಿತ್ರವನ್ನು ಹಂಚಿಕೊಂಡು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇವರಲ್ಲದೇ, ಜಾಕಿ ಭಗ್ನಾನಿ, ಇಶಾ ಡಿಯೋಲ್, ಇಶಾ ಗುಪ್ತಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಹ ಹನುಮಂತನ ಚಿತ್ರದೊಂದಿಗೆ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ:ತೆಲುಗು ನಿರ್ದೇಶಕರ ಸಂಘಕ್ಕೆ ₹ 35 ಲಕ್ಷ ದೇಣಿಗೆ ನೀಡಿದ ನಟ ಪ್ರಭಾಸ್​​ - Prabhas Donation

ಭಗವಾನ್ ಹನುಮಂತನ ಜನ್ಮದಿನವನ್ನು ಸ್ಮರಿಸುವ ಸಲುವಾಗಿ ಹನುಮ ಜಯಂತಿಯನ್ನು ಚೈತ್ರ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಈ ಮಂಗಳಕರ ದಿನದಂದು ಉಪವಾಸ ಮತ್ತು ವಿಶೇಷ ಪೂಜೆ ನಡೆಸುತ್ತಾರೆ. ಭಕ್ತರು ಹನುಮಾನ್ ಮಂತ್ರಗಳನ್ನು ಸಹ ಪಠಿಸುತ್ತಾರೆ.

ಇದನ್ನೂ ಓದಿ:'ಉತ್ತರಕಾಂಡ' ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಐಶ್ವರ್ಯಾ ರಾಜೇಶ್ - Aishwarya Rajesh

ABOUT THE AUTHOR

...view details