ETV Bharat / entertainment

ಗಾಂಧಿ ಬದುಕು, ಆದರ್ಶ, ಹೋರಾಟಗಳ ಬಗ್ಗೆ ಬೆಳಕು ಚೆಲ್ಲಿದ ಸಿನಿಮಾಗಳಿವು! - movies about Gandhi

ಗಾಂಧಿ ಎಂಬ ಮಹಾನ್ ವ್ಯಕ್ತಿ ಬಗ್ಗೆ ನಾನಾ ರೂಪದಲ್ಲಿ ಸಿನಿಮಾಗಳು ಮೂಡಿ ಬಂದಿವೆ.

movies about Gandhi
ಗಾಂಧಿ ಕುರಿತ ಸಿನಿಮಾ (Photo: film poster)
author img

By ETV Bharat Entertainment Team

Published : Oct 2, 2024, 8:36 PM IST

ಮಹಾತ್ಮ ಗಾಂಧಿ, ಭಾರತ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ಮತ್ತು ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರು. ಶಾಂತಿಯಿಂದ ಮಾತ್ರ ಸ್ವಾತಂತ್ರ್ಯ ಸಾಧ್ಯ ಎಂದು ಹೋರಾಡಿದವರಲ್ಲಿ ಗಾಂಧಿ ಮೊದಲಿಗರು. ಬ್ರಿಟಿಷರಿಂದ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ, ಅಹಿಂಸೆಯ ಸಿದ್ಧಾಂತಗಳಿಂದ ಗಮನ ಸೆಳೆದ ವ್ಯಕ್ತಿ. ಭಾರತಕ್ಕೆ ಸ್ವಾತಂತ್ರ್ಯ ಘೋಷಿಸಿದ ಕೆಲವೇ ತಿಂಗಳಲ್ಲಿ ಗಾಂಧಿ ಅವರ ಹತ್ಯೆಯಾಯಿತು. ಆದರೆ, ಗಾಂಧಿಯವರ ಆದರ್ಶಗಳು, ಸತ್ಯ, ಅಹಿಂಸೆಯ ಬೋಧನೆ, ಜೀವನ ಆಚರಣೆ ಗಾಂಧಿಯನ್ನು ಅಜರಾಮರವಾಗಿಸಿವೆ.

ಗಾಂಧಿ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿವೆ. ಇತಿಹಾಸಕಾರರು ಮಹಾತ್ಮನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಲೇ ಬಂದಿದ್ದಾರೆ. ಅದೇ ರೀತಿ ಈ ಮಹಾನ್ ವ್ಯಕ್ತಿಯ ಬಗ್ಗೆ ನಾನಾ ರೂಪದಲ್ಲಿ ಸಿನಿಮಾಗಳು ಮೂಡಿ ಬಂದಿವೆ..

ಭಾರತೀಯ ಚಿತ್ರರಂಗದ ಬೆಳ್ಳಿತೆರೆ ಮೇಲೆ ಮಹಾತ್ಮ ಗಾಂಧಿ ಕುರಿತ ಸಾಕಷ್ಟು ಸಿನಿಮಾಗಳು ಬಂದಿವೆ. ಅದರಲ್ಲಿ ಕೆಲ ಚಿತ್ರಗಳು ಅಕ್ಷರಶಃ ಗಾಂಧಿಯನ್ನೇ ನೋಡಿದಂತೆ ಅನುಭವ ಕೊಡುತ್ತದೆ. ಗಾಂಧಿ ಜಯಂತಿ ಅಂಗವಾಗಿ ಕನ್ನಡ ಮತ್ತು ಬೇರೆ ಭಾಷೆಯ ಸಿನಿಮಾಗಳ ಒಂದು ನೋಟ ಇಲ್ಲಿದೆ.

movies about Gandhi
ಗಾಂಧಿ ಕುರಿತ ಸಿನಿಮಾ (Photo: film poster)

1982ರಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದ ಚಿತ್ರ: ಮಹಾತ್ಮಾ ಗಾಂಧಿಜೀಯವರ ಬಗೆಗಿನ ಸಿನಿಮಾಗಳ ಪಟ್ಟಿಯಲ್ಲಿ ಎಲ್ಲದಕ್ಕೂ ಮೊದಲು ಬರುವ ಹೆಸರು, ರಿಚರ್ಡ್ ಅಟೆನ್‌ಬರೋ ನಿರ್ದೇಶಿಸಿ ಬೆನ್ ಕಿಂಗ್ಸಿ ಲೀ ಗಾಂಧಿಯಾಗಿ ಅಭಿನಯಿಸಿದ್ದ ಗಾಂಧಿ ಸಿನಿಮಾ. 1982ರಲ್ಲಿ ಬಿಡುಗಡೆ ಆದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಗಾಂಧಿ ಮೈ ಫಾದರ್: ಗಾಂಧಿ ಕುರಿತಾಗಿ ಭಾರತದಲ್ಲಿ ವಸ್ತುನಿಷ್ಠವಾಗಿ ತಯಾರಾಗಿರುವ ಸಿನಿಮಾಗಳಲ್ಲಿ ಒಂದು ''ಗಾಂಧಿ ಮೈ ಫಾದರ್''. 2007ರಲ್ಲಿ ತೆರೆಕಂಡ ಈ ಚಿತ್ರ, ತಂದೆಯ ಸಿದ್ದಾಂತಗಳನ್ನು ಮಗ ವಿರೋಧಿಸುವ ಸಿನಿಮಾವಾಗಿತ್ತು. ಗಾಂಧಿಯ ಮಗನಾಗಿ ಅಕ್ಷಯ್ ಖನ್ನಾ ಅದ್ಭುತ ಅಭಿನಯ ನೀಡಿದ್ದಾರೆ.

ಇನ್ನೂ ಬಾಲಿವುಡ್ ನಿರ್ದೇಶಕ ಶ್ಯಾಂ ಬೆನಗಲ್ ನಿರ್ದೇಶಿಸಿದ ಸಿನಿನಾ ಮೇಕಿಂಗ್ ಆಫ್ ಮಹಾತ್ಮಾ. ಸಿನಿಮಾ, ಮಹಾತ್ಮಾ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಕಳೆದ ದಿನಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಹೇಗೆ ಅಹಿಂಸಾವಾದಿಯಾಗಿ ರೂಪುಗೊಳ್ಳುತ್ತಾ ಸಾಗಿದರು ಎಂಬುದು ಸಿನಿಮಾದಲ್ಲಿ ಚರ್ಚಿತವಾಗಿದೆ. ಇದು ಫಾತಿಮಾ ನಾಯರ್ ಅವರ ಪುಸ್ತಕ ಆಧರಿಸಿದ ಸಿನಿಮಾ.

ಲಗೆ ರಹೋ ಮುನ್ನಾ ಭಾಯಿ: ಹಿಂದಿಯ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಗಾಂಧಿಯನ್ನು ಹೊಸತಲೆಮಾರಿಗೆ ಅವರದ್ದೇ ರೀತಿಯಲ್ಲಿ ಪರಿಚಯಿಸಿದ ಚಿತ್ರ ಲಗೆ ರಹೋ ಮುನ್ನಾ ಭಾಯಿ. ಇದೊಂದು ಹಾಸ್ಯಮಯ ಸಿನಿಮಾ ಆದರೂ ಸಹ ಗಾಂಧಿ ತತ್ವಕ್ಕೆ ಯಾವುದೇ ಅಪಹಾಸ್ಯ ಮಾಡದೆ ಸಮಾಜದ ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆಯಿತು. ‌ಗಾಂಧಿವಾದಿಗಳಿಂದ ಈ ಸಿನಿಮಾ ಸಾಕಷ್ಟು ಟೀಕೆಗೆ ಗುರಿಯಾಯಿತು, ಆದರೆ ಈ ಸಿನಿಮಾ ಸಮಾಜದ ಮೇಲೆ ಬೀರಿದ ಪರಿಣಾಮ ಗಮನಾರ್ಹದ್ದಾಗಿತ್ತು.

ಹೇ ರಾಮ್: ಕಮಲ್‌ ಹಾಸನ್ ನಿರ್ದೇಶಿಸಿ ಅಭಿನಯಿಸಿದ ಚಿತ್ರ ಹೇ ರಾಮ್. ಗಾಂಧಿ ಕುರಿತಾದ ಸಿನಿಮಾ ಅಲ್ಲದೇ ಇದ್ದರೂ ಸಹ ವಿಭಜನೆ, ಗಾಂಧಿ ಹತ್ಯೆ ಈ ವಿಷಯಗಳು ಜನರ ಮೇಲೆ ಬೀರಿದ ಪರಿಣಾಮಗಳನ್ನು ತೋರಿಸುವ ಪ್ರಯತ್ನ ಸಿನಿಮಾದಲ್ಲಾಗಿತ್ತು. ಕಮಲ್ ಹಾಸನ್ ಅವರ ಪ್ರಯೋಗಶೀಲತೆಗೆ ಈ ಸಿನಿಮಾ ಒಳ್ಳೆಯ ಉದಾಹರಣೆ. ಸಿನಿಮಾದಲ್ಲಿ ಶಾರುಖ್ ಖಾನ್ ಸಹ ನಟಿಸಿದ್ದಾರೆ.

ಗಮನ ಸೆಳೆಯುವ ಕೂರ್ಮಾವತಾರ ಸಿನಿಮಾ: ಗಾಂಧೀಜಿ ಬಗ್ಗೆ ಕನ್ನಡದಲ್ಲಿ ಹಲವು ಸಿನಿಮಾಗಳು ಬೇರೆ ಬೇರೆ ಕಥೆಗಳ ಮೂಲಕ ಗಮನ ಸೆಳೆದಿವೆ. ಅದರಲ್ಲಿ 2011ರಲ್ಲಿ ಬಂದ‌ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದ ಕೂರ್ಮಾವತಾರ ಸಿನಿಮಾ. ಈ ಚಿತ್ರ ಗಾಂಧಿ ತತ್ವದ ಆಧಾರದ ಮೇಲೆಯೇ ಇದೆ. ಗಾಂಧಿ ಪಾತ್ರಧಾರಿ ಹಾಗೂ ಗಾಂಧಿ ಆದರ್ಶಗಳ ನಡುವಿನ ತಾಕಲಾಟ ಸಿನಿಮಾದ ವಸ್ತು. ಕನ್ನಡದಲ್ಲಿ ಗಾಂಧಿ ಕುರಿತಾಗಿ ಬಂದಿರುವ ಉತ್ತಮ ಸಿನಿಮಾ ಇದು.

movies about Gandhi
ಗಾಂಧಿ ಕುರಿತ ಸಿನಿಮಾ (Photo: film poster)

ಮೋಡಿ ಮಾಡಿದ ಮೋಹನದಾಸ್: 2011ರಲ್ಲಿ ಬಂದ ಸಿನಿಮಾ ಮೋಹನದಾಸ್. ಮಹಾತ್ಮಾ ಗಾಂಧಿಯವರ ಬಾಲ್ಯದ ಕುರಿತಾದ ಸಿನಿಮಾ. ಒಂಬತ್ತು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ಬರೆದು ನಿರ್ದೇಶಿಸಿದ್ದಾರೆ. ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣ ಮಾಡಲಾಗಿದೆ.

ಮಕ್ಕಳ ಚಿತ್ರ ನಿರ್ದೇಶಕ ಎನ್ ಆರ್ ನಂಜುಂಡೇಗೌಡ ನಿರ್ದೇಶನದ ಸಿನಿಮಾ ನಾನು ಗಾಂಧಿ. ಈ ಚಿತ್ರ ಗಾಂಧಿಜೀಯವರ ತತ್ವಗಳ ಕಥೆಯನ್ನ ಹೇಳುತ್ತೆ‌.
ಮಾಸ್ಟರ್ ಲಿಕಿತ್ ಹಾಗೂ ಪ್ರಮೀಳಾ ಜೋಷಾಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು.

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಾಂಧಿ ಹೆಸರಿನಲ್ಲಿ ಬಂದ ಸಿನಿಮಾ ಗಾಂಧಿ‌ ಮತ್ತು ನೋಟು. ಯೋಗಿ ದೇವಗಂಗೆ ಕಥೆ, ಚಿತ್ರಕಥೆ ಬರೆದು ಯೋಗಿ ಈ ಸಿನಿಮಾವನ್ನ‌ ನಿರ್ದೇಶನ ಮಾಡಿದ್ದರು. ಸಿನಿಮಾ ಗೀತರಚನೆಕಾರ ಹಾಗು ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ ಮಗಳು ದಿವಿಜಾ ನಾಗೇಂದ್ರಪ್ರಸಾದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗಾಂಧಿ ತತ್ವಗಳನ್ನು ಹಾಗೂ ನೋಟನ್ನು ಮುಗ್ಧ ಹಳ್ಳಿ ಜನರು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನ ಈ ಚಿತ್ರ ಒಳಗೊಂಡಿದೆ.

ಇದನ್ನೂ ಓದಿ: 'ಒಂದಾನೊಂದು ಕಾಲದಲ್ಲಿ' ಮಿಂಚಿ ಮರೆಯಾದ ಶಂಕರ್ ನಾಗ್: ಕಾರು ಅಪಘಾತವಾಗಿದ್ದೇಗೆ? ಪ್ರತ್ಯಕ್ಷದರ್ಶಿಗಳು ಹೇಳಿದ್ದಿಷ್ಟು - Shankar Nag Car Accident

ಒಟ್ಟಾರೆ ಗಾಂಧೀಜಿಯವರ ಬಗ್ಗೆ ಬೇರೆ ಬೇರೆ ಕಥೆಗಳನ್ನು ಇಟ್ಟುಕೊ‌ಂಡು ಸಿನಿಮಾಗಳು ಬಂದಿವೆ ಅನ್ನೋದಿಕ್ಕೆ ಈ ಚಿತ್ರಗಳು ಸಾಕ್ಷಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.