ಕರ್ನಾಟಕ

karnataka

ETV Bharat / entertainment

'ಬಘೀರ' ಕಲೆಕ್ಷನ್​​: ರೋರಿಂಗ್​ ಸ್ಟಾರ್ ಶ್ರೀಮುರುಳಿ​​, ರುಕ್ಮಿಣಿ ವಸಂತ್​​ ಸಿನಿಮಾ ಗಳಿಸಿದ್ದಿಷ್ಟು! - BAGHEERA DAY 1 COLLECTION

ರೋರಿಂಗ್​ ಸ್ಟಾರ್​​ ಶ್ರೀಮುರುಳಿ ಅವರ 'ಬಘೀರ' ಸಿನಿಮಾ ಕಲೆಕ್ಷನ್​​ ಇಲ್ಲಿದೆ.

Sri Murali, Rukmini Vasanth
ಶ್ರೀಮುರುಳಿ ರುಕ್ಮಿಣಿ ವಸಂತ್​​ (ETV Bharat)

By ETV Bharat Entertainment Team

Published : Nov 1, 2024, 1:55 PM IST

2021ರ 'ಮದಗಜ' ಸಿನಿಮಾ ಬಳಿಕ ಬಹುನಿರೀಕ್ಷೆಗಳೊಂದಿಗೆ ಬಂದ ಸ್ಯಾಂಡಲ್​​​​ವುಡ್​ನ ರೋರಿಂಗ್​ ಸ್ಟಾರ್​​ ಶ್ರೀಮುರುಳಿ ಅವರ 'ಬಘೀರ' ಸಿನಿಪ್ರೇಮಿಗಳನ್ನು ಮನರಂಜಿಸುವಲ್ಲಿ ಯಶ ಕಂಡಿದೆ. ಕಳೆದ ದಿನ, ಗುರುವಾರದಂದು ಬಿಡುಗಡೆ ಆದ ಈ ಚಿತ್ರ ಆರಂಭಿಕವಾಗಿ ಬಹುತೇಕ ಉತ್ತಮ ಪ್ರತಿಕ್ರಿಯೆಯನ್ನೇ ಗಳಿಸಿದ್ದು, ಕಲೆಕ್ಷನ್​ ಅಂಕಿ ಅಂಶ ಕೂಡಾ ಉತ್ತಮವಾಗಿದೆ.

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​​ ಸ್ಯಾಕ್ನಿಲ್ಕ್ ವರದಿ ಪ್ರಕಾರ, ರೋರಿಂಗ್​ ಸ್ಟಾರ್​ ಶ್ರೀಮುರುಳಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ಸುಂದರಿ ರುಕ್ಮಿಣಿ ವಸಂತ್​​ ಅಭಿನಯದ ಬಘೀರ 2.8 ಕೋಟಿ ರೂ. ಗಳಿಸುವಲ್ಲಿ (ನೆಟ್​ ಕಲೆಕ್ಷನ್​​) ಯಶಸ್ವಿ ಆಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ತೆರೆಕಂಡಿದ್ದು, ಕನ್ನಡ ಆವೃತ್ತಿಯಲ್ಲಿ 2.3 ಕೋಟಿ ರೂ. ಮತ್ತು ತೆಲುಗು ಆವೃತ್ತಿಯಲ್ಲಿ 0.5 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಇನ್ನೂ ಎರಡನೇ ದಿನ ಅಂದರೆ ಶುಕ್ರವಾರದ ವ್ಯವಹಾರ ಗಮನಿಸಿದರೆ, ಎರಡೂ ಭಾಷೆಯ ಆನ್​ಲೈನ್​​ ವ್ಯವಹಾರದಲ್ಲಿ 0.44 ಕೋಟಿ ರೂ. (ಸದ್ಯದ ಸ್ಯಾಕ್ನಿಲ್ಕ್​​ ಮಾಹಿತಿ) ಕಲೆಕ್ಷನ್​ ಆಗಿದೆ. ಈ ಅಂಕಿ ಅಂಶ ಏರಲಿದೆ. ನಾಳೆ ಮತ್ತು ನಾಡಿದ್ದು ಇನ್ನೂ ಹೆಚ್ಚು ಕಲೆಕ್ಷನ್​ ಆಗುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ಪ್ರೇಕ್ಷಕರ ಸಂಖ್ಯೆ ಏರೋದು ಸಹಜ.

ನಿನ್ನೆ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ ಈ ಸಿನಿಮಾವನ್ನು ನಾಯಕ ನಟ ಶ್ರೀಮುರಳಿ ಕುಟುಂಬ ವೀಕ್ಷಿಸಿ ಸಂಭ್ರಮಿಸಿದೆ. ಅಲ್ಲದೇ ದಿ. ನಟ ಪುನೀತ್ ರಾಜ್​ಕುಮಾರ್ ಅವರ ಎರಡನೇ ಮಗಳು ವಂದಿತಾ ಕೂಡಾ ಚಿತ್ರಮಂದಿರದಲ್ಲಿ ಕಾಣಿಸಿಕೊಂಡರು. ವಂದಿತಾ ಸೇರಿ ಅಲ್ಲಿದ್ದ ಕುಟುಂಬಸ್ಥರನ್ನು ಪ್ರೀತಿಯ ಅಪ್ಪುಗೆ ಮೂಲಕ ಶ್ರೀಮುರುಳಿ ಸ್ವಾಗತಿಸಿದ್ದು, ಸುಂದರ ವಿಡಿಯೋಗಳು ವ್ಯಾಪಕವಾಗಿ ವೈರಲ್​ ಆಗಿವೆ. ಇವರಷ್ಟೇ ಅಲ್ಲದೇ ಖಳನಟ ಗರುಡ ರಾಮ್ ಸೇರಿದಂತೆ ಚಿತ್ರರಂಗದ ಹಲವರು 'ಬಘೀರ'ನನ್ನು ಕಣ್ತುಂಬಿಕೊಂಡು ತಮ್ಮ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:Watch: ಶ್ರೀಮುರಳಿ, ರುಕ್ಮಿಣಿ ವಸಂತ್ ನಟನೆಯ 'ಬಘೀರ' ಬಿಡುಗಡೆ: ಅಭಿಮಾನಿಗಳ ಸಂಭ್ರಮ

ಬಘೀರ ಅಕ್ಟೋಬರ್​​​ 31ರಂದು 250ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ತೆರೆಕಂಡಿದೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರಕ್ಕೆ ನಾಯಕ ನಟ ಗುರುವಾರ ಆಗಮಿಸಿ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಸ್ವೀಕರಿಸಿದ್ದಾರೆ. ಜೊತೆಗೆ ತಮ್ಮ ಹರ್ಷ ಹಂಚಿಕೊಂಡಿದ್ದಾರೆ. ಚಿತ್ರಮಂದಿರಕ್ಕೆ ಬರುವ ಮೊದಲು ಪಕ್ಕದಲ್ಲಿರೋ ಡಾ. ರಾಜ್​​ಕುಮಾರ್ ಪುತ್ಧಳಿಗೆ ಪುಷ್ಪಾರ್ಚನೆ ಮಾಡಿ ನಮಿಸಿ, ಆಶೀರ್ವಾದ ಪಡೆದಿದ್ದರು. ನಂತರ ಅಭಿಮಾನಿಗಳನ್ನು ಮನರಂಜಿಸಿ ಗಮನ ಸೆಳೆದರು.

ಇದನ್ನೂ ಓದಿ:ಪ್ರೇಕ್ಷಕರೊಂದಿಗೆ ಶ್ರೀಮುರಳಿ; 'ಬಘೀರ' ವೀಕ್ಷಿಸಿದ ಪುನೀತ್​ ಪುತ್ರಿ; ಹೀಗಿದೆ ಚಿತ್ರ ವೀಕ್ಷಕರ ಅಭಿಪ್ರಾಯ

'ಬಘೀರ' ಚಿತ್ರದ ಹೈಲೆಟ್​​​ ಪ್ರಶಾಂತ್​ ನೀಲ್​​. ಮಾಡಿದ ಬೆರಳೆಣಿಕೆ ಸಿನಿಮಾಗಳ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಅತ್ಯಂತ ಹೆಸರಾಂತ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಈ ಚಿತ್ರಕ್ಕೆ ಕಥೆ ಕೊಟ್ಟಿದ್ದಾರೆ. ಡಾ.ಸೂರಿ ನಿರ್ದೇಶನದ ಈ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಶ್ರೀಮುರುಳಿ ಮತ್ತು ರುಕ್ಮಿಣಿ ವಸಂತ್​​​ ತೆರೆ ಹಂಚಿಕೊಂಡಿದ್ದಾರೆ. ಸೂರಿ ಆ್ಯಕ್ಷನ್​ ಕಟ್​ ಹೇಳೋ ಜೊತೆಗೆ ಚಿತ್ರಕಥೆ ಮತ್ತು ಡೈಲಾಗ್ಸ್​​ನ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಉಳಿದಂತೆ ಎ.ಜೆ ಶೆಟ್ಟಿ ಅವರ ಛಾಯಾಗ್ರಹಣ, ಚೇತನ್‌ ಡಿಸೋಜಾ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.

ABOUT THE AUTHOR

...view details