ಕರ್ನಾಟಕ

karnataka

By ETV Bharat Karnataka Team

Published : Apr 8, 2024, 9:05 AM IST

ETV Bharat / entertainment

42ನೇ ವಸಂತಕ್ಕೆ ಕಾಲಿಟ್ಟ ಐಕಾನ್​ ಸ್ಟಾರ್​ ​; ಅಲ್ಲು ಅರ್ಜುನ್ ಸಿನಿ ಪಯಣ ಕುರಿತಾದ ಮಾಹಿತಿ ಇಲ್ಲಿದೆ - ALLU ARJUN BIRTHDAY

42ನೇ ವಸಂತಕ್ಕೆ ಕಾಲಿಟ್ಟ ನಟ ಅಲ್ಲು ಅರ್ಜುನ್​ ಅವರ​ ಸಿನಿ ಪಯಣದ ಕುರಿತಾದ ಕೆಲ ಮಾಹಿತಿ ಇಲ್ಲಿದೆ.

42ನೇ ವಸಂತಕ್ಕೆ ಕಾಲಿಟ್ಟ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​
42ನೇ ವಸಂತಕ್ಕೆ ಕಾಲಿಟ್ಟ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​

ಹೈದರಾಬಾದ್​: ಟಾಲಿವುಡ್​ನ ಐಕಾನ್​ ಸ್ಟಾರ್​ ಎಂದೇ ಖ್ಯಾತಿ ಪಡೆದಿರುವ ಅಲ್ಲು ಅರ್ಜುನ್ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

20 ವರ್ಷಗಳ ಹಿಂದೆ ಗಂಗೋತ್ರಿ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಅಲ್ಲು ಹಲವು ಟೀಕೆ, ಅಡೆತಡೆಗಳನ್ನು ದಾಟಿ ಸ್ಟೈಲಿಶ್ ಸ್ಟಾರ್ ನಿಂದ ಐಕಾನ್ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ 69 ವರ್ಷಗಳ ಟಾಲಿವುಡ್​ ಇತಿಹಾಸದಲ್ಲಿ ಯಾವೊಬ್ಬ ನಟರು ಸಾಧಿಸಲಾಗದ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. 2021ರಲ್ಲಿ ಬಿಡುಗಡೆಯಾದ ಪುಷ್ಪ: ದಿ ರೈಸ್‌ಗಾಗಿ ಅತ್ಯುತ್ತಮ ನಟರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.

42ನೇ ವಸಂತಕ್ಕೆ ಕಾಲಿಟ್ಟ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​

2003 ರಿಂದ ಈವರೆಗೆ 20 ಚಿತ್ರಗಳಲ್ಲಿ ನಾಯಕ ನಟನಾಗಿ ಬಣ್ಣ ಹಚ್ಚಿರುವ ಅಲ್ಲು 7 ಬ್ಲಾಕ್​ಬಸ್ಟರ್​ ಮತ್ತು 6 ಸೂಪರ್​ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಅವರ ಎರಡು ದಶಕಗಳ ಸುದೀರ್ಘ ಸಿನಿ ಪಯಣದಲ್ಲಿ ಬಹುತೇಕ​ ಚಿತ್ರಗಳು ಹಿಟ್​ ಆಗಿವೆ. ಅಲ್ಲು ಅರ್ಜುನ್​ ಸಿನಿ ಜರ್ನಿಯಲ್ಲಿ ಹಲವು ಟೀಕೆ, ಅಡೆತಡೆಗಳನ್ನು ದಾಟಿ ಸ್ಟೈಲಿಶ್ ಸ್ಟಾರ್ ನಿಂದ ಐಕಾನ್​ ಸ್ಟಾರ್ ಆಗಿ ಬೆಳೆದು ಬಂದ ರೀತಿ ಅದ್ಭುತ.

42ನೇ ವಸಂತಕ್ಕೆ ಕಾಲಿಟ್ಟ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​

ಏಪ್ರಿಲ್ 8, 1982 ರಂದು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಜನಿಸಿದ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಮತ್ತು ನಿರ್ಮಾಪಕ ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗ. ಆರಂಭದಲ್ಲಿ, ನಟನೆ ಅಲ್ಲು ಅರ್ಜುನ್ ಅವರ ವೃತ್ತಿಜೀವನದ ಮೊದಲ ಆಯ್ಕೆಯಾಗಿರಲಿಲ್ಲ. ಅವರು ಆನಿಮೇಟರ್ ಆಗಬೇಕೆಂದು ಬಯಸಿದ್ದರು. ಆದರೆ ಕುಟುಂಬದ ವಾತಾವರಣದ ಪ್ರಭಾವವು ಅಂತಿಮವಾಗಿ ಅವರನ್ನು ನಟನೆಯತ್ತ ಆಕರ್ಷಿಸಿತು.

42ನೇ ವಸಂತಕ್ಕೆ ಕಾಲಿಟ್ಟ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​

ಆರಂಭದಲ್ಲಿ ಅಲ್ಲು ಅರ್ಜುನ್​ ನೃತ್ಯದಿಂದಲೇ ಹೆಸರುವಾಸಿಯಾಗಿದ್ದರು. ಬಳಿಕ 2003ರಲ್ಲಿ ಪ್ರಸಿದ್ಧ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ನಿರ್ದೇಶನದ ಗಂಗೋತ್ರಿ ಚಿತ್ರದ ಮೂಲಕ ನಾಯಕ ನಟನಾಗಿ ಚೊಚ್ಚಲ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಸೂಪರ್‌ಹಿಟ್ ಆಗಿತ್ತು ಮತ್ತು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಮತ್ತು ಸಿ. ಅಶ್ವಿನಿ ದತ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುವ ಮೂಲಕ ಅಲ್ಲು ವೃತ್ತಿಜೀವನಕ್ಕೆ ಅಡಿಪಾಯ ಹಾಕಿದರು.

42ನೇ ವಸಂತಕ್ಕೆ ಕಾಲಿಟ್ಟ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​

ನಂತರ 2004ರಲ್ಲೇ ತೆರೆಕಂಡ ಸುಕುಮಾರ್ ಅವರ ಚೊಚ್ಚಲ ನಿರ್ದೇಶನದ "ಆರ್ಯ" ಚಿತ್ರ ಅಲ್ಲು ಅರ್ಜುನ್‌ ಅವರಿಗೆ ದೊಡ್ಡ ತಿರುವನ್ನೇ ನೀಡಿತು. ಈ ಚಿತ್ರ ಬ್ಲಾಕ್​​ಬಸ್ಟರ್​ ಹಿಟ್ ಆಗಿ ಅಲ್ಲು ಅವರ ಅದೃಷ್ಟವನ್ನೇ ಬದಲಾಯಿಸಿತು. ನಂತರ 2005ರಲ್ಲಿ 'ಬನ್ನಿ' 2007ರಲ್ಲಿ ದೇಶಮುದುರು, 2008ರಲ್ಲಿ 'ಪರುಗು' ಹೀಗೆ ಬ್ಯಾಕ್​ ಟೂ ಬ್ಯಾಕ್ ಹಿಟ್​ ಸಿನಿಮಾಗಳ ಮೂಲಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. 2009ರಲ್ಲಿ, ಸುಕುಮಾರ್, ಅಲ್ಲು ಅರ್ಜುನ್ ಮತ್ತೊಮ್ಮೆ ಆರ್ಯ-2 ಗಾಗಿ ಕೈಜೋಡಿಸಿದರು, ಇದು ಆರ್ಯ ಸೀಕ್ವೆಲ್​ ಆಗಿದೆ. ಇದೂ ಕೂಡ ಭರ್ಜರಿ ಹಿಟ್​ ಪಡೆಯಿತು. ಸತತ ಗೆಲುವಿನ ಓಟ ಮುಂದೆವರೆಸಿದ್ದ ಅಲ್ಲುಗೆ 2010ರಲ್ಲಿ ಬಿಡುಗಡೆಯಾದ ವರುಡು ಮತ್ತು ವೇದಂ ಚಿತ್ರಗಳು ಫ್ಲಾಪ್​ ಆದವು.

42ನೇ ವಸಂತಕ್ಕೆ ಕಾಲಿಟ್ಟ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​

ನಂತರ ಬದರಿನಾಥ್ (2011) ಬಿಡುಗಡೆಯೊಂದಿಗೆ ಕಮ್​ ಬ್ಯಾಕ್​ ಮಾಡಿದ ಅಲ್ಲು ಜೂಲಾಯಿ (2012), ಇದ್ದರಮ್ಮಾಯಿಲತೋ (2013) ಮತ್ತು ಯೇವಡು (2014), ರೇಸ್ ಗುರ್ರಂ (2014), ರುದ್ರಮ್ಮಾದೇವಿ (2015), ಸರ್ರೈನೋಡು (2016), ದುವ್ವಾಡ ಜಗನ್ನಾಥಂ (2017), 2020 ರಲ್ಲಿ ಅಲಾ ವೈಕುಂಠಪುರಮುಲು ನಂತಹ ಹಿಟ್​ ಚಿತ್ರಗಳಲ್ಲಿ ನಟಿಸಿದರು. ನಂತರ 2021ರಲ್ಲಿ ಮತ್ತೊಮ್ಮೆ ಸುಕುಮಾರ್ ಅವರೊಂದಿಗೆ ಕೈಜೋಡಿಸಿದ ಅಲ್ಲು ಈ ಬಾರಿ ಪ್ಯಾನ್-ಇಂಡಿಯನ್ ಚಲನಚಿತ್ರ ಪುಷ್ಪ: ದಿ ರೈಸ್ ನಲ್ಲಿ ಬಣ್ಣ ಹಚ್ಚಿದರು. ಕೋವಿಡ್-19 ಸಾಂಕ್ರಾಮಿಕ ನಂತರ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಇಂತಹ ವೇಳೆ ಈ ಚಿತ್ರದ ಮೂಲಕ ಮತ್ತೆ ಚಿತ್ರಮಂದಿರಗಳಿಗೆ ಜನರನ್ನು ಕರೆತರುವಲ್ಲಿ ಈ ಚಿತ್ರ ಯಶಸ್ವಿಯಾಗಿತ್ತು. ಇದೇ ಚಿತ್ರಕ್ಕೆ ಅಲ್ಲು ಅವರಿಗೆ ರಾಷ್ಟ್ರ ಪ್ರಶಸ್ತಿ ಅಭಿಸಿತ್ತು. ನಟ ಅಲ್ಲು ಅರ್ಜುನ್​ಗೆ ಈಟಿವಿ ಭಾರತದ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿತ್ತದೆ.

ಇದನ್ನೂ ಓದಿ:ನಾಳೆ 'ಪುಷ್ಪ 2' ಟೀಸರ್ ರಿಲೀಸ್: ಎಡಿಟಿಂಗ್ ರೂಂನಿಂದ ಫೋಟೋ ಹಂಚಿಕೊಂಡ ಅಲ್ಲು ಅರ್ಜುನ್ - Pushpa 2

ABOUT THE AUTHOR

...view details