ಕರ್ನಾಟಕ

karnataka

ETV Bharat / entertainment

ಆಟೋ ಚಾಲಕರಿಂದ ಅನೌನ್ಸ್ ಆಯ್ತು ವಿನಯ್ ರಾಜ್​​ಕುಮಾರ್ 'ಪೆಪೆ' ರಿಲೀಸ್​​ ಡೇಟ್ - PEPE Release Date - PEPE RELEASE DATE

ಭರವಸೆಯ ನಟ ವಿನಯ್ ರಾಜ್​​ಕುಮಾರ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಪೆಪೆ'. ಇಂದು ಆಟೋ ಚಾಲಕರಿಂದ 'ಪೆಪೆ' ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದೆ.

Auto drivers announces Pepe release date
ಆಟೋ ಚಾಲಕರೊಂದಿಗೆ ವಿನಯ್​​ ರಾಜ್​ಕುಮಾರ್ (ETV Bharat)

By ETV Bharat Entertainment Team

Published : Aug 14, 2024, 7:39 PM IST

'ಪೆಪೆ' ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ದೊಡ್ಮನೆ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರು ವಿಶೇಷ ಗಮನವಿಟ್ಟಿರುವ ಚಿತ್ರ. ಒಂದು ಸರಳ ಪ್ರೇಮ ಕಥೆ ಸಿನಿಮಾ ಸೂಪರ್ ಹಿಟ್ ಆದ ನಂತರ ಕನ್ನಡದ ಭರವಸೆಯ ನಟ ವಿನಯ್ ರಾಜ್​​ಕುಮಾರ್ ಅಭಿನಯಿಸುತ್ತಿರುವ ಚಿತ್ರವಿದು. ತಮ್ಮದೇ ಆದ ಜನಪ್ರಿಯತೆ ಹೊಂದಿರುವ ವಿನಯ್​ ಮುಖ್ಯಭೂಮಿಕೆಯ ಈ ಸಿನಿಮಾ ಸುತ್ತ ಸಾಕಷ್ಟು ಕುತೂಹಲವಿದೆ. ಈಗಾಗಲೇ ಅನಾವರಣಗೊಂಡಿರುವ ಪೆಪೆ ಟೀಸರ್​​, ಪೋಸ್ಟರ್ಸ್​ ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಹೀಗಾಗಿ ಸಿನಿಮಾ ಬಿಡುಗಡೆ ಯಾವಾಗ ಎಂದು ಅಪಾರ ಸಂಖ್ಯೆಯ ಪ್ರೇಕ್ಷಕರು ಕಾತರರಾಗಿದ್ದರು.

ಆಟೋ ಚಾಲಕರಿಂದ 'ಪೆಪೆ' ಚಿತ್ರದ ರಿಲೀಸ್​​ ಡೇಟ್ ಅನೌನ್ಸ್ (ETV Bharat)

ಪೆಪೆಬಿಡುಗಡೆಗೆ ಮುಹೂರ್ತ ಫಿಕ್ಸ್: ಅಭಿಮಾನಿಗಳ ಕಾಯುವಿಕೆಗೆ ತೆರೆ ಬಿದ್ದಿದೆ. ಅಂತೂ ಇಂತು ಸಿನಿಮಾದ ಅಫೀಶೀಯಲ್​​ ರಿಲೀಸ್​​ ಡೇಟ್​​ ಅನ್ನು ಅನೌನ್ಸ್ ಮಾಡಲಾಗಿದೆ. 'ಪೆಪೆ' ಪ್ರೇಕ್ಷಕ ಮಹಾಪ್ರಭುಗಳ ಮುಂದೆ ಬಂದು ತನ್ನ ಗತ್ತು ಗಮ್ಮತ್ತು ತೋರಿಸಲು ದಿನ ನಿಗದಿಯಾಗಿದೆ.

ಆಟೋ ಚಾಲಕರಿಂದ 'ಪೆಪೆ' ರಿಲೀಸ್​​ ಡೇಟ್ ಅನೌನ್ಸ್ (ETV Bharat)

ಆಟೋ ಚಾಲಕರಿಂದ 'ಪೆಪೆ' ರಿಲೀಸ್​​ ಡೇಟ್ ಅನೌನ್ಸ್:ವಿಶೇಷವೆಂದ್ರೆ 'ಪೆಪೆ' ಸಿನಿಮಾದ ರಿಲೀಸ್ ಡೇಟ್ ಅನ್ನು ಅಭಿಮಾನಿ ದೇವರುಗಳು ಅದ್ರಲ್ಲೂ ಕನ್ನಡ ಸಿನಿಮಾವನ್ನು ಹೊತ್ತು ಮೆರೆಸುವ ಆಟೋ ಸಾರಥಿಗಳಿಂದ 'ಪೆಪೆ' ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಈ ತಿಂಗಳ ಕೊನೆ ಶುಕ್ರವಾರ ಅಂದರೆ ಆಗಸ್ಟ್ 30ರಂದು ರಾಜ್ಯಾದ್ಯಂತ ಪೆಪೆ ಸಿನಿಮಾ ಬಿಡುಗಡೆ ಆಗಿದೆ.

ಇಂದು ಸಂಜೆ ಸದಾಶಿವ ನಗರದ ಗ್ರೌಂಡ್​ನಲ್ಲಿ 'ಪೆಪೆ' ಸಿನಿಮಾದ ಪೋಸ್ಟರ್​ ಅನ್ನು ಆಟೋ ಮೇಲೆ ಅಂಟಿಸಿ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಯ್ತು. ಅಭಿಮಾನಿ ಆಟೋ ಡ್ರೈವರ್​ಗಳು ಭವರವಸೆಯ ನಾಯಕ ನಟ ವಿನಯ್ ರಾಜ್​​ಕುಮಾರ್ ಸಮುಖದಲ್ಲಿ ಪೆಪೆ ರಿಲೀಸ್ ಡೇಟ್​ ಬಹಿರಂಗಪಡಿಸಿದರು.

ಆಟೋ ಚಾಲಕರೊಂದಿಗೆ ವಿನಯ್​​ ರಾಜ್​ಕುಮಾರ್ (ETV Bharat)

ಇದನ್ನೂ ಓದಿ:ನಾಳೆ 'ಗೌರಿ' ತೆರೆಗೆ: ಚಿತ್ರರಂಗಕ್ಕೆ ಮಗನ ಪರಿಚಯಿಸಲು ರೆಡಿಯಾದ ಇಂದ್ರಜಿತ್​ ಲಂಕೇಶ್ - Gowri

ಸಿದ್ಧಾರ್ಥನಾಗಿ ಸ್ಯಾಂಡಲ್​​​​​​ವುಡ್​​ ಸೀಮೆಗೆ ಬಲಗಾಲಿಟ್ಟ ದೊಡ್ಮನೆಯ ಮೂರನೇ ತಲೆಮಾರಿನ ಭರವಸೆಯ ನಟ ವಿನಯ್ ರಾಜ್​​ಕುಮಾರ್ ಅವರೀಗ ಮೆಗಾ ಮಾಸ್ ಹೀರೋ ಆಗೋ ಸೂಚನೆ ಕೊಡ್ತಿದ್ದಾರೆ. ತಮ್ಮ ದೊಡ್ಡಪ್ಪ, ಚಿಕ್ಕಪ್ಪನ ರೀತಿ ಕ್ಲಾಸ್​ಗೂ ಸೈ ಮಾಸ್​ಗೂ ಜೈ ಅಂತಿದ್ದಾರೆ. ಒಂದು ಸರಳ ಪ್ರೇಮ ಕಥೆ ಸಿನಿಮಾ ಮೂಲಕ ತಾನೆಂಥಾ ಕ್ಲಾಸ್ ಹೀರೋ ಅನ್ನೋದನ್ನು ಚೆಂದವಾಗಿ ಚಂದನವನದ ಅಭಿಮಾನಿ ದೇವರುಗಳಿಗೆ ತೋರಿಸಿದ ವಿನಯ್ ಈ ಬಾರಿ ಮಾಸ್ ಅವತಾರ ತಾಳಿದ್ದಾರೆ. ಪೆಪೆ ಚಿತ್ರದ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲಿದ್ದಾರೆ.

ಆಟೋ ಚಾಲಕರಿಂದ 'ಪೆಪೆ' ರಿಲೀಸ್​​ ಡೇಟ್ ಅನೌನ್ಸ್ (ETV Bharat)

ಇದನ್ನೂ ಓದಿ:ಅಂದು 'ಮುಂಗಾರು ಮಳೆ' ಇಂದು 'ಕೃಷ್ಣಂ ಪ್ರಣಯ ಸಖಿ': ಬಾಕ್ಸ್ ಆಫೀಸ್‌ನಲ್ಲಿ 'ಗಣಿ'ಗಾರಿಕೆಗೆ ರೆಡಿ - Krishnam Pranaya Sakhi

ಯುವ ನಿರ್ದೇಶಕ ಶ್ರೀಲೇಶ್ ಎಸ್.ನಾಯರ್ ಕಲ್ಪನೆಯಲ್ಲಿ ಈ ಚಿತ್ರ ಮೂಡಿಬಂದಿದೆ. ಉದಯ್ ಶಂಕರ್ ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ಪೆಪೆ ಅದ್ಧೂರಿಯಾಗಿ ನಿರ್ಮಾಣ ಆಗಿದೆ. ಕ್ಲಾಸ್ ಸಿನಿಮಾಗಳಿಗೆ ಮ್ಯೂಸಿಕ್ ಕೊಟ್ಟು ಹೆಸರು ಮಾಡಿರುವ ಪೂರ್ಣ ಚಂದ್ರ ತೇಜಸ್ವಿ ಈ ಬಾರಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗೆ ಮ್ಯೂಸಿಕ್ ಮಾಡಿರೋದು ವಿಶೇಷ. ಈ ತಿಂಗಳಾಂತ್ಯ ಸಿನಿಮಾ ಬಿಡುಗಡೆ ಆಗಲಿದ್ದು, ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ABOUT THE AUTHOR

...view details