'ಬಿಗ್ ಬಾಸ್ ಕನ್ನಡ ಸೀಸನ್ 11' ಏಳನೇ ವಾರದಲ್ಲಿದ್ದು, ತನ್ನ ಆಟ ಮುಂದುವರೆಸಿದೆ. ಕಳೆದ ವಾರ ಯಾರೂ ಮನೆಯಿಂದ ಹೊರನಡೆದಿಲ್ಲ. ಈ ವಾರದ ಎಲಿಮಿನೇಷನ್ಗೆ ನಾಮಿನೇಷನ್ ಪ್ರೊಸೆಸ್ ಶುರುವಾಗಿದೆ. ಆದ್ರೆ ಈ 'ನೇರ ನಾಮಿನೇಷನ್' ಬೆಸ್ಟ್ ಫ್ರೆಂಡ್ಸ್ ಧರ್ಮ- ಅನುಷಾ ನಡುವೆ ಬಿರುಕು ಮೂಡಿಸುವಂತೆ ತೋರುತ್ತಿದೆ.
ಆರನೇ ವಾರಾಂತ್ಯ ಅಂದರೆ ಕಳೆದ ಭಾನುವಾರ (ನವೆಂಬರ್ 10) ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಸಹ ಸ್ಪರ್ಧಿಗಳೂ ಸೇರಿದಂತೆ ವೀಕ್ಷಕರಲ್ಲಿತ್ತು. ಆದ್ರೆ 6ನೇ ವೀಕೆಂಡ್ನಲ್ಲಿ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಭವ್ಯಾ ಅವರ ಹೆಸರನ್ನು ತೆಗೆದುಕೊಳ್ಳಲಾಗಿತ್ತು. ಇನ್ನೇನು ಮನೆಯಿಂದ ಹೊರ ಹೋಗೇ ಬಿಟ್ರು ಅಂತಾ ಸಹ ಸ್ಪರ್ಧಿಗಳೂ ಸೇರಿದಂತೆ ಪ್ರೇಕ್ಷಕರು ಭಾವಿಸಿದ್ದರು. ಆದ್ರೆ ವಾರಾಂತ್ಯದ ಸಂಚಿಕೆಯ ಕೊನೆಯಲ್ಲಿ ನಡೆದಿದ್ದು ಮಾತ್ರ ಬಿಗ್ ಟ್ವಿಸ್ಟ್ ಅಂತಲೇ ಹೇಳಬಹುದು. ಎಲಿಮಿನೇಷನ್ನಿಂದ ಭವ್ಯಾ ಬಚಾವ್ ಆಗಿದ್ದಾರೆ. ಅಲ್ಲಿಗೆ ಕಳೆದ ವಾರ ಯಾರೂ ಮನೆಯಿಂದ ಹೊರನಡೆದಿಲ್ಲ.
ಈ ವಾರದ ಎಲಿಮಿನೇಷನ್ಗೆ ನಾಮಿನೇಷನ್ ಪ್ರೊಸೆಸ್ ಶುರುವಾಗಿದೆ. ನಾಮಿನೇಷನ್ ಬಗ್ಗೆ ಈ ಮನೆಯಲ್ಲಿ ಸ್ಪರ್ಧಿಗಳು ಪರಸ್ಪರ ಚರ್ಚೆ ನಡೆಸುವಂತಿಲ್ಲ, ಅಥವಾ ಸುಳಿವನ್ನೂ ಬಿಟ್ಟುಕೊಡುವಂತಿಲ್ಲ. ಈ ನಿರ್ಧಾರ ಸಂಪೂರ್ಣ ವೈಯಕ್ತಿಕ ಮತ್ತು ನೇರವಾಗಿರಬೇಕು. ಮನೆಯೊಳಗಿನ ಖಡ್ಡಾಯ ನಿಯಮಗಳಲ್ಲಿ ಇದು ಪ್ರಮುಖವಾದದ್ದು. ಆದ್ರೆ ಈ ಬಾರಿ ಮಹತ್ವದ ನಿಯಮವನ್ನು ಉಲ್ಲಂಘಿಸಲಾಗಿದೆ. ತಪ್ಪಿಗೆ ಶಿಕ್ಷೆಯಾಗಿ ಕ್ಯಾಪ್ಟನ್ ತ್ರಿವಿಕ್ರಮ್ ಅವರ 'ನೇರ ನಾಮಿನೇಷನ್' ಅಧಿಕಾರ ಹಿಂಪಡೆದು ಅಸಲಿ ಆಟ ಶುರು ಮಾಡಿದ್ದಾರೆ. ಅವರನ್ನು ಹೊರತುಪಡಿಸಿ, ಸ್ಪರ್ಧಿಗಳು ಸೇರಿ ಈ ನಿರ್ಧಾರ ಕೈಗೊಳ್ಳಬೇಕಿದೆ. ಎಲಿಮಿನೇಷನ್ಗೆ ನೇರ ನಾಮಿನೇಷನ್ ಮಾಡಲು ಓರ್ವ ಜೋಡಿಯನ್ನು ಸಹಮತದಿಂದ ಆಯ್ಕೆ ಮಾಡಬೇಕಾಗಿದೆ. ಆಯ್ಕೆ ಆದವರಿಗೆ ನೇರ ನಾಮಿನೇಟ್ ಮಾಡುವ ಅವಕಾಶ ಸಿಗಲಿದೆ.
''ಧರ್ಮ- ಅನುಷಾ ನಡುವೆ ಹುಳಿ ಹಿಂಡಿದ ನೇರ ನಾಮಿನೇಷನ್!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ದೃಶ್ಯದಲ್ಲಿ, ನಾಮಿನೇಷನ್ಗೆ ಹೆಸರನ್ನು ಸೂಚಿಸಲು ಸ್ಪರ್ಧಿಗಳು ಚರ್ಚೆ ನಡೆಸಿದ್ದಾರೆ. ಕೊನೆಯಲ್ಲಿ ಆತ್ಮೀಯ ಸ್ನೇಹಿತರು ಧರ್ಮ- ಅನುಷಾ ನಡುವೆ ವಾದ ವಿವಾದ ನಡೆದೇಬಿಟ್ಟಿದೆ.