ETV Bharat / education-and-career

ಯುಜಿ ಮೆಡಿಕಲ್–2024: ಮಾಪ್ ಅಪ್ ಸುತ್ತಿಗೆ 596 ವೈದ್ಯಕೀಯ ಸೀಟು ಲಭ್ಯ - UG Medical Mop Up Round - UG MEDICAL MOP UP ROUND

ಎರಡನೇ ಸುತ್ತಿನ ಬಳಿಕ ಉಳಿದಿರುವ ವೈದ್ಯಕೀಯ ಸೀಟುಗಳ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮಾಹಿತಿ ನೀಡಿದೆ. ಅಲ್ಲದೆ, ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ವಿವರಿಸಿದ್ದಾರೆ.

ug medical-
ಕೆಇಎ (ETV Bharat)
author img

By ETV Bharat Karnataka Team

Published : Oct 2, 2024, 6:57 AM IST

ಬೆಂಗಳೂರು: ಎರಡನೇ ಸುತ್ತಿನ ಸೀಟು ಹಂಚಿಕೆ ಬಳಿಕ ಉಳಿದಿರುವ ಒಟ್ಟು 596 ವೈದ್ಯಕೀಯ (ಇದರಲ್ಲಿ ರದ್ದುಪಡಿಸಿಕೊಂಡ ಸೀಟು ಸೇರಿವೆ) ಸೀಟು ಮಾಪ್-ಅಪ್ ಸುತ್ತಿಗೆ ಲಭ್ಯ ಇದ್ದು, ಅದರ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮಂಗಳವಾರ ತನ್ನ ವೆಬ್​ಸೈಟ್​​​ನಲ್ಲಿ ಪ್ರಕಟಿಸಿದೆ.

ಈ ಸೀಟುಗಳನ್ನು ಪಡೆಯಲು ಆಸಕ್ತಿಯಿದ್ದಲ್ಲಿ ಅರ್ಹ ಅಭ್ಯರ್ಥಿಗಳು ಮುಂಚಿತವಾಗಿಯೇ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಿ, ಯುಜಿನೀಟ್ -2024ರ ಆನ್​ಲೈನ್ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಸರ್ಕಾರಿ ಕೋಟಾದ 7, ಖಾಸಗಿಕೋಟಾದ 135, ಮ್ಯಾನೇಜ್ಮೆಂಟ್ ಕೋಟಾದ 453 ಮತ್ತು ಎನ್​ಆರ್​​ಐ ಕೋಟಾದ ಒಂದು ಸೀಟು ಮಾಪ್ ಅಪ್ ಸುತ್ತಿಗೆ ಲಭ್ಯ ಇವೆ ಎಂದು ಹೇಳಿದ್ದಾರೆ.

ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ: ಯುಜಿನೀಟ್ 2024ರ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಮುಂಚಿತವಾಗಿಯೇ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ (ಮೆಡಿಕಲ್ ಕೋರ್ಸ್ ಫೀ ಡೆಪಾಸಿಟ್) ಪಾವತಿಸುವುದು ಕಡ್ಡಾಯ. ಎರಡನೇ ಸುತ್ತಿನಲ್ಲಿ ಕಾಷನ್ ಡೆಪಾಸಿಟ್ ಪಾವತಿಸಿ ಯಾವುದೇ ವೈದ್ಯಕೀಯ ಸೀಟು ಹಂಚಿಕೆಯಾಗದವರು ಪಾವತಿಸಿದ್ದ ಕಾಷನ್ ಡೆಪಾಸಿಟ್ ಕಡಿತ ಮಾಡಿಕೊಂಡು ಉಳಿದ ಮೊತ್ತವನ್ನು ಪಾವತಿಸಬೇಕು. ಆನ್​ಲೈನ್/ಚಲನ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಲು ಅ.5ರಿಂದ 8ರವರೆಗೆ ಅವಕಾಶವಿದೆ. ನಂತರ ಅಂತಹವರಿಗೆ ಅ.7ರಿಂದ 14ರವರೆಗೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ವರದಿ ಮಾಡಿಕೊಳ್ಳದಿದ್ದರೆ ಶುಲ್ಕ ಮುಟ್ಟುಗೋಲು: ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದಲ್ಲಿ ಅಭ್ಯರ್ಥಿ ಪಾವತಿಸಿದ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಮಾಪ್ ಅಪ್ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಅಭ್ಯರ್ಥಿಯು ಕಾಲೇಜಿಗೆ ಪ್ರವೇಶ ಪಡೆಯಲು ವಿಫಲವಾದಲ್ಲಿ ಅಥವಾ ರದ್ದುಗೊಳಿಸಲು ಇಚ್ಚಿಸಿದಲ್ಲಿ ಅಥವಾ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದಲ್ಲಿ ಅಭ್ಯರ್ಥಿಯು ಪಾವತಿಸಿದ್ದ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಇಂತಹ ಅಭ್ಯರ್ಥಿಗಳು ನಿಯಮಾನುಸಾರ ದಂಡವನ್ನೂ ಪಾವತಿಸಬೇಕಾಗುತ್ತದೆ ಹಾಗೂ ಭಾರತ ಕೌನ್ಸೆಲಿಂಗ್ ಸೇರಿದಂತೆ ಮುಂದಿನ ವರ್ಷಗಳ ವೈದ್ಯಕೀಯ ಕೌನ್ಸೆಲಿಂಗ್​ನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಎಚ್ಚರಿಸಿದ್ದಾರೆ.

ಇತರೆ ಕೋರ್ಸ್​​ಗಳಿಗೆ ಪಾವತಿಸಿರುವ ಮೊತ್ತವನ್ನು ಪಾವತಿಸಿದ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಎಂದು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ.

ಅರ್ಹತೆ ವಿವರ: ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಯಾವುದೇ ವೈದ್ಯಕೀಯ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಹಾಗೂ ವೈದ್ಯಕೀಯ ಸೀಟು ಹಂಚಿಕೆಯ ನಂತರ ಕಾಷನ್ ಡೆಪಾಸಿಟ್ ಮುಟ್ಟುಗೋಲಿಗೆ ಒಳಪಟ್ಟು, ಸೀಟು ರದ್ದು ಪಡಿಸಿಕೊಂಡಿರುವ ಅಭ್ಯರ್ಥಿಗಳು ಆಸಕ್ತಿ ಇದ್ದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳಿಗೆ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಬಹುದು.

ಕೆಇಎ ಮುಖಾಂತರ ಯುಜಿನೀಟ್ 2024ರ ದಂತ ವೈದ್ಯಕೀಯ ಸೀಟು ಹಂಚಿಕೆಯಾದವರು ವೈದ್ಯಕೀಯ ಸೀಟು ಹಂಚಿಕೆಗಾಗಿ ಮಾತ್ರ ಭಾಗವಹಿಸಬಹುದು. ಆದರೆ, ಈ ಅಭ್ಯರ್ಥಿಗಳು ದಂತ ವೈದ್ಯಕೀಯ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರಾಗುವುದಿಲ್ಲ. ಅದೇ ರೀತಿ ಆಯುಷ್ ಹಂಚಿಕೆಯಾದವರು ವೈದ್ಯಕೀಯ ಸೀಟು ಹಂಚಿಕೆಗಾಗಿ ಮಾತ್ರ ಭಾಗವಹಿಸಬಹುದು. ಆದರೆ, ಈ ಅಭ್ಯರ್ಥಿಗಳಿಗೆ ಆಯುಷ್ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹತೆ ಇರುವುದಿಲ್ಲ.

ಶುಲ್ಕ ಠೇವಣಿ ವಿವರ ಮತ್ತಿತರ ಸೂಚನೆಗಳಿಗೆ ಪ್ರಾಧಿಕಾರದ ವೆಬ್​​ಸೈಟ್ ಅನ್ನು ನಿಯಮಿತವಾಗಿ ಗಮನಿಸುತ್ತಿರಬೇಕು. ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್​​ಗಳಿಗೆ ಮಾಪ್ ಅಪ್ ಸೀಟು ಹಂಚಿಕೆ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಪ್ರಸನ್ನ ತಿಳಿಸಿದ್ದಾರೆ.

ಇದನ್ನೂ ಓದಿ: ನಾಡಿದ್ದು ಪಿಎಸ್ಐ ಪರೀಕ್ಷೆ: 48 ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ - PSI Exam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.