ETV Bharat / health

ಆಸ್ಟಿಯೊಪೊರೋಸಿಸ್ ಸಮಸ್ಯೆ ತಡೆಯಲು ಈ ಆಹಾರಗಳಿಂದ ದೂರವಿರೋದು ಒಳ್ಳೆಯದು: ವೈದ್ಯರ ಸಲಹೆ - OSTEOPOROSIS INCREASING FOODS

Avoid These Foods to Reduce Osteoporosis: ಆಸ್ಟಿಯೊಪೊರೋಸಿಸ್ ಸಮಸ್ಯೆಯಿಂದ ಮೂಳೆಗಳು ಸುಲಭವಾಗಿ ಒಡೆದುಹೋಗುತ್ತವೆ, ಬೇಗನೆ ಮೂಳೆ ಮುರಿತವಾಗುತ್ತದೆ. ಹೀಗಾಗಿ ಈ ಆಹಾರಗಳಿಂದ ದೂರವಿರುವುದು ಉತ್ತಮ ಎಂದು ತಜ್ಞರು ತಿಳಿಸುತ್ತಾರೆ.

FOODS TO REDUCE OSTEOPOROSIS  HOW TO PREVENT OSTEOPOROSIS  OSTEOPOROSIS INCREASING FOODS  WHICH FOODS INCREASING OSTEOPOROSIS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : 11 hours ago

Updated : 10 hours ago

Avoid These Foods to Reduce Osteoporosis: ನಮ್ಮ ಮೂಳೆಗಳು ಆರೋಗ್ಯಕರ ಮತ್ತು ಬಲವಾಗಿದ್ದರೆ ಮಾತ್ರ ನಮ್ಮ ದೇಹವು ಸದೃಢವಾಗಿರುತ್ತದೆ. ಮೂಳೆಗಳು ದುರ್ಬಲಗೊಂಡರೆ, ಸಣ್ಣಪುಟ್ಟ ಆಘಾತಗಳು ನಡೆದರೆ ಮತ್ತು ಹೊಡೆತಗಳು ಬಿದ್ದರೆ ಸಾಕು, ಮೂಳೆಗಳು ಮುರಿಯುತ್ತವೆ. ನೀವು ಆಸ್ಟಿಯೊಪೊರೋಸಿಸ್​ ಸಮಸ್ಯೆಯಿಂದ ಬಳಲುತ್ತಿದ್ದರೆ, ಮೂಳೆಗಳು ಮೃದುವಾಗುತ್ತವೆ ಮತ್ತು ಬೇಗನೆ ಮುರಿಯುತ್ತವೆ.

ವಯಸ್ಸಾದವರಲ್ಲಿ ಮತ್ತು ಋತುಬಂಧ ದಾಟಿದ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ, ಈ ಜನರು ಮಾತ್ರವಲ್ಲದೆ, ನಮ್ಮ ದೈನಂದಿನ ಜೀವನದಲ್ಲಿ ಕೆಲವು ಆಹಾರಗಳನ್ನು ಸೇವಿಸುವವರೂ ಸಹ ಚಿಕ್ಕ ವಯಸ್ಸಿನಲ್ಲಿಯೇ ಆಸ್ಟಿಯೊಪೊರೋಸಿಸ್ ಸಮಸ್ಯೆಗೆ ತುತ್ತಾಗುವ ಸಾಧ್ಯತೆಯಿರುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಆಸ್ಟಿಯೊಪೊರೋಸಿಸ್ ಸಮಸ್ಯೆ ಕಡಿಮೆ ಮಾಡಲು ಈ ಆಹಾರಗಳನ್ನು ಸೇವಿಸಬಾರದು ಎಂಬುದರ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ ನೋಡಿ.

FOODS TO REDUCE OSTEOPOROSIS  HOW TO PREVENT OSTEOPOROSIS  OSTEOPOROSIS INCREASING FOODS  WHICH FOODS INCREASING OSTEOPOROSIS
ಉಪ್ಪು (pexels)

ಉಪ್ಪು: ನಾವು ತಿನ್ನುವ ಯಾವುದೇ ಆಹಾರಕ್ಕೆ ರುಚಿ ಹೆಚ್ಚಿಸಲು ಉಪ್ಪ ಸೇರಿಸುತ್ತೇವೆ. ಸಾಕಷ್ಟು ಉಪ್ಪು ಇದ್ದರೆ ಪರವಾಗಿಲ್ಲ. ಆದರೆ, ಹೆಚ್ಚು ಉಪ್ಪು ವಿಷಕಾರಿಯಾಗಬಹುದು. ಹೆಚ್ಚು ಉಪ್ಪು ಸೇವಿಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗಿ ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಇದರಲ್ಲಿರುವ ಸೋಡಿಯಂ ಮೂಳೆಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಅವು ಸುಲಭವಾಗಿ ಒಡೆದು ಹೋಗುತ್ತವೆ ಮತ್ತು ಬೇಗನೇ ಮುರಿಯುವ ಸಾಧ್ಯತೆಯು ಹೆಚ್ಚು ಇರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ತಂಪು ಪಾನೀಯಗಳು (FREEPIK)

ಪಾನೀಯಗಳು: ಸೋಡಾ ಸೇರಿದಂತೆ ವಿವಿಧ ತಂಪು ಪಾನೀಯಗಳನ್ನು ಹೆಚ್ಚು ಸೇವಿಸುವುದರಿಂದ ಮೂಳೆಗಳು ಬೇಗನೆ ಮುರಿಯಬಹುದು. ಇದರಲ್ಲಿರುವ ರಂಜಕವು ದೇಹದ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮೂಳೆಗಳು ಬೇಗನೆ ಮುರಿಯುವ ಅಪಾಯವಿದೆ. ಸಕ್ಕರೆ ಅಂಶ ಹೆಚ್ಚಿರುವ ಸಿಹಿತಿಂಡಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಹೆಚ್ಚು ಸಕ್ಕರೆ ತಿನ್ನುವುದರಿಂದ ಮೂಳೆಗಳಲ್ಲಿನ ಕ್ಯಾಲ್ಸಿಯಂ ಕಡಿಮೆಯಾಗಿ ಅವು ದುರ್ಬಲಗೊಳ್ಳುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

ಕಾಫಿ (pexels)

ಕೆಫೀನ್: ಕಾಫಿ ಹಾಗೂ ಟೀ ಸೇರಿದಂತೆ ಕೆಲವು ಪಾನೀಯಗಳಲ್ಲಿ ಕೆಫೀನ್ ಅಧಿಕವಾಗಿರುತ್ತದೆ. ಇದು ಮೂಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಫೀನ್ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ಕಾಫಿ ಮತ್ತು ಚಹಾದಿಂದ ದೂರವಿರಲು ತಜ್ಞರು ಸೂಚನೆ ನೀಡುತ್ತಾರೆ. ಜೊತೆಗೆ ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಬರ್ಗರ್‌ಗಳು, ಪಿಜ್ಜಾ ಸೇರಿದಂತೆ ಇತರ ಫಾಸ್ಟ್ ಫುಡ್‌ಗಳ ಅತಿಯಾದ ಸೇವನೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಸುಲಭವಾಗಿ ಮೂಳೆ ಮುರಿತಕ್ಕೆ ಕಾರಣವಾಗಬಹುದು.

ಧೂಮಪಾನ (pexels)

ಮದ್ಯಪಾನ ಮತ್ತು ಧೂಮಪಾನ: ಆರೋಗ್ಯಕರ ಮೂಳೆಗಳಿಗೆ ಕ್ಯಾಲ್ಸಿಯಂ ಮುಖ್ಯವಾಗಿದೆ. ಮದ್ಯಪಾನ ಮಾಡುವುದರಿಂದ ನಮ್ಮ ದೇಹದ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ ಹಾಗೂ ಮುರಿತದ ಅಪಾಯ ಹೆಚ್ಚಾಗುತ್ತದೆ. ಧೂಮಪಾನವನ್ನು ಸಹ ತಪ್ಪಿಸಬೇಕು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್​ನ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್​ನಲ್ಲಿ ಪ್ರಕಟಿಸಲಾಗಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಸಾಂದರ್ಭಿಕ ಚಿತ್ರ (Getty Images)

ಆಸ್ಟಿಯೊಪೊರೋಸಿಸ್ ತಡೆಗಟ್ಟುವ ಆಹಾರಗಳು ಇಲ್ಲಿವೆ ನೋಡಿ: ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಮುಖ್ಯವಾಗಿ ಡೈರಿ ಉತ್ಪನ್ನಗಳು, ಹಸಿರು ಸೊಪ್ಪು, ತರಕಾರಿಗಳು, ಬಲವರ್ಧಿತ ಆಹಾರಗಳು ಹಾಗೂ ವಿವಿಧ ಧಾನ್ಯಗಳು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕಾಗುತ್ತದೆ. ಸೂರ್ಯನ ಬೆಳಕಿನಿಂದ ಪಡೆಯುವ ವಿಟಮಿನ್ ಡಿ ತುಂಬಾ ಮುಖ್ಯವಾಗಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಬಲವರ್ಧಿತ ಆಹಾರಗಳಿವು:

  • ಕ್ಯಾಲ್ಸಿಯಂ, ವಿಟಮಿನ್ ಡಿ ಇರುವ ಹಾಲಿನ ಉತ್ಪನ್ನಗಳು
  • ಗೋಧಿ ಹಿಟ್ಟು, ಅಕ್ಕಿ, ಜೋಳ
  • ಮೊಳಕೆ ಕಾಳುಗಳು
  • ವಿವಿಧ ಧಾನ್ಯಗಳು
  • ಸಸ್ಯಜನ್ಯ ಎಣ್ಣೆಗಳು
  • ಬಾದಾಮಿ ಹಾಲು
  • ಎಗ್
  • ಹಣ್ಣಿನ ರಸ
  • ಸುವಾಸನೆಯಿಲ್ಲದ ಮೊಸರು

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು

https://www.nhs.uk/conditions/osteoporosis/causes/

https://pmc.ncbi.nlm.nih.gov/articles/PMC7400143/

https://www.betterhealth.vic.gov.au/health/conditionsandtreatments/menopause-and-osteoporosis

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ವಯಸ್ಸಿಗೆ ತಕ್ಕಂತೆ ಹೇಗೆ, ಎಷ್ಟು ವ್ಯಾಯಾಮ ಮಾಡಬೇಕು? ಇದರಿಂದ ಮೂಳೆ ಆರೋಗ್ಯ ಹೇಗೆ ಸುಧಾರಿಸುತ್ತೆ? - Exercise According To Age

Last Updated : 10 hours ago
ETV Bharat Logo

Copyright © 2025 Ushodaya Enterprises Pvt. Ltd., All Rights Reserved.