2024ರ ಡಿಸೆಂಬರ್ 24ರಂದು ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಶಿವರಾಜ್ಕುಮಾರ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಕರುನಾಡಿಗೆ ವಾಪಸ್ಸಾಗಲಿರುವ ಕರುನಾಡ ಚಕ್ರವರ್ತಿ ಅಮೆರಿಕದ ಆಸ್ಪತ್ರೆ ಹೊರಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶರವೇಗದಲ್ಲಿ ವೈರಲ್ ಆಗುತ್ತಿದ್ದು, ಹ್ಯಾಟ್ರಿಕ್ ಹೀರೋಗೆ ಅಭಿಮಾನಿಗಳು ಪ್ರೀತಿಯ ಧಾರೆಯೆಯುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿರುವ ದೃಶ್ಯ, ಅಮೆರಿಕದ ಆಸ್ಪತ್ರೆ ಹೊರಾಂಗಣದಲ್ಲಿ ಸೆರೆಹಿಡಿದಿರುವಂತೆ ತೋರಿದ್ದು, ಪತ್ನಿ ಗೀತಾ ಶಿವರಾಜ್ಕುಮಾರ್ ಕೂಡಾ ಜೊತೆಗಿದ್ದಾರೆ. ವಾಯು ವಿಹಾರಕ್ಕೆ ದಂಪತಿ ಬಂದಿರುವಂತೆ ತೋರಿದೆ. ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಬಹುತೇಕ ಗುಣಮುಖರಾಗಿರುವಂತೆ ಕಂಡುಬಂದಿದೆ. ಇದು ಕೋಟ್ಯಂತರ ಅಭಿಮಾನಿಗಳಲ್ಲಿ ಖುಷಿ ತರಿಸಿದೆ.
ನನ್ನ ಸಮುದ್ರ ನೀವು....ಇನ್ನೂ ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸಮುದ್ರದ ಬಳಿ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿರುವ ಸೆಂಚುರಿ ಸ್ಟಾರ್, ''ನನ್ನ ಸಮುದ್ರ ನೀವು! ಮರಳಿ ಬರಲು ಹೆಚ್ಚು ಕಾಯಲು ಸಾಧ್ಯವಿಲ್ಲ'' ಎಂದು ತಿಳಿಸಿದ್ದಾರೆ. ಇದು ತಮ್ಮನ್ನು ಆರಾಧಿಸುವ, ಪ್ರೀತಿಸುವ ಅಭಿಮಾನಿ ದೇವರುಗಳಿಗಾಗಿ ಹಂಚಿಕೊಂಡಿರುವ ಪೋಸ್ಟ್ ಆಗಿದೆ.
ಹೊಸ ವರ್ಷದಂದು 'ಶಿವರಾಜ್ಕುಮಾರ್ ಕ್ಯಾನ್ಸರ್ ಗೆದ್ದು ಬಂದಿದ್ದಾರೆ' ಎಂದು ಜನಪ್ರಿಯ ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇದನ್ನು ತಿಳಿದ ಅಭಿಮಾನಿಗಳು ಬಹಳ ಸಂತಸಗೊಂಡರು. ನಿಮ್ಮ ಪ್ರಾರ್ಥನೆ ಫಲಿಸಿದೆ. ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಫ್ರೀ ಎಂದು ಘೋಷಿಸಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದದಿಂದಾಗಿ ಇದೆಲ್ಲವೂ ಸಾಧ್ಯವಾಯಿತು. ನಾನಿದನ್ನು ನನ್ನಿಡೀ ಜೀವನದಲ್ಲಿ ಎಂದು ಗೀತಾ ಶಿವರಾಜ್ಕುಮಾರ್ ತಿಳಿಸಿದ್ದರು.