ಪಾಟ್ನಾ (ಬಿಹಾರ): ರಾಜಕೀಯ ಪಕ್ಷಗಳಿಗೆ ಚುನಾವಣಾ ತಂತ್ರಗಳನ್ನು ರೂಪಿಸುತ್ತಿದ್ದ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರು ಸ್ವತಃ ರಾಜಕೀಯ ಪಕ್ಷ ಘೋಷಿಸಿದರು. ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು 'ಜನ ಸ್ವರಾಜ್' ಪಕ್ಷವನ್ನು ಅಧಿಕೃತವಾಗಿ ಪ್ರಕಟಿಸಿದರು.
ಮಾಜಿ ಕೇಂದ್ರ ಸಚಿವ ದೇವೇಂದ್ರ ಪ್ರಸಾದ್ ಯಾದವ್, ಮಾಜಿ ಅಧಿಕಾರಿ ಪವನ್ ವರ್ಮಾ, ಮಾಜಿ ಸಂಸದ ಮೊನಝಿರ್ ಹಸನ್, ಮಾಜಿ ಐಎಫ್‌ಎಸ್ ಅಧಿಕಾರಿ ಮನೋಜ್ ಭಾರ್ತಿ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಇದೇ ವೇಳೆ ನೇಮಕ ಮಾಡಲಾಗಿದೆ.
#WATCH | Patna, Bihar | Jan Suraaj founder Prashant Kishor officially launched his political party - Jan Suraaj Party.
— ANI (@ANI) October 2, 2024
He says, " if bihar has to have a world-class education system, rs 5 lakh crore is needed in the next 10 years. when the liquor ban will be removed, that money… pic.twitter.com/w8Og4Cn2NX
ಭಾರತೀಯ ಶಿಕ್ಷಣ ವಿಶ್ವದರ್ಜೆಗೆ ಬದಲಾಯಿಸುವೆ: ಪಕ್ಷದ ಅಧಿಕೃತ ಪ್ರಕಟಣೆ ಬಳಿಕ ಮಾತನಾಡಿದ ಪ್ರಶಾಂತ್ ಕಿಶೋರ್, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ವಿವರಿಸಿ ಮತಗಳನ್ನು ಯಾಚಿಸುತ್ತೇವೆ. ಜನ ಸ್ವರಾಜ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಮದ್ಯ ನಿಷೇಧ ತೆರವು ಮಾಡಲಾಗುವುದು. ರಾಜ್ಯವನ್ನು ವಿಶ್ವ ದರ್ಜೆಯ ಶಿಕ್ಷಣ ವ್ಯವಸ್ಥೆಯನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕಾಗಿ ಮುಂದಿನ ಹತ್ತು ವರ್ಷಗಳಲ್ಲಿ 5 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ. ಮದ್ಯಪಾನ ನಿಷೇಧ ತೆರವು ಮಾಡಿ, ಅದರಿಂದ ಬಂದ ಹಣವನ್ನು ಭದ್ರತೆ, ರಸ್ತೆ, ನೀರು, ವಿದ್ಯುತ್ಗಾಗಿ ಬಳಕೆ ಮಾಡಲಾಗುವುದು. ಜೊತೆಗೆ ಶಿಕ್ಷಣ ವ್ಯವಸ್ಥೆಯ ಬದಲಾವಣೆಗೂ ಖರ್ಚು ಮಾಡುವುದಾಗಿ ತಿಳಿಸಿದರು.
ಮದ್ಯ ನಿಷೇಧದಿಂದ ಪ್ರತಿ ವರ್ಷ ರಾಜ್ಯ ಬೊಕ್ಕಸಕ್ಕೆ 20 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಮದ್ಯಪಾನ ನಿಷೇಧ ತೆಗೆದು ಹಾಕುತ್ತೇನೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಘೋಷಣೆಗಳು ಮಾತ್ರ ಅಭಿವೃದ್ಧಿಗೆ ಸಾಕಾಗುವುದಿಲ್ಲ ಎಂದು ಜೆಡಿಯು ಪಕ್ಷವನ್ನುದ್ದೇಶಿಸಿ ಹೇಳಿದರು.
ಹೊಸ ಸಂಪ್ರದಾಯಕ್ಕೆ ನಾಂದಿ: ಕಳೆದ 30 ವರ್ಷಗಳಿಂದ ಬಿಹಾರದ ಜನರು ಆರ್‌ಜೆಡಿ, ಜೆಡಿಯು, ಬಿಜೆಪಿಗೆ ಮಾತ್ರ ಮತ ಹಾಕುತ್ತಿದ್ದಾರೆ. ಇನ್ನು ಮುಂದೆ ಈ ಸಂಪ್ರದಾಯ ಕೊನೆಗೊಳ್ಳಲಿದೆ. ಕುಟುಂಬ ರಾಜಕಾರಣದ ಪಕ್ಷ ನಮ್ಮದಲ್ಲ. ಕೇಂದ್ರ ಚುನಾವಣಾ ಆಯೋಗ ನಮ್ಮ ಪಕ್ಷಕ್ಕೆ ಸ್ಥಾನಮಾನ ನೀಡಲಿದೆ. ಬಿಜೆಪಿಯೊಂದಿಗೆ ಕೈ ಜೋಡಿಸಲಿದೆ ಎಂಬ ವಿರೋಧ ಪಕ್ಷಗಳು ಆರೋಪಗಳಿಗೆ ಅವರು ತಮ್ಮದೇ ದಾಟಿಯಲ್ಲಿ ಉತ್ತರ ನೀಡಿದರು.
ಪ್ರಶಾಂತ್ ಕಿಶೋರ್ ಎರಡು ವರ್ಷಗಳ ಹಿಂದೆ ಜನ ಸ್ವರಾಜ್ ಯಾತ್ರೆ ಆರಂಭಿಸಿದ್ದರು. 1917 ರಲ್ಲಿ ಮಹಾತ್ಮ ಗಾಂಧಿ ಅವರು ಚಂಪಾರಣ್ ಜಿಲ್ಲೆಯಿಂದ ಮೊದಲ ಸತ್ಯಾಗ್ರಹ ಚಳವಳಿಯನ್ನು ಪ್ರಾರಂಭಿಸಿದ ಸ್ಥಳದಿಂದ ಆರಂಭವಾಗಿ 3 ಸಾವಿರ ಕಿಮೀ ನಡಿಗೆಯನ್ನು ಈ ಯಾತ್ರೆ ಪೂರೈಸಿದೆ. ಪಾದಯಾತ್ರೆ ಆರಂಭವಾಗಿ ಎರಡು ವರ್ಷಗಳ ಬಳಿಕ ಇದೀಗ ಪಕ್ಷವನ್ನು ಪ್ರಕಟಿಸಿದ್ದಾರೆ.