ಕರ್ನಾಟಕ

karnataka

ETV Bharat / entertainment

'ಕುಮಾರಿ ಆಂಟಿ ಫುಡ್ ಸ್ಟಾಲ್'​ಗೆ ಸೋನುಸೂದ್ ಭೇಟಿ: ಚಿತ್ರಕ್ಕೆ ಅತಿಥಿಯಾಗಿ ಬರುವಂತೆ ಆಹ್ವಾನ - Sonu Sood - SONU SOOD

ಬಹುಭಾಷಾ ನಟ ಸೋನುಸೂದ್ ಅವರು ಹೈದರಾಬಾದ್​ನಲ್ಲಿರುವ ಕುಮಾರಿ ಆಂಟಿ ಫುಡ್ ಸ್ಟಾಲ್​ ಭೇಟಿ ನೀಡಿದರು. ತಮ್ಮ 'ಫತೇಹ್' ಚಿತ್ರಕ್ಕೆ ಸೆಲೆಬ್ರಿಟಿ ಅತಿಥಿಯಾಗಿ ಬರುವಂತೆ ಆಹ್ವಾನಿಸಿದರು.

ಕುಮಾರಿ ಆಂಟಿ ಫುಡ್ ಸ್ಟಾಲ್​ಗೆ ನಟ ಸೋನುಸೂದ್ ಭೇಟಿ
ಕುಮಾರಿ ಆಂಟಿ ಫುಡ್ ಸ್ಟಾಲ್​ಗೆ ನಟ ಸೋನುಸೂದ್ ಭೇಟಿ (ETV Bharat)

By ETV Bharat Karnataka Team

Published : Jul 5, 2024, 4:22 PM IST

ಹೈದರಾಬಾದ್​(ತೆಲಂಗಾಣ):ರುಚಿ ರುಚಿ ಅಡುಗೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದ್ರಲ್ಲೂ ಭಾರತೀಯರು ಒಳ್ಳೆ ಊಟ ಹುಡುಕಿಕೊಂಡು ದೂರದೂರುಗಳಿಗೆ ಬೇಕಾದ್ರೂ ಹೋಗ್ತಾರೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಹಾರ, ರೆಸ್ಟೋರೆಂಟ್ ವಿಡಿಯೋಗಳು ಹೆಚ್ಚು ವೈರಲ್ ಆಗ್ತಿವೆ.

ಅದೇ ರೀತಿ ಹೈದರಾಬಾದ್​ನ ಕೇಬಲ್ ಬ್ರಿಡ್ಜ್ ಬಳಿ ಬೀದಿ ಬದಿ ಫುಡ್ ಸ್ಟಾಲ್‌ ನಡೆಸುತ್ತಿರುವ ಕುಮಾರಿ ಆಂಟಿ ಕೂಡಾ ಸಾಮಾಜಿಕ ಜಾಲತಾಣದ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದವರು. ಇವರ ಹೋಟೆಲ್​ಗೆ ತೆಲುಗು ಚಿತ್ರರಂಗದ ತಾರೆಯರು ಸಹ ಭೇಟಿ ನೀಡಿ ಊಟದ ರುಚಿ ಸವಿದಿದ್ದರು. ಇದೀಗ, ಬಹುಭಾಷಾ ನಟ ಸೋನು ಸೂದ್ ಫುಡ್ ಸ್ಟಾಲ್‌ಗೆ​ ಭೇಟಿ ನೀಡಿದ್ದು ಕುಟುಂಬ ಸದಸ್ಯರೊಂದಿಗೆ ಕೆಲಹೊತ್ತು ಕಾಲ ಕಳೆದಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದು ಫುಡ್ ಸ್ಟಾಲ್ ನಡೆಸುವ ಮೂಲಕ ಪ್ರಸಿದ್ಧಿ ಪಡೆದಿರುವ ಕುಮಾರಿ ಆಂಟಿಯನ್ನು ಅಭಿನಂದಿಸಿ ಸನ್ಮಾನಿಸಿದರು. ಇದೇ ವೇಳೆ, ಊಟ ಬಡಿಸಿ ಗಮನ ಸೆಳೆದರು.

ನಾನು 80 ರೂಪಾಯಿಯ ಆಹಾರ ಪ್ರಿಯ ಎಂದು ತಮಾಷೆ ಮಾಡಿದ ಸೋನುಸೂದ್, ತಮ್ಮ ಫತೇಹ್ ಚಿತ್ರಕ್ಕೆ ಸೆಲೆಬ್ರಿಟಿ ಅತಿಥಿಯಾಗಿ ಬರುವಂತೆಯೂ ಕುಮಾರಿ ಆಂಟಿಯನ್ನು ಆಹ್ವಾನಿಸಿದ್ದಾರೆ.

ಇದನ್ನೂ ಓದಿ:'ಪೆನ್ ಡ್ರೈವ್' ಜೊತೆ ಬಂದ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ - Pendrive Movie

ABOUT THE AUTHOR

...view details