ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್‌ನ ಬಲ್ನೋಯಿ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ವಾಹನ ಕಂದಕಕ್ಕೆ ಉರುಳಿಬಿದ್ದು ಐವರು ಯೋಧರು ಸಾವನ್ನಪ್ಪಿ, ಐವರು ತೀವ್ರವಾಗಿ ಗಾಯಗೊಂಡ ದುರ್ಘಟನೆ ಮಂಗಳವಾರ ನಡೆದಿದೆ.
ಬಾಲ್ನೋಯ್‌ನ ಘೋರಾ ಪೋಸ್ಟ್ಗೆ ಯೋಧರು ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ವಾಹನದಲ್ಲಿ ಚಾಲಕ ಸೇರಿ 10 ಯೋಧರಿದ್ದರು. ಈ ವೇಳೆ ವಾಹನ ಅಚಾನಕ್ಕಾಗಿ ಕಂದಕಕ್ಕೆ ಉರುಳಿ ಬಿದ್ದಿದೆ.
All ranks of #WhiteKnightCorps extend their deepest condolences on the tragic loss of five brave soldiers in a vehicle accident during operational duty in the #Poonch sector.
— White Knight Corps (@Whiteknight_IA) December 24, 2024
Rescue operations are ongoing, and the injured personnel are receiving medical care.@adgpi…
ವಿಷಯ ತಿಳಿದ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿ ಗಾಯಾಳು ಯೋಧರನ್ನು ಹತ್ತಿರದ ಆರೋಗ್ಯ ಶಿಬಿರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವಾಹನ ಕಮರಿಗೆ ಬಿದ್ದಿದ್ದು ದುರಂತಕ್ಕೆ ಕಾರಣ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
#WATCH | Poonch, Jammu and Kashmir | 5 soldiers lost their lives after an army vehicle met with an accident in the Poonch sector.
— ANI (@ANI) December 24, 2024
Rescue operations are ongoing, and the injured personnel are receiving medical care: White Knight Corps
(Visuals from the spot) pic.twitter.com/OWrRFIOdLK
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ವೈಟ್ ನೈಟ್ ಕಾರ್ಪ್ಸ್ (16 ಕಾರ್ಪ್ಸ್) ವಕ್ತಾರರು, "ಪೂಂಚ್ ಸೆಕ್ಟರ್‌ನಲ್ಲಿ ಗಸ್ತು ತಿರುಗುತ್ತಿದ್ದ ಸೇನಾ ವಾಹನ ಕಂದಕಕ್ಕೆ ಉರುಳಿ ಬಿದ್ದಿದೆ. ಐವರು ವೀರ ಸೈನಿಕರು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳು ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯೋಧರ ಸಾವಿಗೆ ವೈಟ್ ನೈಟ್ ಕಾರ್ಪ್ಸ್‌ನಿಂದ ಸಂತಾಪಗಳು" ಎಂದು ಬರೆದುಕೊಂಡಿದೆ.
ಇದನ್ನೂ ಓದಿ: ಮಗುವಿಗಾಗಿ ಮೃತಪಟ್ಟ ಪತಿಯ ದೇಹದಿಂದ ವೀರ್ಯ ತೆಗೆಯಲು ಬೇಡಿಕೆ ಇಟ್ಟ ಪತ್ನಿ!