ಲಂಡನ್: ಕ್ರಿಸ್ಟೋಫರ್ ನೋಲನ್ ಅವರ ಜೀವನಚರಿತ್ರೆ ಆಧರಿಸಿ ರಚಿತವಾಗಿರುವ ಓಪನ್ಹೈಮರ್ BAFTA ಫಿಲ್ಮ್ 2024ರ ಪ್ರಶಸ್ತಿ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದೆ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಾಯಕ ನಟ ಸೇರಿದಂತೆ ಏಳು ವಿಭಾಗಗಳಲ್ಲಿ ಈ ಸಿನಿಮಾ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಗಮನ ಸೆಳೆದಿದೆ.
BAFTA ಫಿಲ್ಮ್ 2024ರ ಪ್ರಶಸ್ತಿ ಪ್ರದಾನ ಸಮಾರಂಭವು ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆಯಿತು. ಎಮ್ಮಾ ಸ್ಟೋನ್ ಪೂರ್ ಥಿಂಗ್ಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇನ್ನು ಓಪನ್ ಹೈಮರ್ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಸಿಲಿಯನ್ ಮರ್ಪಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ವೇಷಭೂಷಣ, ಮೇಕಪ್ ಮತ್ತು ಕೇಶ ವಿನ್ಯಾಸ, ನಿರ್ಮಾಣ ಮತ್ತು ವಿಶೇಷ ದೃಶ್ಯಗಳ ಎಫೆಕ್ಟ್‌ಗಳಿಗಾಗಿ ಪೂರ್ ಥಿಂಗ್ಸ್ ಐದು BAFTA ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ
ಅತ್ಯುತ್ತಮ ಚಿತ್ರ:- ಓಪನ್ಹೈಮರ್; ಕ್ರಿಸ್ಟೋಫರ್ ನೋಲನ್, ಚಾರ್ಲ್ಸ್ ರೋವೆನ್, ಎಮ್ಮಾ ಥಾಮಸ್
ಶ್ರೇಷ್ಠ ನಟಿ: ಎಮ್ಮಾ ಸ್ಟೋನ್; ಪೂರ್ ಥಿಂಗ್ಸ್
ಅತ್ಯುತ್ತಮ ನಟ: ಸಿಲಿಯನ್ ಮರ್ಫಿ; ಓಪನ್ ಹೈ ಮರ್
ಇಇ ರೈಸಿಂಗ್ ಸ್ಟಾರ್ ಪ್ರಶಸ್ತಿ ; ಮಿಯಾ ಮೆಕೆನ್ನಾ - ಬ್ರೂಸ್
ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್; ಓಪನ್ ಹೈ ಮರ್
ಮೇಕಪ್ ಮತ್ತು ಕೇಶ ವಿನ್ಯಾಸ: ಪೂರ್ ಥಿಂಗ್ಸ್ - ನಾಡಿಯಾ ಸ್ಟೇಸಿ, ಮಾರ್ಕ್ ಕೌಲಿಯರ್, ಜೋಶ್ ವೆಸ್ಟನ್
ವೇಷಭೂಷಣ: ಪೂರ್ ಥಿಂಗ್ಸ್, ಹಾಲಿ ವಾಡಿಂಗ್ಟನ್
ಅತ್ಯುತ್ತಮ ಬ್ರಿಟಿಷ್ ಚಲನಚಿತ್ರ: Crab Day - ಜೊನಾಥನ್ ಗ್ಲೇಜರ್, ಜೇಮ್ಸ್ ವಿಲ್ಸನ್
ಬ್ರಿಟಿಷ್ ಕಿರುಚಿತ್ರ : ಜೆಲ್ಲಿ ಫಿಶ್ ಮತ್ತು ಲ್ಯಾಬ್ಸ್ಟರ್; ಯಾಸ್ಮಿನ್ ಅಫಿಫಿ, ಎಲಿಜಬೆತ್ ರುಫೈ
ಪ್ರೊಡೆಕ್ಷನ್: ಪೂರ್ ಥಿಂಗ್ಸ್;ಶೋನಾ ಹೀತ್, ಜೇಮ್ಸ್ ಪ್ರೈಸ್, Zsuzsa Mihalek