ETV Bharat / entertainment

ದಳಪತಿ ವಿಜಯ್​​ ಸಿನಿಮಾದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ: ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಿಂದ ಹೆಸರು ಘೋಷಣೆ - Pooja Hegde Joins Thalapathy 69 - POOJA HEGDE JOINS THALAPATHY 69

ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಕೆವಿಎನ್​' ನಿರ್ಮಿಸುತ್ತಿರುವ, ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ''ದಳಪತಿ 69''. ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರ ವಹಿಸಲಿದ್ದಾರೆ.

Pooja Hegde Joins Vijay's Thalapathy 69
ದಳಪತಿ ವಿಜಯ್​​ ಸಿನಿಮಾದಲ್ಲಿ ಪೂಜಾ ಹೆಗ್ಡೆ (Photo: Film Poster, ANI)
author img

By ETV Bharat Entertainment Team

Published : Oct 2, 2024, 2:42 PM IST

ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ''ದಳಪತಿ 69''. ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾ ನಟನ ಕೊನೆ ಚಿತ್ರ. ಅಲ್ಲದೇ, ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಹಿನ್ನೆಲೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಚಿತ್ರಕ್ಕೀಗ ಕರುನಾಡಿನ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಎಂಟ್ರಿಯಾಗಿದೆ.

ಚಿತ್ರ ನಿರ್ಮಾಪಕರು ಇಂದು ತಮ್ಮ ತಂಡಕ್ಕೆ ಪೂಜಾ ಹೆಗ್ಡೆ ಅವರ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಬಹುನಿರೀಕ್ಷಿತ ಚಿತ್ರದ ಹಿಂದಿರುವ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ''ಕೆವಿಎನ್ ಪ್ರೊಡಕ್ಷನ್ಸ್‌'' ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡುವ ಮೂಲಕ ಕರಾವಳಿ ಬೆಡಗಿಯ ಎಂಟ್ರಿ ಘೋಷಿಸಿದ್ದಾರೆ.

ಪೂಜಾ ಹೆಗ್ಡೆ ಅವರ ಆಕರ್ಷಕ ಫೋಟೋ ಒಳಗೊಂಡಿರುವ ಈ ಪೋಸ್ಟ್​​ನಲ್ಲಿ, ಬಹುಭಾಷಾ ನಟಿಯನ್ನು ಚಿತ್ರತಂಡಕ್ಕೆ ಸ್ವಾಗತಿಸಲಾಗಿದೆ. ದಳಪತಿ ವಿಜಯ್​​ ಮತ್ತು ಪೂಜಾ ಹೆಗ್ಡೆ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿರುವುದರ ಮಾಹಿತಿ ಕೊಟ್ಟಿದೆ. "ಅದ್ಭುತ ಜೋಡಿಯನ್ನು ಮತ್ತೊಮ್ಮೆ ದೊಡ್ಡ ಪರದೆಗೆ ಹಿಂತಿರುಗಿಸುತ್ತಿದ್ದೇವೆ. ನಿಮಗೆ ಈಗಾಗಲೇ ತಿಳಿದಿದೆ ಎಂಬುದು ನಮಗೆ ತಿಳಿದಿದೆ, ಆದರೆ ಅಧಿಕೃತವಾಗಿ ಈಗ ಅನೌನ್ಸ್​ ಮಾಡುತ್ತಿದ್ದೇವೆ. ವೆಲ್ಕಮ್​ ಆನ್​ಬೋರ್ಡ್ ಪೂಜಾ ಹೆಗ್ಡೆ'' ಎಂದು ಬರೆದುಕೊಂಡಿದೆ.

ಪೂಜಾ ಮತ್ತು ವಿಜಯ್ 2022ರಲ್ಲಿ ಮೂಡಿಬಂದ ಬೀಸ್ಟ್‌ ಚಿತ್ರದಲ್ಲಿ ಮೊದಲ ಬಾರಿ ಒಟ್ಟಿಗೆ ಕೆಲಸ ಮಾಡಿದ್ದರು. ಅವರ ಅಭಿಮಾನಿಗಳೀಗ ಇಬ್ಬರೂ ಮತ್ತೆ ತೆರೆ ಹಂಚಿಕೊಳ್ಳುವುದನ್ನು ನೋಡಲು ಸಖತ್​​ ಥ್ರಿಲ್ ಆಗಿದ್ದಾರೆ. ಈ ವಾರಾಂತ್ಯ ಶೂಟಿಂಗ್​ ಶುರುವಾಗಲಿದೆ. ಚಿತ್ರೀಕರಣಕ್ಕೂ ಮೊದಲು ಕಾಸ್ಟ್ ಹೆಸರುಗಳನ್ನು ಅನೌನ್ಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಿನ್ನೆ ಸಂಜೆಯಿಂದ ಅನೌನ್ಸ್​​ಮೆಂಟ್​ಗಳು ಶುರುವಾಗಲಿದೆ. ಮೊದಲು ಹೆಸರು ಬಾಲಿವುಡ್​ನಿಂದ ಬಂದಿದೆ. ಹೌದು, ಸೂಪರ್​ ಸ್ಟಾರ್​ ಬಾಬಿ ಡಿಯೋಲ್​ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದೀಗ ಬಹುಬೇಡಿಕೆ ನಟಿ ಪೂಜಾ ಹೆಗ್ಡೆ ಅವರ ಹೆಸರು ಘೋಷನೆಯಾಗಿದೆ.

ಇದನ್ನೂ ಓದಿ: ರಜನಿಕಾಂತ್​​ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ: ಸೂಪರ್​ ಸ್ಟಾರ್​​​ ಪತ್ನಿಗೆ ಕರೆ ಮಾಡಿದ ಪಿಎಂ - PM Enquiries Rajinikanth Health

ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳ ಮೂಲಕ ಪೂಜಾ ಹೆಗ್ಡೆ ಹೆಸರುವಾಸಿಯಾಗಿದ್ದಾರೆ. ಬಹುಮುಖ ಪ್ರತಿಭೆಯಾಗಿ ಖ್ಯಾತಿ ಗಳಿಸಿದ್ದಾರೆ. ಅದರಂತರ ಇದೀಗ ದಳಪತಿ 69 ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು, ಸಿನಿಮಾ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ವಿಶೇಷವಾಗಿ ಬೀಸ್ಟ್‌ನಲ್ಲಿ ಜೋಡಿಯ ಕೆಮಿಸ್ಟ್ರಿ ಪ್ರೇಕ್ಷಕರಿಂದ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದು, ದಳಪತಿ 69ರಲ್ಲಿ ಅವರ ಪಾತ್ರ ಹೇಗಿರಬಹುದೆಂಬ ಕುತೂಹಲ ಹೆಚ್ಚುತ್ತಿವೆ.

ಇದನ್ನೂ ಓದಿ: ದಳಪತಿ ವಿಜಯ್​ ಚಿತ್ರದಲ್ಲಿ ಬಾಬಿ ಡಿಯೋಲ್​​: ವದಂತಿ ನಿಜ! ಪೋಸ್ಟರ್ ರಿಲೀಸ್ - Bobby Deol Joins Thalapathy 69

ಹೆಚ್ ವಿನೋತ್ ಆ್ಯಕ್ಷನ್​ ಕಟ್​​ ಹೇಳಲಿರುವ ದಳಪತಿ 69 ಒಂದು ಆ್ಯಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಸಿನಿಮಾ ಆಗಲಿದೆ ಎಂಬ ಭರವಸೆ ಇದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತವಿರಲಿದೆ. ಹಾಗಾಗಿ, ಅಭಿಮಾನಿಗಳು ಟ್ರೆಂಡ್​ ಕ್ರಿಯೇಟ್​ ಮಾಡುವಂತಹ ಅದ್ಭುತ ಮ್ಯೂಸಿಕ್​ ಅನ್ನು ನಿರೀಕ್ಷಿಸಬಹುದಾಗಿದೆ. ವೆಂಕಟ್ ಕೆ ನಾರಾಯನ್​ ನಿರ್ಮಾಣದ ಈ ಚಿತ್ರ ತಮಿಳು ಚಲನಚಿತ್ರೋದ್ಯಮದಲ್ಲಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.