ಕರ್ನಾಟಕ

karnataka

ETV Bharat / entertainment

ಅಬ್ಬಬ್ಬಾ! 5 ಕೋಟಿಗೂ ಹೆಚ್ಚು ವೋಟ್​ ಪಡೆದ ಬಿಗ್​ ಬಾಸ್​ ಕನ್ನಡ ವಿನ್ನರ್ - BIGG BOSS KANNADA 11

ಬಿಗ್​ ಬಾಸ್​ ವಿಜೇತರ ಹೆಸರು ಘೋಷಣೆಗೂ ಮುನ್ನವೇ ಅವರು ಪಡೆದಿರೋ ಮತಗಳ ಸಂಖ್ಯೆ ಬಹಿರಂಗಗೊಂಡಿದೆ. ವಿನ್ನರ್​ ಬರೋಬ್ಬರಿ 5,23,89,318 ಮತಗಳನ್ನು ಪಡೆದುಕೊಂಡಿದ್ದಾರೆ.

bigg boss kannada 11
ಬಿಗ್​ ಬಾಸ್ ಕನ್ನಡ​ ಸೀಸನ್​​ 11ರ ಟ್ರೋಫಿ (Photo: social media)

By ETV Bharat Entertainment Team

Published : Jan 25, 2025, 7:43 PM IST

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಸೀಸನ್​​ 11ರ ಗ್ರ್ಯಾಂಡ್​ ಫಿನಾಲೆ ಪ್ರಸಾರ ಆಗುತ್ತಿದೆ. ಇಂದು ಒಬ್ಬರು ಎಲಿಮಿನೇಟ್​​ ಆಗಲಿದ್ದು, ನಾಳೆ ರಾತ್ರಿ ವಿಜೇತರ ಹೆಸರು ತಿಳಿದು ಬರಲಿದೆ. ಅದಕ್ಕೂ ಮುನ್ನ ವಿಜೇತರು ಪಡೆದ ಮತಗಳು ಬಹಿರಂಗಗೊಂಡಿದೆ.

ಹೌದು, ಬಿಗ್​ ಬಾಸ್​ ಸೀಸನ್​ 11ರ ವಿಜೇತರು ಪಡೆದುಕೊಂಡಿರುವ ಮತಗಳ ಸಂಖ್ಯೆ ಬರೋಬ್ಬರಿ 5,23,89,318. ಈವರೆಗಿನ ಬಿಗ್​ ಬಾಸ್​ನಲ್ಲಿ ವಿಜೇತರು ಗಳಿಸಿದ ಮತಗಳ ಪೈಕಿ ಇದೇ ಹೆಚ್ಚು. ಈ ಅಂಕಿ - ಅಂಶವೇ ಹೇಳುತ್ತಿದೆ ಬಿಗ್​ ಬಾಸ್​​ನ ಜನಪ್ರಿಯತೆಯನ್ನು. ವಿನ್ನರ್​ 5 ಕೋಟಿಗೂ ಹೆಚ್ಚು ವೋಟ್​ ಪಡೆದಿದ್ದಾರೆ ಅನ್ನೋದನ್ನು ಸ್ವತಃ ನಿರೂಪಕ ಸುದೀಪ್​ ಅವರೇ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಯಾರಾಗಲಿದ್ದಾರೆ ಬಿಗ್ ಬಾಸ್​​​ ವಿನ್ನರ್?: ನಿಮ್ಮಿಷ್ಟದ ಸ್ಪರ್ಧಿ ಯಾರು, ಗೆಲುವಿಗೆ ಅವರು ಅರ್ಹರೇ?​

ಸುದೀಪ್​​​ ಗ್ರ್ಯಾಂಡ್​ ಫಿನಾಲೆ ವೇದಿಕೆಯಲ್ಲಿ ಟಾಪ್​ ಕಂಟಸ್ಟೆಂಟ್​ಗೆ ಬಂದಿರೋ ವೋಟ್ಸ್​ 5 ಕೋಟಿ 23 ಲಕ್ಷದ 89 ಸಾವಿರದ 318 ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇಂದು ಎವಿಕ್ಟ್​ ಆಗ್ತಿರೋ ಕಂಟಸ್ಟೆಂಟ್​ಗೆ ಬಂದಿರೋದು 64 ಲಕ್ಷದ 48 ಸಾವಿರದ 853 (64,48,853) ಮತಗಳು. 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದಿರುವ ಬಿಗ್​ ಬಾಸ್​ ಸೀಸನ್​ 11ರ ವಿಜೇತರ ಹೆಸರು ನಾಳೆ ರಾತ್ರಿ ಘೋಷಣೆ ಆಗಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ಬಿಗ್​ ಬಾಸ್ ಕನ್ನಡ ಸೀಸನ್​ 11ರ​ ಫೈನಲಿಸ್ಟ್​​ಗಳಿವರು:

  • ಹನುಮಂತು
  • ತ್ರಿವಿಕ್ರಮ್​
  • ಮೋಕ್ಷಿತಾ
  • ಮಂಜು
  • ಭವ್ಯಾ
  • ರಜತ್ ಕಿಶನ್​​​

ಇದನ್ನೂ ಓದಿ:ಸುದೀಪ್​ ನಿರೂಪಣೆಯ ಕೊನೆ 'ಬಿಗ್​ ಬಾಸ್' ​​​​: ವೇದಿಕೆಗೆ ಕಿಚ್ಚು ಹಚ್ಚಿತು ಕಿಚ್ಚನ​ 'ಮ್ಯಾಕ್ಸಿಮಮ್' ಎಂಟ್ರಿ - ಗೆಲುವು ಯಾರಿಗೆ?

ಇವರ ಪೈಕಿ 5,23,89,318 ಮತಗಳನ್ನು ಪಡೆದಿದ್ದಾದರೂ ಯಾರು, ಟ್ರೋಫಿಯನ್ನು ಯಾರು ಎತ್ತಿ ಹಿಡಿಯಲಿದ್ದಾರೆ ಅನ್ನೋದು ನಾಳೆ ರಾತ್ರಿ ಅಧಿಕೃತವಾಗಿ ಘೋಷಣೆಯಾಗಲಿದೆ. ಬಿಗ್ ಬಾಸ್ ವೋಟಿಂಗ್ ಇತಿಹಾಸ ಸೃಷ್ಟಿಸಿದ್ದು, ಯಾರಿಗೆ ಎಷ್ಟು ವೋಟ್ ಬಂದಿದೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದಲ್ಲೇ ಇದೆ. ಇದು ಬಿಗ್​ ಬಾಸ್​ನ 11ನೇ ಸೀಸನ್​​ ಆಗಿದ್ದು, ಕಳೆದ 10 ಸೀಸನ್​​ಗಳ ವೋಟಿಂಗ್​​ ರೆಕಾರ್ಡ್ ಅನ್ನು ಈ ಸೀಸನ್​ ಬ್ರೇಕ್​ ಮಾಡಿದೆ. ಅಲ್ಲಿಗೆ ಈ ಶೋನ ಪಾಪ್ಯುಲಾರಿಟಿ ಎಷ್ಟಿದೆ ಅನ್ನೋದು ಸ್ಪಷ್ಟವಾಗಿದೆ. ಅಭಿನಯ ಚಕ್ರವರ್ತಿ ಸುದೀಪ್​ ಈ ರಿಯಾಲಿಟಿ ಶೋನ ಹೈಲೆಟ್​ ಅಂದ್ರೆ ಅತಿಶಯೋಕ್ತಿಯಲ್ಲ.

ABOUT THE AUTHOR

...view details