ಕರ್ನಾಟಕ

karnataka

ETV Bharat / entertainment

'ನಾನು ಯಾವಾಗಲು ಅಭಿಮಾನಿಗಳ ಪ್ರೀತಿಯ ಬುಲ್ ಬುಲ್': ಸೆಟ್ಟೇರಿತು ಅಯೋಗ್ಯ-2, ಅಶ್ವಿನಿ ಪುನೀತ್​​ರಾಜ್​ಕುಮಾರ್​ ಸಾಥ್ - AYOGYA 2 MOVIE

ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮುಖ್ಯಭೂಮಿಕೆಯ ಅಯೋಗ್ಯ-2 ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದೆ.

Ayogya 2  Shoot begins
ಸೆಟ್ಟೇರಿತು ಅಯೋಗ್ಯ-2 (Photo: ETV Bharat)

By ETV Bharat Entertainment Team

Published : 6 hours ago

ಸ್ಯಾಂಡಲ್​​​ವುಡ್​ನ‌ ಸೂಪರ್ ಸಕ್ಸಸ್ ಜೋಡಿಗಳಲ್ಲಿ ಒಂದಾಗಿರುವ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮತ್ತೆ ಸಿನಿಪ್ರಿಯರೆದುರು ಬರಲು ಸಜ್ಜಾಗಿದ್ದಾರೆ. ಹೌದು, 'ಅಯೋಗ್ಯ 2' ಸಿನಿಮಾಗಾಗಿ ಈ ಜೋಡಿ ಒಂದಾಗಿದೆ. ಸೂಪರ್ ಹಿಟ್ ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ರಚಿತಾ ಸತೀಶ್​​ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳನ್ನು ಮನರಂಜಿಸಲು ರೆಡಿಯಾಗಿದ್ದಾರೆ.

ಅಯೋಗ್ಯ-2 ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಅಯೋಗ್ಯ-2 ಚೀತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಮಹೇಶ್ ಕುಮಾರ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಮುನೇಗೌಡ ತಮ್ಮ ಎಸ್.ವಿ.ಸಿ ಪ್ರೊಡಕ್ಷನ್​ನಡಿ ಬಂಡವಾಳ ಹೂಡಿದ್ದಾರೆ.

ಅಯೋಗ್ಯ-2 ತಾರೆಯರು (Photo: ETV Bharat)

ಅಶ್ವಿನಿ ಪುನೀತ್​ರಾಜ್​ಕುಮಾರ್​ ಸಾಥ್: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಅವರು ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಸಾಥ್​​ ನೀಡಿದರು. ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು. ಮುಹೂರ್ತ ಸಮಾರಂಭದಲ್ಲಿ ಇಡೀ ಚಿತ್ರತಂಡದ ಜೊತೆಗೆ ನೆನಪಿರಲಿ ಪ್ರೇಮ್, ನಟ ಶ್ರೇಯರ್ ಮಂಜು, ಪ್ರಮೋದ್ ಸೇರಿ ಅನೇಕ ಕಲಾವಿದರು ಹಾಜರಿದ್ದು, ತಂಡಕ್ಕೆ ಶುಭ ಕೋರಿದರು.

ತಮಿಳು, ತೆಲುಗಿನಲ್ಲೂ ಬರಲಿದೆ ಅಯೋಗ್ಯ 2: ಪೂಜೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್, "ಅಯೋಗ್ಯ -2 ಚಿತ್ರವನ್ನು ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ ಮಾಡುತ್ತಿದ್ದೇವೆ. ರಚಿತಾ ಮತ್ತು ಸತೀಶ್ ಅವರನ್ನು ತೆರೆಮೇಲೆ ನೋಡೋಕೆ ತುಂಬಾ ಖುಷಿ ಆಗುತ್ತದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಬದಲಾಗಿ ಫ್ಯಾನ್ ಇಂಡಿಯಾ ಸಿನಿಮಾ. ಮೊದಲ ಭಾಗ ಹಿಟ್ ಆದ ಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ವಿ. ಆದರೀಗ ತಮಿಳು ಹಾಗೂ ತೆಲುಗಿನಲ್ಲಿ ನಿರ್ಮಿಸುತ್ತಿದ್ದೇವೆ" ಎಂದು ಹೇಳಿದರು.

ಅಯೋಗ್ಯ-2 ಮುಹೂರ್ತ ಸಮಾರಂಭ (Photo: ETV Bharat)

ನಾಯಕ ಸತೀಶ್ ನೀನಾಸಂ ಮಾತನಾಡಿ, "ಅಯೋಗ್ಯ -2 ಸಿನಿಮಾಗೆ ನಿರ್ಮಾಪಕರ ದೊಡ್ಡ ಲಿಸ್ಟ್ ಇತ್ತು. ಅದರೆ ಕೊನೆಯದಾಗಿ ಮುನೇಗೌಡ ಅವರು ಫೈನಲ್ ಆಗಿದ್ದಾರೆ. ಅವರೋರ್ವ ಉತ್ತಮ ನಿರ್ಮಾಪಕ. ಅಯೋಗ್ಯ -2 ಕನ್ನಡ ಚಿತ್ರರಂಗಕ್ಕೆ ದೊಡ್ಡ ಸಿನಿಮಾವಾಗಲಿದೆ" ಎಂದು ಹೇಳಿದರು.

'ನಾನು ಸತೀಶ್ ಟಾಮ್ ಆ್ಯಂಡ್ ಜೆರ್ರಿ': ನಟಿ ರಚಿತಾ ರಾಮ್ ಮಾತನಾಡಿ, "ಕಳೆದ 6 ವರ್ಷಗಳ ಹಿಂದೆ ಅಯೋಗ್ಯ ಸಿನಿಮಾ ಇದೇ ಜಾಗದಲ್ಲಿ ಮುಹೂರ್ತ ನೆರವೇರಿಸಿಕೊಂಡಿತ್ತು. ಸದ್ಯ ತುಂಬಾ ಖುಷಿ ಆಗುತ್ತಿದೆ. ಅಶ್ವಿನಿ ಮೇಡಮ್ ಅವರ ಆಶೀರ್ವಾದವಿದೆ. ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಯೋಗ್ಯ-2 ಮಾಡಬೇಕು ಅಂದಾಗ ಮೊದಲು ತಲೆಗೆ ಬಂದಿದ್ದು ಏನಮ್ಮಿ ಏನಮ್ಮಿ...ಹಾಡಿಗೆ ರಿಪ್ಲೇಸ್ ಯಾವುದೆಂಬುದು. ಆದರೆ ಆ ಹಾಡಿಗೆ ಯಾವುದೇ ರೀಪ್ಲೇಸ್ ಇಲ್ಲ. ನಾನು ಸತೀಶ್ ಟಾಮ್ ಅಂಡ್ ಜೆರ್ರಿ ಹಾಗೆ ಕಿತ್ತಾಡುತ್ತಿರುತ್ತೇವೆ" ಎಂದು ಹೇಳಿದರು.

ಅಯೋಗ್ಯ-2 ಚಿತ್ರತಂಡ (Photo: ETV Bharat)

ನಾನು ಅಭಿಮಾನಿಗಳ ಪ್ರೀತಿಯ ಬುಲ್ ಬುಲ್: "ಈ ಸಿನಿಮಾದಲ್ಲಿ ರಚಿತಾ ಅವರಿಗೆ ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ರಚಿತಾ ನಾನು ಯಾವಾಗಲು ಅಭಿಮಾನಿಗಳ ಪ್ರೀತಿಯ ಬುಲ್ ಬುಲ್ ಆಗಿಯೇ ಇರುತ್ತೇನೆ" ಎಂದರು.

ಇದನ್ನೂ ಓದಿ:15 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ: ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ ನಟಿ ಕೀರ್ತಿ ಸುರೇಶ್

ನಿರ್ಮಾಪಕ ಎಂ.ಮುನೇಗೌಡ ಮಾತನಾಡಿ, "ಕನ್ನಡ ಚಿತ್ರರಂಗಕ್ಕೆ ಉತ್ತಮ ಸಿನಿಮಾವಾಗಲಿದೆ. ಮಹೇಶ್ ಬಂದು ಅಯೋಗ್ಯ-2 ಮಾಡಬೇಕು ಅಂದಾಗ ಹಿಂದೆ ಮುಂದೆ ನೋಡದೇ ಒಪ್ಪಿಕೊಂಡೆ. ಅಯೋಗ್ಯ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ರಚಿತಾ ಮೇಡಮ್ ಕೂಡಾ ಸಿನಿಮಾ ಮಾಡಿ" ಎಂದರು.

ಆರು ವರ್ಷಗಳ ಹಿಂದೆ ಬಂದಿದ್ದ ಸಿದ್ದೇಗೌಡ ಹಾಗೂ ನಂದಿನಿ ಲವ್ ಸ್ಟೋರಿಗೆ ಕನ್ನಡ‌ ಸಿನಿ ಪ್ರೇಮಿಗಳು ಫಿದಾ ಆಗಿದ್ದರು. ಇದೀಗ ಮತ್ತದೇ ತಂಡ 'ಅಯೋಗ್ಯ 2' ಮಾಡುವ ಮೂಲಕ‌ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:'ನಾನು ಉಪೇಂದ್ರರ ದೊಡ್ಡ ಅಭಿಮಾನಿ': ಬಾಲಿವುಡ್​ ಮಿಸ್ಟರ್​ ಪರ್ಫೆಕ್ಷನಿಸ್ಟ್ ಅಮೀರ್​ ಖಾನ್​​

ಅಯೋಗ್ಯ-2ನಲ್ಲಿ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಮೊದಲ ಭಾಗದಲ್ಲಿ ಇದ್ದವರೇ. ಹಿರಿಯ ನಟ ಸುಂದರ್ ರಾಜ್, ತಬಲ ನಾಣಿ, ಶಿವರಾಜ್ ಕೆ.ಆರ್.ಪೇಟೆ ಪಾರ್ಟ್-2ನಲ್ಲೂ ಇದ್ದಾರೆ. ಈ ಬಾರಿ ಮಂಜು ಪಾವಗಡ ಕೂಡಾ ಅಯೋಗ್ಯ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಇನ್ನೂ ಮಾಸ್ತಿ ಅವರ ಸಂಭಾಷಣೆ, ವಿಶ್ವಜಿತ್ ರಾವ್ ಕ್ಯಾಮರಾ ವರ್ಕ್​, ಅರ್ಜುನ್ ಜನ್ಯ ಅವರ ಸಂಗೀತ ಸಿನಿಮಾಗಿರಲಿದೆ. ಅಯೋಗ್ಯ ಸಿನಿಮಾದ ಹಾಡುಗಳು ಕನ್ನಡ ಸಿನಿಮಾರಂಗದಲ್ಲಿಯೇ ಹೊಸ ಇತಿಹಾಸ ಬರೆದಿತ್ತು. ಈಗ ಮತ್ತಷ್ಟು ಕುತೂಹಲ ಹಾಗೂ ನಿರೀಕ್ಷೆಗಳೊಂದಿಗೆ ಅಯೋಗ್ಯ-2 ಸೆಟ್ಟೇರಿದೆ. ಮಂಡ್ಯದಲ್ಲಿ ಚಿತ್ರೀಕರಣ ಶುರುವಾಗಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

ABOUT THE AUTHOR

...view details