Kara Boondi Recipe in Kannada: ಖಾರದ ಬೂಂದಿ ಒಂದು ಕುರುಕಲು ತಿಂಡಿಯಾಗಿದೆ. ಸ್ವಲ್ಪ ಟೇಸ್ಟ್ ನೋಡಿದರೆ ಸಾಕು ಇನ್ನಷ್ಟು ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಹಬ್ಬ, ಸಮಾರಂಭ, ಮದುವೆ ಸಂದರ್ಭದಲ್ಲಿ ಇದನ್ನು ಮಾಡುವುದು ತುಂಬಾ ಕಷ್ಟದ ಕೆಲಸ ಎಂದು ಕೆಲವರು ಹೇಳುತ್ತಾರೆ. ಮನೆಯಲ್ಲಿ ಮಾಡಿದರೆ, ಅದು ಸರಿಯಾಗಿ ಬರುವುದಿಲ್ಲ ಎಂದು ಇನ್ನು ಕೆಲವರು ಭಾವಿಸುತ್ತಾರೆ. ತಿನ್ನಬೇಕೆನಿಸಿದಾಗ ಸ್ವೀಟ್ ಅಂಗಡಿಗಳಿಗೆ ಹೋಗಿ ತರುತ್ತಾರೆ. ಮನೆಯಲ್ಲೇ ಸೂಪರ್ ಟೇಸ್ಟಿಯಾಗಿರುವ ಖಾರದ ಬೂಂದಿ ರೆಡಿ ಮಾಡುವುದು ಹೇಗೆ? ಇದಕ್ಕೆ ಬೇಕಾದ ಪದಾರ್ಥಗಳೇನು? ತಯಾರಿಸುವ ವಿಧಾನ ಹೇಗೆ ಎಂಬುದರ ಕುರಿತು ತಿಳಿಯೋಣ.
ಬೇಕಾಗುವ ಪದಾರ್ಥಗಳೇನು?:
- 200 ಗ್ರಾಂ ಕಡಲೆ ಬೇಳೆ ಹಿಟ್ಟು
- 2 ಟೀಸ್ಪೂನ್ ಬಾಂಬೆ ರವಾ
- ಒಂದು ಟೀಸ್ಪೂನ್ ಉಪ್ಪು
- 300 ಮಿಲಿ ನೀರು
- 1/4 ಕಪ್ ಶೇಂಗಾ (ಕಡಲೆಕಾಯಿ)
- ಕಾಲು ಕಪ್ ಗೋಡಂಬಿ
- 5 ಕರಿಬೇವಿನ ಎಲೆಗಳು
- ಎಣ್ಣೆ - ಕರಿಯಲು ಬೇಕಾಗುವಷ್ಟು
- ಮೆಣಸಿನಕಾಯಿ ಒಂದು ಟೀಸ್ಪೂನ್
- ಸ್ವಲ್ಪ ಬ್ಲ್ಯಾಕ್ ಉಪ್ಪು
- ರುಚಿಗೆ ತಕ್ಕಷ್ಟು ಉಪ್ಪು
- ಕಾಲು ಚಮಚ ಚಾಟ್ ಮಸಾಲಾ
ತಯಾರಿಸುವುದು ಹೇಗೆ?:
- ಮೊದಲು ಕಡಲೆ ಬೇಳೆ ಹಿಟ್ಟನ್ನು ತೆಗೆದುಕೊಂಡು ಜರಡಿ ಹಿಡಿಯಿರಿ. ಬಳಿಕ ಇದರೊಂದಿಗೆ ಬಾಂಬೆ ರವಾ ಬೆರೆಸಬೇಕು.
- ಈಗ ಬಾಂಬೆ ರವಾ, 1 ಚಮಚ ಉಪ್ಪು ಮತ್ತು ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಮತ್ತು ಯಾವುದೇ ಉಂಡೆಗಳಿಲ್ಲದೆ ಚೆನ್ನಾಗಿ ಮಿಶ್ರಣ ಮಾಡಿ. (ಹಿಟ್ಟು ಸರಿಯಾಗಿ ಕಲಸದಿದ್ದರೆ ಅದು ಗುಂಡಗೆ ಬರುವುದಿಲ್ಲ)
- ಮೊದಲು ಒಲೆಯನ್ನು ಆನ್ ಮಾಡಿ ಮತ್ತು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.
- ಈಗ ಕುದಿಯುತ್ತಿರುವ ಎಣ್ಣೆಯಿಂದ ಎರಡು ಇಂಚು ದೂರದಲ್ಲಿ ಸೌಟು ಇಟ್ಟು ಅದಕ್ಕೆ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ. ಅದರ ನಂತರ, ನೀವು ಅದನ್ನು ಕರಿಯುವ ಬಾಳಿಗೆಯಿಂದ ತಿರುಗಿಸಿದರೆ, ಬೂಂದಿ ಎಣ್ಣೆಯಲ್ಲಿ ಸರಿಯಾಗಿ ಬೇಯುತ್ತದೆ.
- ಇದು ತಿಳಿ ಕಂದು ಬಣ್ಣಕ್ಕೆ ತಿರುಗಿದಾಗ, ಅದನ್ನು ಬಾಣಲೆಯಿಂದ ಹೊರತೆಗೆದು ಪಕ್ಕಕ್ಕೆ ಇರಿಸಿ.
- ಈಗ ಅದೇ ಎಣ್ಣೆಯಲ್ಲಿ ಶೇಂಗಾವನ್ನು ಕೆಂಪಗೆ ಆಗುವಂತೆ ಹುರಿದು ಪಕ್ಕಕ್ಕಿಡಿ.
- ನಂತರ ಅದೇ ರೀತಿ ಗೋಡಂಬಿ ಮತ್ತು ಕರಿಬೇವಿನ ಸೊಪ್ಪು ಎಣ್ಣೆಯಲ್ಲಿ ಹಾಕಿ ಕೆಂಪಗೆ ಆಗುವಂತೆ ಹುರಿದು ಪಕ್ಕಕ್ಕೆ ಇಡಿ.
- ಈಗ ಖಾರದ ಪುಡಿ, ಸ್ವಲ್ಪ ಬ್ಲ್ಯಾಕ್ ಸಾಲ್ಟ್ ಉಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಅದರ ನಂತರ ಈ ಮಿಶ್ರಣವನ್ನು ಬೂಂದಿಯಲ್ಲಿ ಸ್ವಲ್ಪ ಸ್ವಲ್ಪ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಆಗ ಸಖತ್ ಟೇಸ್ಟಿಯಾದ ಖಾರದ ಬೂಂದಿ ರೆಡಿ!